ಮ್ಯಾಚ್ ಫಿಕ್ಸಿಂಗ್ ಪ್ರಕರಣ: ಫುಟ್‌ಬಾಲ್ ಪಂದ್ಯಾವಳಿಯಲ್ಲಿ ಸದ್ದಿಲ್ಲದೆ ಆರೋಪಿಗಳಿಗಾಗಿ ಬಲೆ ಬೀಸಿದ ಸಿಸಿಬಿ

Bengaluru: ಸಿಸಿಬಿ ಅಧಿಕಾರಿಗಳು, ಭಾರತೀಯ ಫುಟ್‌ಬಾಲ್ ಪಂದ್ಯಾವಳಿಯಲ್ಲಿ ಮ್ಯಾಚ್ (Football Match fixing Case) ಫಿಕ್ಸಿಂಗ್ (Match Fixing) ನಡೆದಿದೆ ಎಂಬ ಬಗ್ಗೆ ದೂರು

ದಾಖಲಾಗುತ್ತಿದ್ದಂತೆ ಸದ್ದಿಲ್ಲದೇ ಕಾರ್ಯಾಚರಣೆ ನಡೆಸುತ್ತಿದ್ದು, ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಎಸಿಪಿ ನೇತೃತ್ವದ ವಿಶೇಷ ತಂಡ ಸೀಕ್ರೆಟ್ ಟಾಸ್ಕ್ (Secrete Task) ಆರಂಭಿಸಿದೆ.

ಖುದ್ದು ಸಿಸಿಬಿ ಡಿಸಿಪಿ ಅಬ್ದುಲ್ ಅಹದ್ (Abdul Ahad) ಅವರೇ ಟಾಸ್ಕ್ ನ (Football Match fixing Case) ಪರಿಶೀಲನೆ ನಡೆಸುತ್ತಿದ್ದಾರೆ.

ಪ್ರತಿ ಮ್ಯಾಚ್, ಪ್ರತಿ ಆಟಗಾರರ ಮೇಲೆ ಕಣ್ಣಿಟ್ಟಿದ್ದು, ಸಿಸಿಬಿ ಅಧಿಕಾರಿಗಳು ಫುಟ್ ಬಾಲ್ ಗ್ರೌಂಡ್​ನಲ್ಲಿ (Football Ground) ಬೀಡು ಬಿಟ್ಟಿದ್ದಾರೆ. ಪ್ರತಿ ಹಂತದಲ್ಲೂ ಆಗುವ ಬದಲಾವಣೆಗಳ ಬಗ್ಗೆ

ಎಚ್ಚರಿಕೆ ವಹಿಸಿದ್ದು, ದೂರಿಗೆ ಸಂಬಂಧಿಸಿದಂತೆ ಇಂಚಿಂಚೂ ಪರಿಶೀಲನೆ ನಡೆಸಿದ್ದಾರೆ. ಆರೋಪಕ್ಕೆ ಸಾಕ್ಷಿ ಸಿಕ್ಕರೆ ಆಟಗಾರರಿಗೆ ತೊಂದರೆ ಕಟ್ಟಿಟ್ಟ ಬುತ್ತಿ.

ಕರ್ನಾಟಕ ಪುಟ್ಬಾಲ್ ಅಸೋಸಿಯೇಷನ್​ನ (Karnataka Football Association) ಅಧ್ಯಕ್ಷ, ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್‌ನ ಉಪಾಧ್ಯಕ್ಷರೂ ಆಗಿರುವ ಶಾಸಕ ಎನ್.ಎ. ಹ್ಯಾರಿಸ್

(N A Harris) ಅವರು ಖುದ್ದು ದೂರು ನೀಡಿದ್ದು, ಭಾರತೀಯ ಫುಟ್‌ಬಾಲ್ ಪಂದ್ಯಾವಳಿಯಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆದಿದೆ ಎಂಬ ಆರೋಪ ಕೇಳಿ ಬಂದಿತ್ತು. ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ

ಸಿಸಿಬಿ ಅಧಿಕಾರಿಗಳು ಎಫ್​ಐಆರ್ (FIR) ದಾಖಲಿಸದೇ ಬಂದ ದೂರಿನಾಧಾರದಡಿ ತನಿಖೆ ನಡೆಸುತ್ತಿದ್ದಾರೆ.

ಸೂಪರ್ ಡಿವಿಷನ್ ಲೀಗ್ ಫುಟ್ಬಾಲ್ ಟೂರ್ನಿಯಲ್ಲಿ (Super Division League Football Turney) ಫಿಕ್ಸಿಂಗ್ ನಡೆಯುತ್ತಿದ್ದು, ಕೆಲ ಆಟಗಾರರು ಸಹ ಬುಕ್ ಆಗಿದ್ದಾರೆಂಬ ಬಗ್ಗೆ ಶಾಸಕ ಹ್ಯಾರಿಸ್

ಅನುಮಾನ ವ್ಯಕ್ತಪಡಿಸಿದ್ದರು. ಈ ಹಿನ್ನಲೆ ಸಿಕ್ರೆಟ್ ತನಿಖೆ ನಡೆಯುತ್ತಿದ್ದು, ಪ್ರಕರಣದ ಸೂಕ್ಷ್ಮತೆಯನ್ನು ಗಮನಿಸಿ ಹುಷಾರಾಗಿ ಹ್ಯಾಂಡಲ್ ಮಾಡಲಾಗುತ್ತಿದೆ.

ಫುಟ್ಬಾಲ್ ಗ್ರೌಂಡ್​ನಲ್ಲಿ ಸಿಸಿಬಿ ತಂಡ
ಫುಟ್ಬಾಲ್ ಗ್ರೌಂಡ್​ನಲ್ಲಿ ಸಿಸಿಬಿ (CCB) ಅಧಿಕಾರಿಗಳು ಬೀಡು ಬಿಟ್ಟಿದ್ದು ಪ್ರತಿ ಮ್ಯಾಚ್, ಪ್ರತಿ ಆಟಗಾರರ ಮೇಲೆ ಕಣ್ಣಿಟ್ಟಿದ್ದಾರೆ. ಪ್ರತಿ ಹಂತದಲ್ಲೂ ಆಗುವ ಬದಲಾವಣೆಗಳ ಬಗ್ಗೆ ನಿಗಾ ವಹಿಸಿದ್ದಾರೆ.

ದೂರಿಗೆ ಸಂಬಂಧಿಸಿದಂತೆ ಇಂಚಿಂಚೂ ಪರಿಶೀಲನೆ ನಡೆಸಿದ್ದು, ಆರೋಪಕ್ಕೆ ಸಾಕ್ಷಿ ಸಿಕ್ಕರೆ ಆಟಗಾರರಿಗೆ ತೊಂದರೆ ಗ್ಯಾರಂಟಿ.

ಈಗಾಗಲೇ ಆರು ಮ್ಯಾಚ್​ಗಳ ವಿಡಿಯೋ ಪರಿಶೀಲನೆ ಸಿಸಿಬಿಯಿಂದ ನಡೆದಿದ್ದು, ಡಿಸಿಪಿ (DCP) ಅವರೇ ಖುದ್ದಾಗಿ ಕೂಡ ಪರಿಶೀಲನೆ ನಡೆಸುತ್ತಿದ್ದಾರೆ. ಆಟಗಾರರ ನಡವಳಿಕೆಯನ್ನು ಸೂಕ್ಷ್ಮವಾಗಿ

ಗಮನಿಸಲಾಗುತ್ತಿದ್ದು, ಈಗಾಗಲೇ ಕೆಲವು ಆಟಗಾರರ ವಿಚಾರಣೆ ಕೂಡ ನಡೆದಿದೆ. ಈವರೆಗೂ ಆರೋಪಕ್ಕೆ ಸಂಬಂಧಿಸಿದಂತೆ ಸಾಕ್ಷಿ ಪತ್ತೆಯಾಗಿಲ್ಲ. ಆದರೇ ಆರೋಪದ ಹಿನ್ನಲೆ ಬಲವಾದ ಅಂಶಗಳು

ಇರುವ ಸಾಧ್ಯತೆ ಇದ್ದು, ಈ ಹಿನ್ನಲೆಯಲ್ಲಿ ಹಲವು ಆಯಾಮದಲ್ಲಿ ಸಿಸಿಬಿ ತನಿಖೆ ನಡೆಸುತ್ತಿದೆ.

ಇದನ್ನು ಓದಿ: ಪ್ರತಿ ಗ್ರಾಮ ಪಂಚಾಯ್ತಿಗಳಲ್ಲಿ ಡಾಟಾ ಎಂಟ್ರಿ ಆಪರೇಟರ್ ನೇಮಕ : ಇಲ್ಲಿದೆ ಸಂಪೂರ್ಣ ಮಾಹಿತಿ

Exit mobile version