ಅಶಿಸ್ತಿನ ವಿದ್ಯಾರ್ಥಿ ; ವಿಶ್ವ ಗೆದ್ದ ಫುಟ್‌ಬಾಲ್ ಮಾಂತ್ರಿಕನ ಕಥೆ

Qatar : ಕೈಲಿಯನ್ ಎಂಬಪ್ಪೆ ಲೊಟಿನ್ ಒಬ್ಬ ಫ್ರೆಂಚ್ ವೃತ್ತಿಪರ ಫುಟ್‌ಬಾಲ್ (football player Kylian Mbappe) ಆಟಗಾರ.

ಬಹಳ ಚತುರ ಹಾಗೂ ಅತೀ ಹೆಚ್ಚು ಸಂಭಾವನೆ ಪಡೆಯುವ ಪುಟ್ಬಾಲ್ ಆಟಗಾರರಲ್ಲಿ ಒಬ್ಬರಾದ ಇವರು ಡಿಸೆಂಬರ್-20 -1998 ರಲ್ಲಿ ಪ್ಯಾರಿಸ್‌ನ 19 ನೇ ಅರೋಂಡಿಸ್ಮೆಂಟ್‌ನಲ್ಲಿ ಜನಿಸಿದರು ಇದು ಪ್ಯಾರಿಸ್‌ನ ಮಧ್ಯಭಾಗದಿಂದ ಸುಮಾರು 10.9 km ದೂರದಲ್ಲಿರುವ ಬಾಂಡಿಯಲ್ಲಿದೆ.

ಕೈಲಿಯನ್ ಅವರ ತಂದೆ ವಿಲ್ಫ್ರೈಡ್ (football player Kylian Mbappe) ಮೂಲತಃ ಕ್ಯಾಮರೂನ್‌ನವರು ಇವರು ಸ್ವತಃ ಎಂಬಪ್ಪೆ ಅವರಿಗೆ ಫುಟ್‌ಬಾಲ್ ತರಬೇತುದಾರರು ಆಗಿದ್ದರು ಹಾಗೂ ಇವರ ತಾಯಿ ಫೈಜಾ ಲಾಮರಿ.

ಇವರ ಇಬ್ಬರು ಕಿರಿಯ ಸಹೋದರರಾದ ಈಥಾನ್ ಮತ್ತು ಜಿರೆಸ್ ಕೆಂಬೊ ಎಕೊಕೊ ವೃತ್ತಿಪರ ಫುಟ್‌ಬಾಲ್ ಆಟಗಾರರಾಗಿದ್ದಾರೆ. ಕೈಲಿಯನ್ ರವರ ಪ್ರಾಥಮಿಕ ಶಿಕ್ಷಣ ಬಾಂಡಿಯಲ್ಲಿರುವ ಖಾಸಗಿ ಕ್ಯಾಥೋಲಿಕ್ ಶಾಲೆಯಲ್ಲಿ ಮುಗಿಸಿದರು,

ಜೊತೆಗೆ ಶೈಕ್ಷಣಿಕವಾಗಿ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದರು ಕೂಡ ಅಶಿಸ್ತಿನ ವಿದ್ಯಾರ್ಥಿ ಎಂದು ಶಾಲಾ ದಿನಗಳಲ್ಲಿ ಪರಿಗಣಿಸಲ್ಪಟ್ಟಿದ್ದರು.

ಇದನ್ನೂ ನೋಡಿ : https://fb.watch/hsbdQcuBe0/ COVER STORY | ಪ್ಲಾಸ್ಟಿಕ್‌ ಬ್ಯಾನ್‌ ಅನ್ನೋ Joke ! Plastic ban has become joke in Karnataka.

ವರ್ಷಗಳು ಕಳೆಯುತ್ತಿದ್ದಂತೆ ಅವರಿಗೆ ಫುಟ್ಬಾಲ್ ನ ಮೇಲೆ ಆಸಕ್ತಿ ಹೆಚ್ಚಾಯಿತು. ಜಿನೆಡಿನ್ ಜಿಡಾನೆ, ರೊನಾಲ್ಡೊ ನಜಾರಿಯೊ ಮತ್ತು ಕ್ರಿಸ್ಟಿಯಾನೊ ರೊನಾಲ್ಡೊ ಇವರೆಲ್ಲ ಎಂಬಪ್ಪೆ ಅವರಿಗೆ ಫುಟ್ಬಾಲ್ ನ ಆರಾಧ್ಯ ದೈವಗಳಾಗಿದ್ದರು.

ಇವರ ವೃತ್ತಿಪರ ಜೀವನ ಇಲ್ಲಿಂದ ಪ್ರಾರಂಭವಾಗುತ್ತದೆ, 2ನೇ ಡಿಸೆಂಬರ್ 2015 ರಂದು ಕೈಲಿಯನ್ ತನ್ನ 16 ನೇ ವಯಸ್ಸಿನಲ್ಲಿ ಎಸ್.ಎಮ್ ಕೇನ್ ವಿರುದ್ಧದ ಲಿಗ್-1 ಪಂದ್ಯದಲ್ಲಿ ಮೊನಾಕೊ (Monaco) B ತಂಡಕ್ಕಾಗಿ ಆಡುವ ಮೂಲಕ ತನ್ನ ಹಿರಿಯ ಚೊಚ್ಚಲ ಪಂದ್ಯ ಗೆದ್ದು, ಮೊನಾಕೊದ ಕಿರಿಯ ತಂಡದ ಆಟಗಾರರಾದರು.

ಇದನ್ನೂ ಓದಿ : https://vijayatimes.com/karavali-kambala/

ನಂತರ ಫೆಬ್ರವರಿ 20, 2016 ರಲ್ಲಿ ತಮ್ಮ ಮೊದಲ ಗೋಲು ಗಳಿಸಿದಾಗ ಮೊನಾಕೊದ ಅತ್ಯಂತ ಕಿರಿಯ ಗೋಲ್‌ಸ್ಕೋರರ್ ಎಂಬ ದಾಖಲೆ ಬರೆದು, ಮೊನಾಕೊದಿಂದ ಇನ್ನೂ ಮೂರು ವರ್ಷಗಳ ಕಾಲ ಸಹಿ ಮಾಡಿದರು.

ಡಿಸೆಂಬರ್ 14, 2016 ರಂದು, ಅವರು ‘ಕೂಪೆ ಡೆ ಲಾ ಲಿಗ್ಯೂನಲ್ಲಿ ಸ್ಟೇಡ್ ರೆನೈಸ್’ ವಿರುದ್ಧದ ಪಂದ್ಯದಲ್ಲಿ ಮೊನಾಕೊವನ್ನು ಗೆಲ್ಲಿಸಿದರು, ನಂತರ 11 ಫೆಬ್ರವರಿ 2017 ರಂದು ಮತ್ತೊಮ್ಮೆ ತಮ್ಮ ತಂಡಕ್ಕೆ ಸಹಾಯ ಮಾಡುವ ಮೂಲಕ ಲಿಗ್ 1 ​​ರಲ್ಲಿ ಹ್ಯಾಟ್ರಿಕ್ ಬಾರಿಸಿದರು.

ಫುಟ್ಬಾಲ್ ಕ್ಲಬ್ ಡಿ ಮೆಟ್ಜ್ ವಿರುದ್ಧ ಕೂಡ ಜಯ ಸಾಧಿಸಿದರು. 2005 ರಲ್ಲಿ ಜೆರೆಮಿ ಮೆನೆಜ್ ನಂತರ ಲಿಗ್ 1 ​​ನಲ್ಲಿ ಹ್ಯಾಟ್ರಿಕ್ ಗಳಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಜೊತೆಗೆ ಇವರು ಲಿಗ್-1 ​​ಕ್ಲಬ್ ಪ್ಯಾರಿಸ್ ಸೇಂಟ್-ಜರ್ಮೈನ್ ಮತ್ತು ಫ್ರಾನ್ಸ್ ರಾಷ್ಟ್ರೀಯ ತಂಡಕ್ಕೆ ಫಾರ್ವರ್ಡ್ ಆಗಿ ಆಡುತ್ತಿದ್ದಾರೆ.

ಕೈಲಿಯನ್ ಎಂಬಪ್ಪೆ ಪ್ರಶಸ್ತಿಗಳು ಮತ್ತು ಸಾಧನೆಗಳು

ಕೈಲಿಯನ್ ಎಂಬಪ್ಪೆಗೆ ಸಂದ ಗೌರವಗಳು

ಇದನ್ನೂ ನೋಡಿ : https://fb.watch/hrNNhIGXmH/ ಬ್ಯಾಂಕ್ ಲಾಕರ್ ಚಿನ್ನಮಾಯ! Bank locker fraud!

ಹೀಗೆ ಹಲವಾರು ಪ್ರಶಸ್ತಿ ಮತ್ತು ಗೌರವಗಳನ್ನು ಅತೀ ಚಿಕ್ಕ ವಯಸ್ಸಿನಲ್ಲೇ ತನ್ನ ಮುಡಿಗೇರಿಸಿಕೊಂಡಿರುವ ಕೈಲಿಯನ್ ಅವರು ತಮ್ಮ ಫ್ರಾನ್ಸ್ ತಂಡದಿಂದ ಅರ್ಜೆಂಟೈನಾ (Argentina) ವಿರುದ್ಧ ಸೆಮಿಫೈನಲ್ನಲ್ಲಿ ಸೆಣಸಾಡಲಿದೆ.
Exit mobile version