Hyderabad: ಪಂಚರಾಜ್ಯಗಳ ಚುನಾವಣೆಯಲ್ಲಿ ಗೆಲ್ಲಲೇಬೇಕೆಂಬ ಹಠಕ್ಕೆ ಬಿದ್ದಿರುವ ಕಾಂಗ್ರೆಸ್ (Free guarantees in Telangana) ಇದೀಗ ಕರ್ನಾಟಕದಲ್ಲಿ ಕಮಾಲ್ ಮಾಡಿದ್ದ ಗ್ಯಾರಂಟಿ
(Guarantee) ಅಸ್ತ್ರವನ್ನು ಇದೀಗ ತೆಲಂಗಾಣದಲ್ಲಿಯೂ (Telangana) ಪ್ರಯೋಗಿಸಲು ಮುಂದಾಗಿದೆ. ಈ ಮೂಲಕ ನವೆಂಬರ್ 30 ರಂದು ನಡೆಯುವ ತೆಲಂಗಾಣದ ವಿಧಾನಸಭಾ
ಚುನಾವಣೆಗೆ ಭರ್ಜರಿ (Free guarantees in Telangana) ತಯಾರಿ ಆರಂಭಿಸಿದೆ.
ಈಗಾಗಲೇ 6 ಉಚಿತ ಗ್ಯಾರಂಟಿ (Guarantee) ಘೋಷಿಸಿರುವ ಕಾಂಗ್ರೆಸ್ ಪಕ್ಷ ಇದೀಗ ಮದುವೆಗೆ 10 ಗ್ರಾಂ ಚಿನ್ನ ಮತ್ತು ವಿದ್ಯಾರ್ಥಿಗಳಿಗೆ ಉಚಿತ ಇಂಟರ್ನೆಟ್ (Internet) ನೀಡುವ
ಗ್ಯಾರಂಟಿಗಳನ್ನು ಪ್ರಣಾಳಿಕೆಯಲ್ಲಿ ಸೇರಿಸಲು ಮುಂದಾಗಿದೆ ಎನ್ನಲಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಡಿ ಶ್ರೀಧರ್ ಬಾಬು
(Shridhar Babu), ವಧುವಿಗೆ ‘ಮಹಾಲಕ್ಷ್ಮೀ’ ಯೋಜನೆಯಡಿ 1 ಲಕ್ಷ ರೂಪಾಯಿ ನಗದು ಮತ್ತು 10 ಗ್ರಾಂ ಚಿನ್ನವನ್ನು ಕೊಡಲಾಗುವುದು ಎಂದು ಘೋಷಿಸಿದ್ದಾರೆ. ಈ ಮೂಲಕ ಬಿಆರ್ಎಸ್
(BRS) ಸರ್ಕಾರದ ಕಲ್ಯಾಣ ಲಕ್ಷ್ಮೀ ಯೋಜನೆಗೆ ಸ್ಪರ್ಧೆಯೊಡ್ಡಲು ಕಾಂಗ್ರೆಸ್ ಮುಂದಾಗಿದೆ.
ಪ್ರಸ್ತುತ 10ಗ್ರಾಂ ಚಿನ್ನದ ಬೆಲೆ 50 ಸಾವಿರ ರೂಪಾಯಿ ಇದ್ದು, ಇದರೊಂದಿಗೆ ಒಂದು ಲಕ್ಷ ರೂಪಾಯಿ ನಗದು ನೀಡುವುದರಿಂದ ಈ ಯೋಜನೆಯ ಮೊತ್ತ ಒಂದೂವರೆ ಲಕ್ಷ ರೂಪಾಯಿಯಾಗುವ
ಸಾಧ್ಯತೆ ಇದೆ. ಇನ್ನು ಕಾಂಗ್ರೆಸ್ (Congress) ಘೋಷಿಸಲು ಮುಂದಾಗಿರುವ ಈ ಯೋಜನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಬಿಆರ್ಎಸ್ ಪಕ್ಷ, ಕರ್ನಾಟಕದ (Karnataka) ಕಾಂಗ್ರೆಸ್
ಸರ್ಕಾರವು ಚುನಾವಣೆ ವೇಳೆ ನೀಡಿದ್ದ ಭರವಸೆಗಳನ್ನು ಜಾರಿಗೆ ತರಲು ಹೆಣಗಾಡುತ್ತಿದೆ. ಕಾಂಗ್ರೆಸ್ ಕೇವಲ ಭರವಸೆ ನೀಡುತ್ತದೆ. ಆದರೆ ಅವುಗಳನ್ನು ಜಾರಿಗೆ ತರುವುದಿಲ್ಲ ಎಂದು ಟೀಕಿಸಿದೆ.
ಈಗಾಗಲೇ ತೆಲಂಗಾಣದಲ್ಲಿ ಕಾಂಗ್ರೆಸ್ ನೀಡಿರುವ 6 ಗ್ಯಾರಂಟಿಗಳು :
- ಮಹಾಲಕ್ಷ್ಮೀ ಯೋಜನೆಯಡಿ ಮಹಿಳೆಯರಿಗೆ ಮಾಸಿಕ 2,500 ರೂ.ಗಳು
- ಗ್ಯಾಸ್ ಸಿಲಿಂಡರ್ಗೆ (Gas Cylinder) 500 ರೂ.ಗಳು
- ಸರ್ಕಾರಿ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ
- ರೈತರಿಗೆ ವಾರ್ಷಿಕ 15,000 ರೂ.ಗಳು
- ಕೃಷಿ ಕಾರ್ಮಿಕರಿಗೆ ವಾರ್ಷಿಕ 12 ಸಾವಿರ ರೂ. ಮತ್ತು ಭತ್ತದ ಬೆಳೆಗೆ 500 ರೂ. ಬೋನಸ್ (Bonus)
- ಗೃಹ ಜ್ಯೋತಿ ಯೋಜನೆಯಡಿ 200 ಯೂನಿಟ್ (Unit) ಉಚಿತ ವಿದ್ಯುತ್. ಇದರೊಂದಿಗೆ ಇಂದಿರಮ್ಮ ಇಂಟ್ಲು, ಯುವ ವಿಕಾಸಂ, ಚೇಯುತ ಎಂಬ ಗ್ಯಾರಂಟಿಗಳನ್ನು ಕಾಂಗ್ರೆಸ್ ಈಗಾಗಲೇ ಘೋಷಿಸಿದೆ.
ಇದನ್ನು ಓದಿ: ರೇಷನ್ ಕಾರ್ಡ್ ತಿದ್ದುಪಡಿ ಅವಧಿ ವಿಸ್ತರಣೆ; ಯಾವ ಜಿಲ್ಲೆಯಲ್ಲಿ ಯಾವಾಗ ತಿದ್ದುಪಡಿಗೆ ಅವಕಾಶ..? ಇಲ್ಲಿದೆ ಮಾಹಿತಿ