Bengaluru:ವಾಹನ ಸವಾರರಿಗೆ ಒಂದಲ್ಲ ಒಂದು ಟೆನ್ಷನ್ ಎದುರಾಗುತ್ತಿದೆ. ಮೊದಲಿಗೆ ಎಚ್ಎಸ್ಆರ್ಪಿ (HSRP) ನಂಬರ್ ಪ್ಲೇಟ್ ಅಳವಡಿಕೆ ವಿಚಾರದಲ್ಲಿ ಫೆಬ್ರವರಿ 17ರ ಡೆಡ್ಲೈನ್ ನೀಡಿದ್ದು ಭಾರಿ ಗೊಂದಲ ಸೃಷ್ಟಿ ಮಾಡಿತ್ತು. ಈಗ ಮತ್ತೆ 3 ತಿಂಗಳು ಮುಂದಕ್ಕೆ ಹೋಗಿದೆ ಆ ಡೆಡ್ಲೈನ್. ಇಷ್ಟೆಲ್ಲದರ ನಡುವೆ HSRP ನಂಬರ್ ಪ್ಲೇಟ್ ಅಳವಡಿಕೆ ವಿಚಾರದಲ್ಲಿ, ಆನ್ಲೈನ್ ಮೂಲಕ ವಂಚನೆ ನಡೆಯುತ್ತಿದೆ.
ಈ ಮೊದಲು ಫೆ.17 ಕೊನೆಯ ದಿನವಾಗಿದ್ದ ಕಾರಣ HSRP ನಂಬರ್ ಪ್ಲೇಟ್ ಅಳಡಿಕೆಗೆ ಮುಗಿಬಿದ್ದ ಜನರು ಟೆಕ್ನಿಕಲ್ ಸಮಸ್ಯೆಯಿಂದಾಗಿ, ಶುಲ್ಕ ಪಾವತಿ ನಂತರ ಕೈಕೊಡುತ್ತಿರುವ ಪೋರ್ಟಲ್ಗಳು ಜನರ ಪರದಾಟ ಸರ್ವರ್ ಮೇಲೆ ಒತ್ತಡ ಹೆಚ್ಚಿ ಪೋರ್ಟಲ್ಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿರಲಿಲ್ಲ .ಮಾಲೀಕರು ಈ ಪೋರ್ಟಲ್ಗಳ ಮೂಲಕ ನೋಂದಣಿಗೆ ಪ್ರಯತ್ನಿಸಿದಾಗ ಹಲವರಿಗೆ ಕಂಪನಿ ಹೆಸರು, ವಾಹನದ ಮಾದರಿ ಇನ್ನಿತರ ವಿವರಗಳು ಹೊಂದಾಣಿಕೆಯಾಗುತ್ತಿಲ್ಲ.
ಮತ್ತೆ ಕೆಲವರು ವಾಹನದ ನೋಂದಣಿ ಸಂಖ್ಯೆ, ಎಂಜಿನ್ ಸಂಖ್ಯೆ, ಚಾರ್ಸಿ ಸಂಖ್ಯೆಯ ವಿವರ ಹಾಕಿದರೆ ಅಂತಹ ವಾಹನವೇ ಇಲ್ಲವೆಂದು ಪೋರ್ಟಲ್ಗಳು ತೋರಿಸುತ್ತಿತ್ತು.ಹಲವು ವಾಹನಗಳ ಮಾಲೀಕರ ಮತ್ತು ಕಂಪನಿಯ ಹೆಸರು ಕೂಡ ಬದಲಾಗ್ತಿದೆಯಂತೆ. ಹೀಗಾಗಿ ಕೆಲವರು ನೊಂದಣಿಗೆ ಪರದಾಡುತ್ತಿದ್ದರು ಅದನ್ನೇ ಬಂಡವಾಳ ಮಾಡಿಕೊಂಡು ಹಲವು ನಕಲಿ ಸೈಟ್ ಗಳು ಆನಲೈನ್ ಅಲ್ಲಿ ಹುಟ್ಟಿಕೊಂಡಿದೆ.
ಕೆಲ ಕಿಡಿಗೇಡಿಗಳು ನಕಲಿ ಕ್ಯೂ ಆರ್ ಕೋಡ್ (QR Code) ಲಿಂಕ್ಗಳನ್ನು ಆನ್ಲೈನ್ನಲ್ಲಿ ಹಾಕಿ ಜನರಿಗೆ ಮೋಸ ಮಾಡಲು ಬಲೆ ಬೀಸಿದ್ದಾರೆ. ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ಗೆ ಅಪ್ಲೈ ಮಾಡುವ ಮುನ್ನ ಇರಲಿ ಎಚ್ಚರ. ಆನ್ಲೈನ್ನಲ್ಲಿ ನಕಲಿ ಕ್ಯೂ ಆರ್ ಕೋಡ್ ಲಿಂಕ್ಗಳ ಹಾವಳಿ ಹೆಚ್ಚಾಗಿದೆ. ಅಪ್ಪಿ ತಪ್ಪಿ ನಕಲಿ ಕ್ಯೂ ಆರ್ ಕೋಡ್ ಕ್ಲಿಕ್ ಮಾಡಿದ್ರೆ ನಿಮ್ಮ ಖಾತೆಯಲ್ಲಿನ ಅಷ್ಟು ಹಣ ಮಾಯವಾಗುತ್ತೆ.ಇದೀಗ ವ್ಯಕ್ತಿಯೋರ್ವ ಈ ಮೋಸದ ಜಾಲದ ಬಗ್ಗೆ ಎಕ್ಸ್ ಮೂಲಕ ನಗರ ಪೊಲೀಸರಿಗೆ ದೂರು ನೀಡಿದ್ದಾನೆ. ಕ್ಯೂ ಆರ್ ಕೋಡ್ ಸಮೇತ ಮಾಹಿತಿ ಒದಗಿಸಿದ್ದಾನೆ. ಹಾಗಾಗಿ ಸೈಬರ್ ವಂಚಕರ (Cyber Crime) ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಪೊಲೀಸರು ಸೂಚಿಸಿದ್ದಾರೆ.