ISIS ನಿಂದ ಗೌತಮ್ ಗಂಭೀರ್‌ಗೆ ಜೀವ ಬೆದರಿಕೆ

ನವದೆಹಲಿ ನ 25 : ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಹಾಗೂ ಹಾಲಿ ಸಂಸದ ಗೌತಮ್ ಗಂಭೀರ್’ಗೆ ಎರಡು ಬಾರಿ ಇ-ಮೇಲ್’ ಮೂಲಕ ಜೀವ ಬೆದರಿಕೆ ಒಡ್ಡಲಾಗಿದೆ ANI ಸುದ್ದಿ ಸಂಸ್ಥೆ ವರದಿ ಮಾಡಿದೆ.’ISIS ಕಾಶ್ಮೀರ್’ ಉಗ್ರ ಸಂಘಟನೆ ಈ ಜೀವ ಬೆದರಿಕೆಯೊಡ್ಡಿದೆ ಎನ್ನಲಾಗಿದ್ದು, ಗೌತಮ್ ಗಂಭೀರ್ ಅವರ ಅಧಿಕೃತ ಇ-ಮೇಲ್ ಐಡಿಗೆ ಜೀವ ಬೆದರಿಕೆ ಸಂದೇಶ ಕಳುಹಿಸಲಾಗಿದೆ.

ಈ ಕುರಿತು ಟ್ವಿಟ್ ಮಾಡಿರುವ ಖಾಸಗಿ ವಾಹಿನಿ, BJP ಸಂಸದ ಹಾಗೂ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್’ಗೆ ISIS ಕಾಶ್ಮೀರದಿಂದ ಎರಡನೇ ಬಾರಿ ಕೊಲೆ ಬೆದರಿಕೆ ಬಂದಿದೆ. ಗಂಬೀರ್ ಅವರ ನಿವಾಸದ ಹೊರಗಿನ ದೃಶ್ಯಗಳನ್ನು ಹೊಂದಿರುವ ಬೆದರಿಕೆಯ ಇ-ಮೇಲ್’ನೊಂದಿಗೆ ಲಗತ್ತಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿರುವುದಾಗಿ ಟ್ವಿಟ್’ನಲ್ಲಿ ತಿಳಿಸಲಾಗಿದೆ.

ತಮಗೆ ಜೀವ ಬೆದರಿಕೆ ಬಂದಿರುವ ಕುರಿತು ದೆಹಲಿ ಪೊಲೀಸರಿಗೆ ದೂರು ನೀಡಿರುವ ಗೌತಮ್ ಗಂಭೀರ್, ಹೆಚ್ಚುವರಿ ಭದ್ರತೆ ಒದಗಿಸುವಂತೆ ಮನವಿ ಮಾಡಿದ್ದಾರೆ. ಇದರ ಬೆನ್ನಲ್ಲೇ ಗೌತಮ್ ಗಂಭೀರ್ ಅವರ ನಿವಾಸಕ್ಕೆ ಬಿಗಿ ಭದ್ರತೆ ಒದಗಿಸಲಾಗಿದ್ದು, ಈ ಕುರಿತು ತನಿಖೆ ನಡೆಸಲಾಗುತ್ತಿದೆ.ಎಂದು ಡೆಲ್ಲಿ ಸೆಂಟ್ರಲ್ ಡಿಸಿಪಿ ಶ್ವೇತಾ ಚೌಹಾಣ್ ಹೇಳಿದ್ದಾರೆ.

“ಮಂಗಳವಾರ ಸಂಜೆ ಗೌತಮ್ ಗಂಭೀರ್ ಅವರ ಅಧಿಕೃತ ಇ-ಮೇಲ್ ಐಡಿಗೆ ಐಸಿಸ್ ಕಾಶ್ಮೀರ್‌ನಿಂದ ಮೇಲ್ ಬಂದಿದೆ. ಈ ಮೇಲ್ ಸಂದೇಶದಲ್ಲಿ ಸಂಸದರು ಹಾಗೂ ಅವರ ಕುಟುಂಬಕ್ಕೆ ಜೀವ ಬೆದರಿಕೆಯನ್ನು ಒಡ್ಡಲಾಗಿದೆ. ಹೀಗಾಗಿ ಈ ಬಗ್ಗೆ ಗಮನಹರಿಸಿ ಇದಕ್ಕೆ ಪೂರಕವಾದ ಭದ್ರತೆಯನ್ನು ನೀಡಬೇಕಾಗಿ ಮನವಿ ಮಾಡಿಕೊಳ್ಳುತ್ತಿದ್ದೇವೆ” ಗೌತಮ್ ಗಂಭೀರ್ ಅವರ ಕಾರ್ಯದರ್ಶಿ ಗೌರವ್ ಅರೋರಾ ಡೆಲ್ಲಿ ಸೆಂಟ್ರಲ್ ಡಿಸ್ಟ್ರಿಕ್‌ನ ಡಿಸಿಪಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

Exit mobile version