ಭಾರತದ GDP ಬೆಳವಣಿಗೆ ಶೇ.13.5% ರಷ್ಟು ಏರಿಕೆ! : NSO

New Delhi : ಭಾರತದ(India) ಒಟ್ಟು ದೇಶೀಯ ಉತ್ಪನ್ನ ಬೆಳವಣಿಗೆ ದರ ಭಾರೀ ಏರಿಕೆಯಾಗಿದ್ದು, ಭಾರತದ ಜಿಡಿಪಿ(GDP) ಬೆಳವಣಿಗೆ ಶೇಕಡಾ 13.5% ರಷ್ಟು ಏರಿಕೆಯಾಗಿದೆ ಎಂದು ವರದಿಯೊಂದು ತಿಳಿಸಿದೆ.

ಸರ್ಕಾರಿ ಸಂಸ್ಥೆ ರಾಷ್ಟ್ರೀಯ ಅಂಕಿ ಅಂಶ ಸಂಸ್ಥೆಯು ವರದಿ ಬಿಡುಗಡೆ ಮಾಡಿದ್ದು, ಭಾರತದ ಆರ್ಥಿಕತೆಯು ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಅಂದರೆ ಏಪ್ರಿಲ್-ಜೂನ್‌ ಅವಧಿಯಲ್ಲಿ  ಶೇಕಡಾ 13.5ರ ಬೆಳವಣಿಗೆ ದಾಖಲಿಸಿದೆ.

ಇದಕ್ಕೂ ಮುನ್ನ  ಆರ್‌ಬಿಐ(RBI) ಭಾರತ ಅರ್ಥವ್ಯವಸ್ಥೆಯ ಮೊದಲ ತ್ರೈಮಾಸಿಕ ಜಿಡಿಪಿ ಬೆಳವಣಿಗೆ 16.2% ರಷ್ಟಿರಲಿದೆ ಎಂದು ಅಂದಾಜಿಸಿತ್ತು. ಇನ್ನು ಹಲವು ಆರ್ಥಿಕ ಸಂಸ್ಥೆಗಳು ಪ್ರಸಕ್ತ ವರ್ಷ ಭಾರತದ ಜಿಡಿಪಿ ಬೆಳವಣಿಗೆ ದರ ಅತ್ಯುತ್ತಮ ಪ್ರಗತಿ ಸಾಧಿಸಲಿವೆ ಎಂದು ಅಂದಾಜಿಸಿದ್ದವು. ನಿರೀಕ್ಷೆಯಂತೆ ಭಾರತ ಎಲ್ಲ ಕ್ಷೇತ್ರಗಳಲ್ಲೂ ಉತ್ತಮ ಸಾಧನೆ ಮಾಡಿದೆ.

ಇನ್ನು ಭಾರತೀಯ ಸ್ಟೇಟ್​ ಬ್ಯಾಂಕ್(State Bank Of India)​ ಭಾರತದ ಜಿಡಿಪಿ ಬೆಳವಣಿಗೆ ಶೇಕಡಾ 15.5 ಇರಬಹುದು ಎಂದು ಎಂದು ತಿಳಿಸಿತ್ತು. ಆದರೆ ಭಾರತೀಯ ಸ್ಟೇಟ್​ ಬ್ಯಾಂಕ್ ತಜ್ಞರ ಸಮಿತಿ ಅಂದಾಜಿಸಿದಕ್ಕಿಂತ ಸ್ವಲ್ಪ ಕಡಿಮೆ ಪ್ರಗತಿ ಸಾಧಿಸಿದ್ದರು, ಒಟ್ಟಾರೆ ಬೆಳವಣಿಗೆ ತೃಪ್ತಿಕರವಾಗಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.  

ಮೊದಲ ತ್ರೈಮಾಸಿಕ ಅವಧಿಯಲ್ಲಿ ಚೀನಾ(China) ಶೇಕಡಾ 0.4ರ ಜಿಡಿಪಿ ಪ್ರಗತಿ ದಾಖಲಿಸಿದ್ದು, ಭಾರತ ಮೊದಲ ತ್ರೈಮಾಸಿಕ ಅವಧಿಯಲ್ಲಿ ಭಾರೀ ಬೆಳವಣಿಗೆ  ಕಂಡಿದೆ.

ಕ್ಷೇತ್ರವಾರು ಪ್ರಗತಿ :

Exit mobile version