ಪ್ರವಾಸಕ್ಕೆ ಬಂದಿದ್ದ ಬಾಲಕಿಯ ಕಿಡ್ನಾಪ್‌ : 2 ಬಾರಿ ವಧುವಾಗಿ ಮಾರಾಟ ಮಾಡಿ ದೈಹಿಕ ಶೋಷಣೆ

Kota (Rajasthan) : ಹೆತ್ತವರೇ ಎಚ್ಚರ! ನಿಮ್ಮ ಮಕ್ಕಳ ಬಗ್ಗೆ ಮೈತುಂಬಾ ಕಣ್ಣಾಗಿಸಿಕೊಳ್ಳಬೇಕು. ಮಕ್ಕಳನ್ನು ಕಿಡ್ನಾಪ್‌ ಮಾಡುವ ಕೆಲ ದುಷ್ಕೃರ್ಮಿಗಳ ತಂಡ ಸಕ್ರೀಯವಾಗಿದೆ. ಇದಕ್ಕೆ ಇತ್ತೀಚೆಗೆ ರಾಜಸ್ಥಾನದಲ್ಲಿ ನಡೆದ (Girl kidnapped in Rajasthan) ಘಟನೆಯೇ ಸಾಕ್ಷಿ.

10ನೇ ತರಗತಿಯ ಪರೀಕ್ಷೆಗಳನ್ನು ಮುಗಿಸಿ ಪ್ರವಾಸಕ್ಕೆ ಹೊರಟ್ಟಿದ್ದ 17 ವರ್ಷದ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಅಪಹರಿಸಿ ಎರಡು ಬಾರಿ ವಧುವಿನಂತೆ ಮಾರಾಟ ಮಾಡಿ ಬಲವಂತವಾಗಿ ಮದುವೆ ಮಾಡಿಸಿ,

ಲೈಂಗಿಕವಾಗಿ ಶೋಷಿಸಿದ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ.

ಬಾಲಕಿಯ ಇಚ್ಛೆಗೆ ವಿರುದ್ಧವಾಗಿ ಬಲವಂತವಾಗಿ ಮನೆಯೊಂದರಲ್ಲಿ ತಿಂಗಳುಗಟ್ಟಲೆ ಕೂಡಿ ಹಾಕಲಾಗಿತ್ತು.

ಆಗ ಬಾಲಕಿ ಆತ್ಮಹತ್ಯೆಗೆ ಕೂಡ ಯತ್ನಿಸಿದ್ದಳು. ಆ ನಂತರ, ಕೋಟಾದಲ್ಲಿ ರೈಲ್ವೆ ಪೊಲೀಸರಿಗೆ ಆಕೆ ಸಿಕ್ಕಿದ್ದಾಳೆ ಎಂದು ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಕನೀಜ್ ಫಾತಿಮಾ (Child Welfare Committee Chairperson Kaneez Fatima) ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : https://vijayatimes.com/new-order-from-punjab-govt/

ಪ್ರಕಾರಣದ ಹಿನ್ನೆಲೆ :

“ಐದು ತಿಂಗಳ ಹಿಂದೆ 10 ನೇ ತರಗತಿ ಪರೀಕ್ಷೆಗಳನ್ನು ಮುಗಿಸಿ ಮಧ್ಯಪ್ರದೇಶದ (Madhya Pradesh) ಕಟ್ನಿಯಲ್ಲಿರುವ ತನ್ನ ಮನೆಯಿಂದ ಬಾಲಕಿ ಪ್ರವಾಸಕ್ಕೆಂದು ಹೊರಟಿದ್ದಳು.

ಕಟ್ನಿ ರೈಲು ನಿಲ್ದಾಣದಲ್ಲಿ ಬಾಲಕಿ ರೈಲಿಗಾಗಿ ಕಾಯುತ್ತಿದ್ದಳು, ಆ ಸಮಯದಲ್ಲಿ ಕೆಲವು ಯುವಕರು ಅವಳ ಜೊತೆಗೆ ಸ್ನೇಹ ಬೆಳೆಸಿದರು.

ನಂತರ ಅಲ್ಲೇ ಹತ್ತಿರದಲ್ಲಿರುವ ಉದ್ಯಾನವನಕ್ಕೆ ಕರೆದೋಯ್ದು ಅಲ್ಲಿ ಆಕೆಗೆ ಆಹಾರ ಮತ್ತು ಪಾನೀಯಗಳನ್ನು (Girl kidnapped in Rajasthan) ನೀಡಿದರು.

ಅದನ್ನು ಸೇವಿಸಿದ ಬಳಿಕ ಬಾಲಕಿ ಪ್ರಜ್ಞಾಹೀನಳಾಗಿದ್ದಳು. ನಂತರ ಬಾಲಕಿಗೆ ಪ್ರಜ್ಞೆ ಬಂದಾಗ, ಆಕೆ ಉಜ್ಜಯಿನಿಯಲ್ಲಿರುವ ಹೋಟೆಲ್ ಒಂದರಲ್ಲಿದ್ದಳು

ಆ ಕೊಠಡಿಯಲ್ಲಿ ಇಬ್ಬರು ಪುರುಷರು ಮತ್ತು ಮಹಿಳೆ ಕಾಣಿಸಿಕೊಂಡಿದ್ದರು. ಆ ನಂತರ ಆ ದುರುಳರು ಬೆದರಿಕೆ ಹಾಕಿ 27 ವರ್ಷದ ಯುವಕನನ್ನು ಮದುವೆಯಾಗುವಂತೆ ಬಾಲಕಿಗೆ ಒತ್ತಾಯಿಸಿದರು.

ನಂತರ ಆ ಯುವಕನೊಂದಿಗೆ ಬಲವಂತವಾಗಿ ಮದುವೆ ಮಾಡಿಸಿದರು,ಮದುವೆಯಾದ ನಂತರ ಆ ವ್ಯಕ್ತಿಯು,

“ನಾನು ನಿನ್ನನ್ನು 2 ಲಕ್ಷ ರೂ.ಗೆ ಖರೀದಿಸಿಸಿದ್ದೇನೆ ಎಂದು ಬಾಲಕಿಗೆ ತಿಳಿಸಿದ್ದಾನೆ”ಎಂದು ಸಂತ್ರಸ್ತೆ ಹೇಳಿದ್ದಾರೆ.

ನಾಲ್ಕು ತಿಂಗಳ ನಂತರ ಮದುವೆಯಾದ ಆ ಯುವಕನು ಆಕಸ್ಮಿಕವಾಗಿ ಕ್ರಿಮಿನಾಶಕ ಸೇವಿಸಿ ಮೃತಪಟ್ಟಿದ್ದಾನೆ ಆದರೆ ,

ಆತನ ಕುಟುಂಬಸ್ಥರು ಬಾಲಕಿಯನ್ನು ಮದುವೆಯ ನೆಪದಲ್ಲಿ ಕೋಟಾ ಜಿಲ್ಲೆಯ ಕನ್ವಾಸ್ ಪ್ರದೇಶದಲ್ಲಿ (Kota District Kanwas Area) ಇನ್ನೊಬ್ಬ ವ್ಯಕ್ತಿಗೆ 3 ಲಕ್ಷಕ್ಕೆ ಮಾರಾಟ ಮಾಡಿದ್ದಾರೆ.

ಆ ಬಾಲಕಿಯು ದೈಹಿಕ ಶೋಷಣೆಯನ್ನು ಸಹಿಸಲಾಗದೇ ನಂತರ ಆತ್ಮಹತ್ಯೆಗೆ ಪ್ರಯತ್ನಿಸಿದಳು. ಆದರೆ,

ಅದು ಸಾಧ್ಯವಾಗಲಿಲ್ಲ ಆದ್ದರಿಂದ ಅವಳು ಅಲ್ಲಿಂದ ತಪ್ಪಿಸಿಕೊಂಡು ಸ್ಥಳೀಯ ರೈಲು ನಿಲ್ದಾಣವನ್ನು ತಲುಪಿ ಅಲ್ಲಿಂದ ತನ್ನ ಕೋಟಾ ನಗರಕ್ಕೆ ರೈಲು ಹತ್ತಿದಳು.

ಇದನ್ನೂ ಓದಿ : https://vijayatimes.com/photoshoot-of-divorced-woman/

ಅಪ್ರಾಪ್ತ ಬಾಲಕಿಯ ರಕ್ಷಣೆ :

ತಪ್ಪಿಸಿಕೊಂಡು ಬಂದು ಕೋಟಾ ರೈಲು ನಿಲ್ದಾಣದಲ್ಲಿ ಕುಳಿತಿದ್ದ ಅಪ್ರಾಪ್ತ ಬಾಲಕಿಯನ್ನು ರೈಲ್ವೆ ಪೊಲೀಸ್ ಸಿಬ್ಬಂದಿಗಳು ಗಮನಿಸಿ,

ಬಾಲಕಿಯನ್ನು ವಿಚಾರಿಸಿ ನಂತರ ಅವರು ಚೈಲ್ಡ್ ಹೆಲ್ತ್‌ ಲೈನ್ (Child Health Line) ಮತ್ತು ಸಿಡಬ್ಲ್ಯೂಸಿಗೆ ಮಾಹಿತಿ ನೀಡಿದರು.

ಇಲ್ಲಿ ಅಪ್ರಾಪ್ತ ಬಾಲಕಿ ತನ್ನ ಸಂಕಟವನ್ನು ಹೇಳಿಕೊಂಡಿದ್ದಳು ನಂತರ ಬಾಲಕಿಯ ಪೋಷಕರನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದೇವೆ ಎಂದು ಸಿಡಬ್ಲ್ಯುಸಿ ಅಧ್ಯಕ್ಷೆ ಫಾತಿಮಾ ತಿಳಿಸಿದ್ದಾರೆ.

Exit mobile version