ದೀಪಾವಳಿ ಧಮಾಕ ; 4 ಗಂಟೆಗಳಲ್ಲಿ 6 ಕೋಟಿ ರೂ. ಮೌಲ್ಯದ ಮೇಕೆಗಳನ್ನು ಮಾರಾಟ ಮಾಡಿದ ರೈತರು!

Tamilnadu : ಅಕ್ಟೋಬರ್ 24 ರಂದು ದೀಪಾವಳಿ (Goat Sold At Highest) ಆಚರಣೆಯ ಹಿನ್ನೆಲೆ ತಮಿಳುನಾಡಿನ ಕಡಲೂರು ಜಿಲ್ಲೆಯ ವೆಪ್ಪೂರ್ ಮಾರುಕಟ್ಟೆಯಲ್ಲಿ ಮೇಕೆಗಳ ಮಾರಾಟದ ಬೆಲೆ ಗಗನಕ್ಕೇರಿದರೂ,

ಖರೀದಿಸಲು ಗ್ರಾಹಕರು ಹಿಂದೇಟು ಹಾಕದೆ ಖರೀದಿ ಮಾಡುವ ಮೂಲಕ ಮಾರಾಟಗಾರರಿಗೆ ಉತ್ತಮ ಲಾಭವನ್ನು ತಂದುಕೊಟ್ಟಿದ್ದಾರೆ.

ಅಕ್ಟೋಬರ್ 21ರ ಶುಕ್ರವಾರದಂದು ವ್ಯಾಪರಕ್ಕಿಳಿದ ರೈತರು ಮೊದಲ ನಾಲ್ಕು ಗಂಟೆಗಳಲ್ಲಿ 6 ಕೋಟಿ ರೂ.ಗೂ ಹೆಚ್ಚು ಮೇಕೆ ಮಾರಾಟ ಮಾಡುವ ಮೂಲಕ ದಾಖಲೆ ಬರೆದಿದ್ದಾರೆ.

ದೀಪಾವಳಿ ಸಂದರ್ಭದಲ್ಲಿ ತಮಿಳುನಾಡಿನ ಕಡಲೂರು ಜಿಲ್ಲೆಯ ವೇಪ್ಪೂರ್ ಮೇಕೆ ಮಾರುಕಟ್ಟೆಯಲ್ಲಿ 10,000ಕ್ಕೂ ಹೆಚ್ಚು ಮೇಕೆಗಳು ಮಾರಾಟವಾಗುತ್ತಿದ್ದು, 6 ಕೋಟಿಗೂ ಹೆಚ್ಚು ವ್ಯಾಪಾರ-ವಹಿವಾಟು ಉತ್ತಮವಾಗಿ ನಡೆಯುತ್ತಿದೆ.

https://fb.watch/gi5VkxN1wt/

ವೇಪ್ಪೂರು ಪಂಚಾಯತ್ ವತಿಯಿಂದ ವಾರಕ್ಕೊಮ್ಮೆ ಮೇಕೆ ಮಾರುಕಟ್ಟೆಯನ್ನು (Goat Sold At Highest) ಆಯೋಜಿಸಲಾಗಿದೆ. ಈ ಒಂದು ಮಾರಾಟದಲ್ಲಿ ವೇಪ್ಪೂರು, ತಿಟ್ಟಕುಡಿ,

ವೃದ್ಧಾಚಲಂ ಸೇರಿದಂತೆ ಸುತ್ತಮುತ್ತಲಿನ 50 ಗ್ರಾಮಗಳ ರೈತರು ಮತ್ತು ಕೃಷಿ ಕಾರ್ಮಿಕರು ಭಾಗಿಯಾಗಿ, ಹೆಚ್ಚುವರಿ ಆದಾಯಕ್ಕಾಗಿ ಮೇಕೆ ಸಾಕಾಣಿಕೆಯಲ್ಲಿ ತೊಡಗಿದ್ದಾರೆ.

ತಮ್ಮ ಮೇಕೆಗಳನ್ನು ವೇಪ್ಪೂರ್ ಮೇಕೆ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ರೈತರು ಬಹಳ ದಿನಗಳ ತಯಾರಿ ನಡೆಸಿರುತ್ತಾರೆ. ಪ್ರತಿ ವರ್ಷ ದೀಪಾವಳಿ ಹಬ್ಬದ ಸಮಯದಲ್ಲಿ ಮೇಕೆ ಮಾರಾಟ ಹೆಚ್ಚಾಗಿ ನಡೆಯುತ್ತದೆ.

ಇದೇ ರೀತಿ ಈ ವರ್ಷದ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಮೇಕೆ ಮಾರಾಟಗಾರರು ಮಾರುಕಟ್ಟೆಯಲ್ಲಿ ಜಮಾಯಿಸಿದ್ದರು.

ಇದನ್ನೂ ಓದಿ : https://vijayatimes.com/prashanth-slams-bihar-cm/

ತಿರುಚ್ಚಿ, ಮಧುರೈ, ಚೆನ್ನೈ, ಪಾಂಡಿಚೇರಿ, ಥೇಣಿ, ನಾಗಪಟ್ಟಣಂ, ಸೇಲಂ, ವಿಲ್ಲುಪುರಂ ಮತ್ತು ಕಲ್ಲಕುರಿಚಿ ಸೇರಿದಂತೆ ಹಲವು ಜಿಲ್ಲೆಗಳ ವ್ಯಾಪಾರಿಗಳು ಮೇಕೆಗಳನ್ನು ಖರೀದಿಸಲು ಸಗಟು ಮಾರುಕಟ್ಟೆಯಲ್ಲಿ ಹಾಜರಾಗಿದ್ದರು.

ಬೆಳಗಿನ ಜಾವ 3 ರಿಂದ 8ರ ನಡುವಿನ 4 ಗಂಟೆಯೊಳಗೆ 10,000 ಮೇಕೆಗಳು ಮಾರಾಟವಾಗಿವೆ. ಶುಕ್ರವಾರ ಮೊದಲ ನಾಲ್ಕು ಗಂಟೆಯಲ್ಲಿ 6 ಕೋಟಿ ರೂ.ಗೂ ಹೆಚ್ಚು ಮೇಕೆಗಳು ಮಾರಾಟವಾಗಿವೆ ಎಂದು ವ್ಯಾಪಾರಿಗಳು ಮಾಹಿತಿ ನೀಡಿದ್ದಾರೆ.
Exit mobile version