ಮೇಕೆಯನ್ನು ನುಂಗಿದ 15 ಅಡಿ ಉದ್ದದ ಹೆಬ್ಬಾವು ; ವೀಡಿಯೋ ವೈರಲ್

Video

Uttar Pradesh : ಉತ್ತರ ಪ್ರದೇಶದ ಕಾನ್ಪುರದಲ್ಲಿರುವ ಚಂದ್ರಶೇಖರ್ ಆಜಾದ್ ಕೃಷಿ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದಲ್ಲಿ ಮಂಗಳವಾರ 15 ಅಡಿ ಉದ್ದದ ಭಾರಿ ಗಾತ್ರದ ಹೆಬ್ಬಾವು (Goat swallowed by Python) ಪತ್ತೆಯಾಗಿದೆ. ವಿಶ್ವವಿದ್ಯಾಲಯದ ಬಳಿ ಭಾರಿ ಗಾತ್ರದ ಹೆಬ್ಬಾವು ಆಹಾರವನ್ನು ಅರಸಿ ಬಂದಿದೆ.

ಹಾವನ್ನು (Goat swallowed by Python)ಕಂಡು ಗಾಬರಿಯಾದ ಮೇಕೆ, ತಪ್ಪಿಸಿಕೊಳ್ಳಲು ವಿಫಲವಾಗಿದೆ.

ಆ ಬಳಿಕ ಹೆಬ್ಬಾವು ಸೆರೆಹಿಡಿದು ನುಂಗಿದ್ದಲ್ಲದೇ, ಅಲ್ಲೇ ವಿಶ್ರಾಂತಿ ಪಡೆಯುತ್ತಿತ್ತು. ಹೆಬ್ಬಾವನ್ನು ಕಂಡ ವಿದ್ಯಾರ್ಥಿಗಳು ಹಾಗೂ ಸ್ಥಳೀಯರು ಏಕಾಏಕಿ ಚೀರಾಡಿದ್ದಾರೆ.

ವಿಶ್ವವಿದ್ಯಾನಿಲಯದ ಡೈರಿ ವಿಭಾಗದ ಬಳಿ ವಾಸಿಸುವ ಸ್ಥಳೀಯರು ಹೆಬ್ಬಾವನ್ನು ನೋಡಿ ಗಾಬರಿಗೊಂಡು ಕೂಗಾಡಿದ್ದಾರೆ.

ಕಿರುಚಾಡುವ ಮೂಲಕ ಸ್ಥಳೀಯರನ್ನು ಗುಂಪುಗೂಡಿಸಿದ್ದಾರೆ. ಜನರ ಗುಂಪು ಹೆಚ್ಚಾಗುತ್ತಿದ್ದಂತೆ, ಹೆಬ್ಬಾವು ವಿಶ್ವವಿದ್ಯಾಲಯದ ಆವರಣದೊಳಗೆ ಪ್ರವೇಶಿಸಿದೆ.

https://youtu.be/J5zku2oo81U

ಇಲಾಖೆಯ ಅಧ್ಯಕ್ಷ ವೇದಪ್ರಕಾಶ್ ಹೆಬ್ಬಾವನ್ನು ಕಂಡ ಕೂಡಲೇ ಅರಣ್ಯ ರೇಂಜ್ ಆಫೀಸರ್ (ಆರ್‌ಎಫ್‌ಒ) ಮತ್ತು ಮೃಗಾಲಯದ ಉಸ್ತುವಾರಿ ಪಶುವೈದ್ಯಾಧಿಕಾರಿ ಅನುರಾಗ್ ಸಿಂಗ್ ಅವರನ್ನು ಸಂಪರ್ಕಿಸಿ ಹೆಬ್ಬಾವನ್ನು ರಕ್ಷಿಸುವಂತೆ ಕರೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ : https://vijayatimes.com/15-year-old-was-beaten/

ಆದ್ರೆ, ಕರೆ ಮಾಡಿ ಮೂರು ಗಂಟೆಯಾದರು ಅರಣ್ಯ ಇಲಾಖೆಯವರ ಸುಳಿವು ಇರಲಿಲ್ಲ.

ಈ ಸಮಯದಲ್ಲಿ ಹೆಬ್ಬಾವನ್ನು ವೀಕ್ಷಿಸಲು ಹೆಚ್ಚು ಸಂಖ್ಯೆಯಲ್ಲಿ ಜನರು ಗುಂಪು ಸೇರಿಕೊಂಡಿದ್ದು, ಕೆಲಸಗಳಿಗೆ ಅಡಚಣೆ ಉಂಟು ಮಾಡಿದೆ.

ಅರಣ್ಯ ಇಲಾಖೆ ಮೂರು ಗಂಟೆಗಳ ಬಳಿಕ ಸ್ಥಳಕ್ಕೆ ಧಾವಿಸಿ, ಹೆಬ್ಬಾವನ್ನು ಹಿಡಿದು ಮೃಗಾಲಯದ ಹಾವಿನ ರಕ್ಷಣಾ ಕೊಠಡಿಗೆ ಬಿಟ್ಟಿದೆ.

ವಿಶ್ವವಿದ್ಯಾನಿಲಯದ ಉಪಕುಲಪತಿ ಡಿಆರ್ ಸಿಂಗ್ ಈ ಕುರಿತು ಮಾತನಾಡಿ,

ಅರಣ್ಯ ಇಲಾಖೆ ತಂಡ ಸ್ಥಳಕ್ಕೆ ತಲುಪಲು ಮೂರು ಗಂಟೆಗಳ ಕಾಲ ತೆಗೆದುಕೊಂಡಿತು ಮತ್ತು ಅಲ್ಲಿಯವರೆಗೆ ಹೆಬ್ಬಾವನ್ನು ನೋಡಲು ಜಮಾಯಿಸಿದ ಜನರು ರಸ್ತೆಯಲ್ಲೇ ತುಂಬಿಕೊಂಡಿದ್ದರು.

ಅರಣ್ಯ ಇಲಾಖೆಯ ತಂಡ ಹೆಬ್ಬಾವನ್ನು ರಕ್ಷಿಸಿ ಸುರಕ್ಷಿತವಾಗಿ ಬಿಟ್ಟದ್ದು ನಮಗೆ ಸಂತೋಷವಾಯಿತು ಎಂದು ಸ್ಥಳೀಯ ಸುದ್ದಿ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.

Exit mobile version