ಬೆಂಗಳೂರು ನಿವಾಸಿಗಳಿಗೆ ಸಿಹಿ ಸುದ್ದಿ: ನೀರಿನ ಅಭಾವ ಪರಿಹರಿಸಲು ಬಂದಿವೆ ನಾಲ್ಕು ಆಪ್‌ಗಳು!

Bengaluru: ಬಿರು ಬೇಸಿಗೆ ಆರಂಭವಾಗುವ ಮುನ್ನವೇ ಬೆಂಗಳೂರಿನ ಕೆಲ ಪ್ರದೇಶಗಳಲ್ಲಿ ನೀರಿನ ಅಭಾವ ಉಂಟಾಗಿರುವ ಕಾರಣದಿಂದ ನೀರಿನ ಬಿಕ್ಕಟ್ಟು ನೀಗಿಸಲು ಜಲಮಂಡಳಿ ಹಲವು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಇದೆ ಮುಂದುವರಿದ ಭಾಗವಾಗಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ನೀರಿನ ಅಭಾವವನ್ನು ನೀಗಿಸಲು ನಾಲ್ಕು ಮೊಬೈಲ್ ರೆಸ್ಪಾನ್ಸಿವ್ ವೆಬ್ ಅಪ್ಲಿಕೇಶನ್‌ಗಳನ್ನು ಬಿಡುಗಡೆ ಮಾಡಿದೆ.

ಈ ನಾಲ್ಕು ಆ್ಯಪ್‌ಗಳೆಂದರೆ ಜಲಮಿತ್ರ (Jalamithra), ಪರಿಸರ ಜಲಸ್ನೇಹಿ (Parisara Jalasnehi), ಅಂದರ್ ಜಲ (Andar Jala) ಮತ್ತು ಸಂರಕ್ಷಕ (Samrakshaka). ಈ ಅಪ್ಲಿಕೇಷನ್‌ಗಳ ಮೂಲಕ ಬೆಂಗಳೂರಿಗರು ಈಗ ಸಂಸ್ಕರಿಸಿದ ನೀರನ್ನು ಆನ್‌ಲೈನ್‌ನಲ್ಲಿ (Online) ಬುಕ್ ಮಾಡಬಹುದು, ಬೋರ್‌ವೆಲ್ ಅನುಮತಿಗಳಿಗಾಗಿ ಅರ್ಜಿ ಸಲ್ಲಿಸಬಹುದು ಮತ್ತು ನೀರಿನ ಸೋರಿಕೆ ಪತ್ತೆ ಸಮೀಕ್ಷೆಗಳಿಗೆ ಸ್ವಯಂಸೇವಕರಾಗಬಹುದು ಹಾಗೂ ತಮ್ಮ ಫೋನ್‌ಗಳ ಬಳಸಿ ತಮ್ಮ ಸುತ್ತಮುತ್ತಲ ಪ್ರದೇಶಗಳಲ್ಲಿ ನೀರಿನ ದುರುಪಯೋಗ ಮಾಡುತ್ತಿದ್ದರೆ ಅದರ ವಿರುದ್ಧ ದೂರು ಸಲ್ಲಿಸಬಹುದಾಗಿದೆ.

ಬಿಡಬ್ಲ್ಯೂಎಸ್‌ಎಸ್‌ಬಿ (BWSSB) ಇತ್ತೀಚೆಗೆ ಅಗತ್ಯವಲ್ಲದ ಉದ್ದೇಶಗಳಿಗಾಗಿ ಕುಡಿಯುವ ನೀರನ್ನು ಬಳಸುವುದನ್ನು ನಿಷೇಧಿಸಿದೆ. ಮಾರ್ಚ್ 7 ರ ಆದೇಶದ ಪ್ರಕಾರ, ವಾಹನಗಳನ್ನು ಸ್ವಚ್ಛಗೊಳಿಸುವುದು, ತೋಟಗಾರಿಕೆ, ಕಾರಂಜಿ, ಕಟ್ಟಡ ಮತ್ತು ರಸ್ತೆ ನಿರ್ಮಾಣ ಮತ್ತು ನಿರ್ವಹಣೆಯಂತಹ ಚಟುವಟಿಕೆಗಳಿಗೆ ಕುಡಿಯುವ ನೀರನ್ನು ಬಳಸಬಾರದು. ಮಾಲ್‌ಗಳು ಮತ್ತು ಥಿಯೇಟರ್‌ಗಳು ನೀರನ್ನು ಕುಡಿಯುವ ಉದ್ದೇಶಕ್ಕಾಗಿ ಮಾತ್ರ ಬಳಸಲು ಅನುಮತಿಸಲಾಗಿದೆ. ಇಲ್ಲದಿದ್ದರೇ 5,000 ರೂಪಾಯಿ ದಂಡವನ್ನು ವಿಧಿಸಲಾಗುತ್ತದೆ ಎಂದಿದೆ.

ಕೆಲ ದಿನಗಳ ಹಿಂದಷ್ಟೇ ವಿಧಾನಸೌಧದಲ್ಲಿ ಬಿಡಬ್ಲ್ಯುಎಸ್‌ಎಸ್‌ಬಿಯ (BWSSB) ‘ನೀರು ಉಳಿಸಿ, ಬೆಂಗಳೂರು ಬೆಳಸಿ’ ಅಭಿಯಾನಕ್ಕೆ ಚಾಲನೆ ನೀಡಿದೆ. ಈ ಅಭಿಯಾನ ನೀರಿನ ಸಂರಕ್ಷಣೆಯನ್ನು ಹೆಚ್ಚಿಸುವ, ಅದರ ಬಗ್ಗೆ ಜಾಗೃತಿ ಮೂಡಿಸುವ ಗುರಿ ಹೊಂದಿದೆ.

Exit mobile version