ಹೊಸ ʼರೇಶನ್ ಕಾರ್ಡ್ʼ ಪಡೆಯುವವರಿಗೆ ಗುಡ್ ನ್ಯೂಸ್

ಬೆಂಗಳೂರು, ಮಾ. 17: ರೇಶನ್ ಕಾರ್ಡ್ ಇಲ್ಲದವರು  ಮನೆಯಲ್ಲೇ ಕೂತು ಸ್ಮಾರ್ಟ್​ ಫೋನ್​​ನ ಸಹಾಯದಿಂದ ಆನ್​​ಲೈನ್​ ರೇಶನ್​ ಕಾರ್ಡ್​ನ್ನು ಆರ್ಡರ್​ ಮಾಡಬಹುದಾಗಿದೆ. ಇದಕ್ಕೆಂದೇ ದೇಶದ ಪ್ರತಿಯೊಂದು ರಾಜ್ಯವೂ ಪ್ರತ್ಯೇಕ ರೇಷನ್​ ಕಾರ್ಡ್​ ವೆಬ್​ಸೈಟ್​ಗಳನ್ನ ನಿರ್ಮಿಸಿದೆ.

ಭಾರತದ ಪ್ರತಿಯೊಬ್ಬ ನಾಗರಿಕನೂ ಪಡಿತರ ಚೀಟಿಯನ್ನ ಹೊಂದಲು ಅರ್ಹನಾಗಿದ್ದಾನೆ. 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರನ್ನೂ ರೇಶನ್​ ಕಾರ್ಡ್​ನಲ್ಲಿ ಸೇರಿಸಿಕೊಳ್ಳಲಾಗುತ್ತೆ. 18 ವರ್ಷ ತುಂಬಿದ ಬಳಿಕ ಸೂಕ್ತ ದಾಖಲೆಗಳನ್ನ ನೀಡಿ ಪ್ರತ್ಯೇಕ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ರೇಶನ್​ ಕಾರ್ಡ್ ಮಾಡಲು ನೀವು ಮೊದಲು ನಿಮ್ಮ ರಾಜ್ಯದ ಅಧಿಕೃತ ವೆಬ್​ಸೈಟ್​ ಖಾತೆಗೆ ಲಾಗಿನ್ ಆಗಿರಿ. ಈ ವೆಬ್​ಸೈಟ್​ನಲ್ಲಿ Apply online for ration card ಲಿಂಕ್​ ಮೇಲೆ ಕ್ಲಿಕ್​ ಮಾಡಿ .

ರೇಶನ್​ ಕಾರ್ಡ್​ನ್ನು ಪಡೆಯಲು ನಿಮ್ಮ ಐಡಿ ಪ್ರೂಫ್​ಗಳ ರೂಪದಲ್ಲಿ ವೋಟರ್​ ಐಡಿ, ಪಾಸ್​ಪೋರ್ಟ್, ಆಧಾರ್​ ಕಾರ್ಡ್, ವಾಹನ ಪರವಾನಿಗೆ ಸೇರಿದಂತೆ ವಿವಿಧ ದಾಖಲೆಗಳನ್ನ ಸಲ್ಲಿಸಬಹುದಾಗಿದೆ.

ರೇಶನ್​ ಕಾರ್ಡ್​ಗೆ ಅರ್ಜಿ ಸಲ್ಲಿಸಲು 05 ರೂಪಾಯಿಗಳಿಂದ 45 ರೂಪಾಯಿಗಳವರೆಗೆ ಶುಲ್ಕ ಇದೆ. ಅರ್ಜಿ ಶುಲ್ಕವನ್ನ ಭರಿಸಿದ ಬಳಿಕ ಅಪ್ಲಿಕೇಶನ್​ನ್ನು ಸಬ್​ಮಿಟ್​ ಮಾಡಿ. ಫೀಲ್ಡ್ ವೆರಿಫಿಕೇಶನ್​ ಮಾಡಿದ ಬಳಿಕ ನಿಮ್ಮ ದಾಖಲೆಗಳು ಸೂಕ್ತವಾಗಿದ್ದರೆ ನಿಮಗೆ ಹೊಸ ರೇಶನ್​ ಕಾರ್ಡ್ ಸಿಗುತ್ತದೆ.

Exit mobile version