ಗೂಗಲ್ ಡಾರ್ಕ್ ರಿಪೋರ್ಟರ್ ಅನ್ನು ಬಳಸುವುದು ಹೇಗೆ? ಇಲ್ಲಿದೆ ಇದರ ಸಂಪೂರ್ಣ ಮಾಹಿತಿ

Google Dark Reporter: ಗೂಗಲ್ ತನ್ನ ಬಳಕೆದಾರರಿಗೆ ಹೊಸ (Google Dark Web Reporter) ವೈಶಿಷ್ಟ್ಯವನ್ನು ಪರಿಚಯ ಮಾಡಿಸಿದ್ದು, ಅದು ಒಂದು ಡಾರ್ಕ್ ವೆಬ್ ರಿಪೋರ್ಟ್ ಆಗಿದೆ. ಇದನ್ನು ಬಳಸುವ

ಬಳಕೆದಾರರಿಗೆ ಎಷ್ಟು ಸುರಕ್ಷಿತವೋ ಮತ್ತು (Google Dark Web Reporter) ಸಹಕಾರಿಯೋ ಎಂದು ತಿಳಿಯೋಣ ಬನ್ನಿ.

ಇಂಟರ್ನೆಟ್ (Internet) ಜೊತೆ ಗೂಗಲ್ ಕಂಪನಿಯು ತನ ಬಳಕೆದಾರರಿಗೆ ಅನೇಕ ಸಾಕಷ್ಟು ಸುರಕ್ಷತೆ ಮತ್ತು ಭದ್ರತೆಗಾಗಿ ಕ್ರಮಗಳನ್ನು ಕೈಗೊಳ್ಳುತ್ತಲೇ ಬಂದಿದ್ದು, ಸಾಧ್ಯವಾದಷ್ಟು ಯಾವ

ದೋಷಗಳು ಇಲ್ಲದೆ ಬಳಕೆದಾರರು ನಿರಂತಕವಾಗಿ ಬಳಸಬಹುದಾದ ವ್ಯವಸ್ಥೆಗಳನ್ನು ಗೂಗಲ್ ಸದಾ ಪರಿಚಯಿಸುತ್ತಲೇ ಇದೆ. ಗೂಗಲ್ನ ಇತ್ತೀಚಿನ ಪ್ರಯತ್ನಗಳಲ್ಲಿ ಡಾರ್ಕ್ ವೆಬ್ ರಿಪೋರ್ಟ್

(Dark Web Reporter) ಕೂಡ ಒಂದು. ಇದು ಖಾತೆಗಳಿಗೆ ಹೆಚ್ಚುವರಿ ಭದ್ರತೆಯ ಪದರವನ್ನು ಸೇರಿಸಿರುತ್ತದೆ. ಡಾರ್ಕ್ ವೆಬ್ ಈಗ ಎಲ್ಲಾ ಬಳಕೆದಾರರಿಗೂ ಸಿಗಲಿದೆ.

ಡಾರ್ಕ್ ವೆಬ್ ವೈಶಿಷ್ಟ್ಯ:
ಬಳಕೆದಾರರ ಖಾತೆಗಳಿಗೆ ಸಂಬಂಧಿಸಿದ ಸಂಭಾವ್ಯ ಕನ್ನ ಅಥವಾ ಡೇಟಾ ಉಲ್ಲಂಘನೆ ಉದ್ದೇಶದಿಂದ ಕಾರ್ಯನಿರ್ವಹಿಸುವ ಡಾರ್ಕ್‌ ವೆಬ್‌ ಅನ್ನು ಸ್ಕಾನ್ (Scan) ಮಾಡುವ ವೈಶಿಷ್ಟ್ಯವಾಗಿರುವುದಲ್ಲದೆ

ಇಮೇಲ್ (E-Mail) ವಿಳಾಸ ಮತ್ತು ಪಾಸ್‌ವರ್ಡ್ ಸೇರಿದಂತೆ ಯಾವುದೇ ವೈಯಕ್ತಿಕ ಮಾಹಿತಿ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆಯೇ ಎಂಬುದನ್ನೂ ಇದು ಪರಿಶೀಲನೆ ನಡೆಸುತ್ತದೆ.

ವಾಟ್ಸಪ್ ನಲ್ಲಿಸುವುದು ಮತ್ತು ಕಳಿಸೋದು ಹೇಗೆ?
ಈ ಡಾರ್ಕ್ ವೆಬ್ ರಿಪೋರ್ಟ್ ರನ್ ಮಾಡಲು ಅನುಮತಿಸುತ್ತದೆ ಮತ್ತು ಉಲ್ಲಂಘನೆ ಫಲಿತಾಂಶವೂ ನಿಮ್ಮ ಹೆಸರು, ವಿಳಾಸ, ದೂರವಾಣಿ ಸಂಖ್ಯೆ, ಇಮೇಲ್, ಸೋಶಿಯಲ್ (Social), ಸೆಕ್ಯೂರಿಟಿ ನಂಬರ್,

ಯೂಸರ್ ನೇಮ್ ಮತ್ತು ಪಾಸ್ವರ್ಡ್ (Password) ಗಳ ಮಾಹಿತಿಯನ್ನು ಒಳಗೊಂಡಿರಬಹುದು.

ಡಾರ್ಕ್ ವೆಬ್ ಪಾವತಿಸಿದ ಬಳಕೆದಾರರಿಗೆ ಕೆಲವು ವೈಶಿಷ್ಟ್ಯಗಳು ಸಿಗಲಿದ್ದು, ನಿಮ್ಮ ವೈಯಕ್ತಿಕ ಮಾಹಿತಿಗಾಗಿ ಡಾರ್ಕ್ ವೆಬ್ ನ ನಿರಂತರ ಮೇಲ್ವಿಚಾರಣೆ ನಿಮ್ಮ ಇಮೇಲ್ ವಿಳಾಸ ಹೊರತುಪಡಿಸಿ ಸಿಗುವ

ಎಲ್ಲಾ ಇತರ ಫಲಿತಾಂಶಗಳ ಮಾಹಿತಿ ಹೊಸ ಫಲಿತಾಂಶಗಳಿಗಾಗಿ ಆದಿ ಸೂಚನೆಗಳು ಸೇರಿವೆ, ಉಚಿತ ಮತ್ತು ಗೂಗಲ್ ಬಳಕೆದಾರರಿಗೂ ಲಭ್ಯವಿದೆ.

ಗೂಗಲ್ ಖಾತೆಯಲ್ಲಿ ಡಾರ್ಕ್‌ ವೆಬ್‌ ಸ್ಕ್ಯಾನ್‌ ರನ್ ಮಾಡುವುದು ಹೇಗೆ?
ಗೂಗಲ್ ಅಪ್ಲಿಕೇಶನ್‌ನ (Google Application)ಇತ್ತೀಚಿನ ಆವೃತ್ತಿಯನ್ನು ಡೌನ್‌ಲೋಡ್ ಮತ್ತು ಇನ್‌ಸ್ಟಾಲ್ ಮಾಡಿ
ಈಗ, ಪ್ರೊಫೈಲ್ ಐಕಾನ್ (Profile Icon) ಮೇಲೆ ಟ್ಯಾಪ್ ಮಾಡಿ ಮತ್ತು ಡಾರ್ಕ್ ವೆಬ್ ವರದಿ ಆಯ್ಕೆಯನ್ನು ಆಯ್ಕೆಮಾಡಿ
ನಂತರ, ಮುಂದಿನ ಪುಟದಲ್ಲಿ, `ರನ್ ಸ್ಕ್ಯಾನ್ ಬಟನ್’ (Run Scan Button) ಅನ್ನು ಟ್ಯಾಪ್ ಮಾಡಿ
ಸ್ಕ್ಯಾನ್ ಪ್ರಕ್ರಿಯೆ ಪೂರ್ಣಗೊಳ್ಳುವುದನ್ನು ನಿರೀಕ್ಷಿಸಿ ಮತ್ತು ನಂತರ ಫಲಿತಾಂಶವನ್ನು ಪರಿಶೀಲಿಸಿ.

ಇದನ್ನು ಓದಿ: ನಿಥಾರಿ ಸೀರಿಯಲ್ ಕಿಲ್ಲರ್ಸ್: 21 ಮಕ್ಕಳ ಹತ್ಯಾಕಾಂಡ ಪ್ರಕರಣಕ್ಕೆ ಸಂಬಂಧಪಟ್ಟ ನಿಥಾರಿ ಹಂತಕರು ದೋಷಮುಕ್ತ

Exit mobile version