ಗೋರಕ್‌ಪುರ ಆಸ್ಪತ್ರೆ ದುರಂತ: ಈ ಪುಸ್ತಕ ಪ್ರಕಟಿಸಿದ ಡಾ.ಕಫೀಲ್ ಖಾನ್ ವಿರುದ್ದ ಪ್ರಕರಣ ದಾಖಲು

ಉತ್ತರ ಪ್ರದೇಶ: ಗೋರಕ್‌ಪುರ ಆಸ್ಪತ್ರೆ (Gorakhpur Hospital) ದುರಂತಕ್ಕೆ ಸಂಬಂಧಪ್ಪಟ್ಟಂತೆ ಉತ್ತರಪ್ರದೇಶದ ಗೋರಖ್‌ಪುರದ (Gorakhpur Hospital tragedy) ಬಿಆರ್‌ಡಿ ವೈದ್ಯಕೀಯ

ಕಾಲೇಜಿನ ಮಾಜಿ ವೈದ್ಯ ಕಫೀಲ್ ಖಾನ್ ವಿರುದ್ದ ಮತ್ತು ಅವರ ಪುಸ್ತಕ ಪ್ರಕಟಿಸಿದ ಐವರ ವಿರುದ್ಧ ಗೋರಖ್‌ಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಪುಸ್ತಕವನ್ನು 2021ರಲ್ಲಿ ಪ್ರಕಟಿಸಲಾಗಿದ್ದು, ಹಲವಾರು ಭಾರತೀಯ ಭಾಷೆಗಳಿಗೆ ಅದನ್ನು ಅನುವಾದಿಸಲಾಗಿತ್ತು. ದಿ ಗೋರಖ್‌ಪುರ ಆಸ್ಪಿಟಲ್‌ ಟ್ರಾಜಿಡಿ: ಎ ಡಾಕ್ಟರ್ಸ್ ಮೆಮೊಯಿರ್ ಆಫ್ ಎ

ಡೆಡ್ಲಿ ಮೆಡಿಕಲ್ ಕ್ರೈಸಿಸ್’ (The Gorakhpur Hospital Tragedy: A Doctor’s Memoir of a Deadly Medical Crisis) ಪುಸ್ತಕವನ್ನು ಕಫೀಲ್ ಖಾನ್ ಬರೆದಿದ್ದರು.

ಕೃಷ್ಣನಗರದ ಉದ್ಯಮಿ ಮನೀಶ್ ಶುಕ್ಲಾ(Manish Shukala) ಅವರ ದೂರಿನ ಮೇರೆಗೆ ಪುಸ್ತಕಗಳ ಮುದ್ರಣ ಮತ್ತು ನೋಂದಣಿ ಕಾಯ್ದೆಯ ಉಲ್ಲಂಘನೆಯ ಆರೋಪದಡಿ ಕಫೀಲ್ ಖಾನ್ ವಿರುದ್ದ

ಐಪಿಸಿಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಲಕ್ನೋದ ಕೃಷ್ಣನಗರದ ಸ್ಟೇಷನ್ ಹೌಸ್ ಅಧಿಕಾರಿ ಜಿತೇಂದ್ರ ಪ್ರತಾಪ್ ಸಿಂಗ್ ಈ ಕುರಿತು ಮಾಹಿತಿಯನ್ನು ನೀಡಿದ್ದಾರೆ.

ದೂರಿನಲ್ಲಿ ಡಾ.ಕಫೀಲ್(Dr. Kapil) ಅವರ ಪುಸ್ತಕವನ್ನು ಹಣ ಸಂಗ್ರಹಿಸುವ, ರಾಜ್ಯ ಸರ್ಕಾರವನ್ನು ಉರುಳಿಸುವ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರ ರಚನೆಯಾಗದಂತೆ ತಡೆಯುವ ಸಾಧನವಾಗಿ

ಬಳಸಲಾಗಿದೆ. ಸಮುದಾಯಗಳ ನಡುವೆ ಸಂಘರ್ಷದ ಪಿತೂರಿ ಮಾಡಲಾಗಿದೆ (Gorakhpur Hospital tragedy) ಎಂದು ಅವರು ಆರೋಪಿಸಿದ್ದಾರೆ.

ಅದರಲ್ಲಿ ವಿವಿಧ ಧರ್ಮಗಳ ನಡುವೆ ದ್ವೇಷವನ್ನು ಉತ್ತೇಜಿಸುವ, ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಕೃತ್ಯಗಳಿಗೆ ಸಂಬಂಧಿಸಿದ ಸೆಕ್ಷನ್‌ಗಳು, 295A , 153B ಸೇರಿದಂತೆ ವಿವಿಧ ಸೆಕ್ಸನ್‌ಗಳಡಿಯಲ್ಲಿ

ಪ್ರಕರಣ ದಾಖಲಿಸಲಾಗಿದ್ದು, ಕಫೀಲ್ ಖಾನ್ ವಿರುದ್ಧ ಭಾರತೀಯ ದಂಡ ಸಂಹಿತೆಯ 10 ಸೆಕ್ಷನ್‌ಗಳಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇದಲ್ಲದೆ ಮುದ್ರಣದ ಹೆಸರು ಮತ್ತು ಮುದ್ರಣದ ಸ್ಥಳವನ್ನು ಸರಿಯಾಗಿ ಪ್ರಕಟಿಸದ ಆರೋಪದಲ್ಲಿ ಕಫೀಲ್ ಖಾನ್ ವಿರುದ್ಧ 1867ರ ಪ್ರೆಸ್ ಮತ್ತು ರಿಜಿಸ್ಟ್ರೇಶನ್ ಆಫ್ ಬುಕ್ಸ್ ಆಕ್ಟ್‌ನ ಸೆಕ್ಷನ್ 3 ಮತ್ತು 1

ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಏನಿದು ಆಸ್ಪತ್ರೆ ದುರಂತ?
ಗೋರಖ್‌ಪುರ ಆಸ್ಪತ್ರೆಯಲ್ಲಿ 60 ಮಕ್ಕಳು ಆಮ್ಲಜನಕದ ಕೊರತೆಯಿಂದ ಮೃತಪಟ್ಟಿದ್ದರು. ಈ ವೇಳೆ ಕಫೀಲ್ ಖಾನ್ ಅವರು ಶಿಶು ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಆಸ್ಪತ್ರೆಯು ಬಾಕಿ ಮೊತ್ತ

ಪಾವತಿಸದ ಕಾರಣ ಎಲ್ಲಾ ಆಮ್ಲಜನಕ ಪೂರೈಕೆದಾರ ಸಂಸ್ಥೆಗಳು ಸರಬರಾಜು ಸ್ಥಗಿತಗೊಳಿಸಿದ್ದವು. ಘಟನೆಯ ವೇಳೆ ಖಾನ್‌ ಅವರು ಮಕ್ಕಳ ಜೀವವನ್ನು ಉಳಿಸಲು ಪ್ರಯತ್ನಿಸಿದ್ದರು ಆದರೆ

ದುರದೃಷ್ಟಾವಶಾತ್‌ ಘಟನೆಗೆ ಕಫೀಲ್ ಖಾನ್ ಅವರು ಕಾರಣ ಎಂದು 2017ರಲ್ಲಿ ಡಾ.ಕಪೀಲ್‌ ಖಾನ್‌ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿತ್ತು.

ಕಫೀಲ್ ಖಾನ್(Kaffel Khan) ಅವರು ವಾಸ್ತವವಾಗಿ ಈ ಮುಗ್ಧ ಮಕ್ಕಳ ಪ್ರಾಣ ಉಳಿಸಲು ಪ್ರಯತ್ನಿಸಿದ್ದರು. ಆದರೆ ಆಡಳಿತ ಮಂಡಳಿ ಮತ್ತು ಸರ್ಕಾರ ಅವರಿಗೆ ಸ್ಪಂದಿಸಿರಲಿಲ್ಲ. ಕೊನೆಗೆ

ಪ್ರಕರಣದಲ್ಲಿ ಅವರು ತಪ್ಪಿತಸ್ಥರು ಎಂದು ಆಪಾದನೆ ಹೊರಿಸಲಾಗಿತ್ತು. ಈ ಮೂಲಕ ಉತ್ತರ ಪ್ರದೇಶ ಸರ್ಕಾರ ತನ್ನ ತಪ್ಪನ್ನು ಮರೆಮಾಚಲು ಮುಂದಾಗಿದೆ ಎಂಬ ಆರೋಪ ಕೇಳಿಬಂದಿತ್ತು.

ಇದನ್ನು ಓದಿ: ಈಶಾನ್ಯ ರೈಲ್ವೆಯಲ್ಲಿ 1104 ಹುದ್ದೆಗಳಿಗೆ ಅರ್ಜಿ ಆಹ್ವಾನ ; ಇಂದೇ ಅರ್ಜಿ ಸಲ್ಲಿಸಿ

Exit mobile version