ರೈಲಿನಲ್ಲಿ ಬೆಂಕಿ: ಬೆಂಗಳೂರಿನ ಮೆಜೆಸ್ಟಿಕ್ ರೈಲು ನಿಲ್ದಾಣದಲ್ಲಿ ಉದ್ಯಾನ್ ಎಕ್ಸ್ ಪ್ರೆಸ್ ರೈಲಿನಲ್ಲಿ ಬೆಂಕಿ, ತಪ್ಪಿದ ಭಾರಿ ಅವಘಡ

Bengaluru: ಬೆಂಗಳೂರು (Bengaluru) ಹಾಗೂ ಮುಂಬೈ (got fire in train) ನಡುವೆ ಓಡಾಡುವ ಉದ್ಯಾನ್ ಎಕ್ಸ್ ಪ್ರೆಸ್ ರೈಲಿನಲ್ಲಿ (ರೈಲಿನ ಸಂಖ್ಯೆ: 11301) ಬೆಂಕಿ ಅವಘಡ

ಸಂಭವಿಸಿದ್ದು, ಆಗಸ್ಟ್ 19ರಂದು ಮುಂಜಾನೆ ಸಮಯದಲ್ಲಿ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (Kranthiveera Sangolli Rayanna) ರೈಲು ನಿಲ್ದಾಣಕ್ಕೆ ರೈಲು ಆಗಮಿಸಿತ್ತು.

ರೈಲು ಬಂದು ಎರಡು ಗಂಟೆಗಳ ನಂತರ ರೈಲಿನ ಬಿ 1 ಹಾಗೂ ಬಿ 2 ಕೋಚ್ ಗಳಲ್ಲಿ (Coach) ಬೆಂಕಿ ಕಾಣಿಸಿಕೊಂಡಿದೆ ಕೂಡಲೇ ಅಗ್ನಿಶಾಮಕ ಸಿಬ್ಬಂದಿಗೆ ಸುದ್ದಿಯನ್ನು ತಲುಪಿಸಲಾಯಿತು.

ಆಗ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿಯು ಬೆಂಕಿಯನ್ನು (got fire in train) ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ರೈಲ್ವೆ ನಿಲ್ದಾಣಕ್ಕೆ ಮುಂಜಾನೆ ವೇಳೆ 5.45ರ ಸುಮಾರಿಗೆ ರೈಲು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ತಲುಪಿದ್ದು, ರೈಲು ಆಗಮಿಸಿದ ಎರಡು ಗಂಟೆಗಳ ನಂತರ ಅಂದರೆ ಸುಮಾರು

7.30 ಸುಮಾರಿಗೆ ರೈಲಿನ ಬಿ 1 ಹಾಗೂ ಬಿ2 ಬೋಗಿಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ರೈಲ್ವೆ (Railway) ನಿಲ್ದಾಣದ ಸಿಬ್ಬಂದಿಯ ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ

ದಳದ ಸಿಬ್ಬಂದಿಯು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವಾರಣಾಸಿಯಲ್ಲಿ ಮೋದಿ ವಿರುದ್ದ ಪ್ರಿಯಾಂಕಾ ಗಾಂಧಿ ಸ್ಪರ್ಧೆ..! ಕಾಂಗ್ರೆಸ್ ಹೊಸ ಪ್ಲ್ಯಾನ್..!

ಘಟನೆಯಲ್ಲಿ ಯಾರಿಗೂ ಪ್ರಾಣ ಹಾನಿಯಾಗಿಲ್ಲ. ಇನ್ನು ರೈಲ್ವೆ ಇಲಾಖೆಯು ಬೋಗಿಗಳಲ್ಲಿ ಬೆಂಕಿ ಹೇಗೆ ಬಂತು ಎಂಬುದನ್ನು ತಿಳಿಯಲು ತನಿಖೆಗೆ ಆದೇಶ ನೀಡಿದೆ. ನೈರುತ್ಯ ರೈಲ್ವೆ ವಿಭಾಗವು

ಘಟನೆಯ ಬಗ್ಗೆ ಮಾಹಿತಿ ನೀಡಿದ್ದು, ರೈಲಿನಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಲೇ ನಾವು ಅಗ್ನಿಶಾಮಕ ದಳದವರಿಗೆ ಮಾಹಿತಿ ರವಾನಿಸಿದೆವು .

ಕೂಡಲೇ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿದರು. ಈ ರೈಲು ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣಕ್ಕೆ ಆಗಮಿಸಿ ಸುಮಾರು 2 ಗಂಟೆಯ ನಂತರ ಬೆಂಕಿ ಕಾಣಿಸಿಕೊಂಡಿದೆ.

ಅಷ್ಟರಲ್ಲಿ ರೈಲಿನಲ್ಲಿದ್ದ ಎಲ್ಲಾ ಪ್ರಯಾಣಿಕರು ಕೆಳಗಿಳಿದಿದ್ದರು. ಹಾಗಾಗಿ ಇದರಿಂದ ಯಾರಿಗೂ ಯಾವುದೇ ಹಾನಿಯಾಗಿಲ್ಲ ಎಂದು ತಿಳಿಸಿದೆ.

ಬುಕಿಂಗ್ ಗಾಗಿ 120 ದಿನಗಳ ಮುಂಚಿತವಾಗಿಯೇ ಈ ರೈಲಿನಲ್ಲಿ ಬುಕಿಂಗ್ (Booking) ತೆರೆಯಲಾಗುತ್ತದೆ. ಇದರಲ್ಲಿ ಆನ್ ಲೈನ್ (Online) ಮೂಲಕ ಆರ್ಡರ್ ಮಾಡಿದರೆ ಕೇಟರಿಂಗ್

(Catering) ಮೂಲಕ ಆಹಾರ ಒದಗಿಸುವ ಹಾಗೂ ಪ್ರಯಾಣಿಕರ ಯೂಸರ್ ಇಂಟರ್ ಫೇಸ್ (User Inter Face) ಸೌಲಭ್ಯವಿದೆ. ಬೆಂಗಳೂರು ಹಾಗೂ ಮುಂಬೈ ನಡುವೆ ಸಾಗುವ ಮಾರ್ಗದಲ್ಲಿ

ಈ ರೈಲುಗಳು ಆಂಧ್ರಪ್ರದೇಶದ (Andhrapradesh) ಗಡಿಯನ್ನು ಪ್ರವೇಶಿಸಿ ಸಾಗುತ್ತವೆ.ಉದ್ಯಾನ್ ಎಕ್ಸ್ ಪ್ರೆಸ್ ರೈಲು (Udyan Express Rail) ಮುಂಬೈನಿಂದ ಅಥವಾ ಬೆಂಗಳೂರಿನಿಂದ

ಹೊರಟು ಆಂಧ್ರಪ್ರದೇಶದ ಹಿಂದೂಪುರ ಪೆನುಗೊಂಡ, ಧರ್ಮಾವರಂ (Dharmavaram), ಅನಂತಪುರ, ಆದೋನಿ ಊರುಗಳ ಮೂಲಕ ಪ್ರಯಾಣಿಸುತ್ತದೆ.

ಭವ್ಯಶ್ರೀ ಆರ್.ಜೆ

Exit mobile version