ಸಿಕ್ತು ಜಯ: ರಾಜ್ಯದ 262 ಸರ್ಕಾರಿ ಶಾಲೆಗಳಲ್ಲಿ ಆರಂಭವಾಗಲಿವೆ ಎಲ್‌ಕೆಜಿ ಹಾಗೂ ಯುಕೆಜಿ

Bengaluru: ಕರ್ನಾಟಕದ 262 ಸಾರ್ವಜನಿಕ ಶಾಲೆಗಳು (government schools LKG UKG) ಈ ವರ್ಷದ ಸೆಪ್ಟೆಂಬರ್‌ನಿಂದ 4-5 ವರ್ಷ ವಯಸ್ಸಿನ ಮಕ್ಕಳಿಗೆ

ಪ್ರಿಸ್ಕೂಲ್ (Pre School) ತರಗತಿಗಳನ್ನು ಪ್ರಾರಂಭಿಸಲಿವೆ ಎಂದು ವರದಿಯಾಗಿದೆ. LKG ಮತ್ತು UKG ಶಾಲೆಗಳಿಗೆ ಪೋಷಕರ ಬೇಡಿಕೆ ಹೆಚ್ಚಾಗಿದೆ. ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ

ಅಂಗನವಾಡಿಗಳು (Anganawadi) ಮಕ್ಕಳ ಶೈಕ್ಷಣಿಕ ಅಗತ್ಯಗಳನ್ನು ಪೂರೈಸುವಲ್ಲಿ ವಿಫಲವಾಗಿವೆ ಎಂಬ ಆರೋಪ ಕೇಳಿಬಂದಿದೆ. ಸರ್ಕಾರಿ ಶಾಲೆಗಳಲ್ಲಿ ಎಲ್ಕೆಜಿ, ಯುಕೆಜಿ ಆರಂಭಿಸುವ ಕುರಿತು

ಇವುಗಳ ಮಧ್ಯೆಯೇ ವರದಿಯಾಗಿದೆ. ಯೋಜನಾ ಅನುಮೋದನೆ ಸಮಿತಿಯು 262 ಶಾಲೆಗಳು, ದಕ್ಷಿಣ ಬೆಂಗಳೂರಿನ 10 ಶಾಲೆಗಳು ಮತ್ತು ಉತ್ತರ ಬೆಂಗಳೂರಿನ 4 ಶಾಲೆಗಳು ಸೇರಿದಂತೆ ಒಟ್ಟು 262

ಶಾಲೆಗಳಲ್ಲಿಎಲ್‌ಕೆಜಿ ಮತ್ತು ಯುಕೆಜಿ ಪ್ರಾರಂಭಿಸಲು (government schools LKG UKG) ಅನುಮೋದನೆ ನೀಡಿದೆ.

ಪ್ರಸ್ತುತ, 276 ಕರ್ನಾಟಕ ಸರ್ಕಾರಿ ಶಾಲೆಗಳು ಸೇರಿದಂತೆ ಸುಮಾರು 900 ಶಾಲೆಗಳು ಎಲ್‌ಕೆಜಿ ಮತ್ತು ಯುಕೆಜಿ ಶಿಕ್ಷಣದಲ್ಲಿ ಭಾಗವಹಿಸುತ್ತಿವೆ. ಶಾಲಾ ಅಭಿವೃದ್ಧಿ ಮೇಲ್ವಿಚಾರಣಾ ಸಮಿತಿ

(SDMC) 664 ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳನ್ನು ನಿರ್ವಹಿಸುತ್ತದೆ. ಪ್ರತಿ ತರಗತಿಯಲ್ಲಿ ಗರಿಷ್ಠ 20 ಮಕ್ಕಳು ಮತ್ತು ಗರಿಷ್ಠ 30 ಮಕ್ಕಳನ್ನು ದಾಖಲಾತಿ ಮಾಡಿಕೊಳ್ಳುವ

ಸಾಮರ್ಥ್ಯ ಹೊಂದಿರಬೇಕು. ವರದಿಯ ಪ್ರಕಾರ, ಎಸ್‌ಡಿಎಂಸಿಗಳು ಶಿಕ್ಷಕರು ಮತ್ತು ದಾದಿಯರನ್ನು 10 ತಿಂಗಳವರೆಗೆ ಕ್ರಮವಾಗಿ ರೂ 7,000 ಮತ್ತು ರೂ 5,000 ರ ಮಾಸಿಕ

ವೇತನದಲ್ಲಿ ನೇಮಕ ಮಾಡುತ್ತಿದೆ ಎಂದು ವರದಿ ಆಗಿದೆ.

ಇದನ್ನೂ ಓದಿ : ಇನ್ನು ಮುಂದೆ ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷೆಯಲ್ಲೂ ಸಿಬಿಎಸ್‌ಇ ಶಿಕ್ಷಣ ನೀಡಬಹುದು : ಮುಂದಿನ ವರ್ಷದಿಂದ 22 ನಿಗದಿತ ಭಾಷೆಗಳಲ್ಲಿ ಪಠ್ಯಗಳು ಲಭ್ಯ

ಅನೇಕ ಕಡೆಗಳಲ್ಲಿ ಅಂಗನವಾಡಿಗಳು ಲಭ್ಯವಿದ್ದರೂ ಸಹ ಶಿಕ್ಷಣಕ್ಕೆ ಸಂಬಂಧಿಸಿ ಅವುಗಳಲ್ಲಿ ಅನೇಕ ಕೊರತೆಗಳಿವೆ. ಇಲ್ಲಿ, ನಾವು ವೈಜ್ಞಾನಿಕ ಪಠ್ಯಕ್ರಮವನ್ನು ವಿನ್ಯಾಸಗೊಳಿಸಿದ್ದೇವೆ ಹಾಗೂ ತರಬೇತಿ

ಪಡೆದ ಶಿಕ್ಷಕರು, ಮತ್ತು ಉತ್ತಮ ಮೂಲಸೌಕರ್ಯವನ್ನು ಹೊಂದಿದ್ದೇವೆ, ಪೋಷಕರಿಗೆ ಇದು ದೊಡ್ಡ ಆಕರ್ಷಣೆಯಾಗಿದೆ ಎಂದು ಶಿಕ್ಷಣಾಧಿಕಾರಿ ತಿಳಿಸಿರುವುದಾಗಿ ವರದಿ ಉಲ್ಲೇಖಿಸಿದೆ.

ಕರ್ನಾಟಕ ಪ್ರಿಸ್ಕೂಲ್ ಕೌನ್ಸಿಲ್ ಕಾರ್ಯದರ್ಶಿ ಪೃಥ್ವಿ ಬನವಾಸಿ (Prithwi Bnawasi) ಅವರು ಈ ಬಗ್ಗೆ ಮಾತನಾಡಿ ವಿಶೇಷವಾಗಿ ಇದು ಸ್ವಾಗತಾರ್ಹ ಕ್ರಮವಾಗಿದೆ.ವಿಶೇಷವಾಗಿ ಗ್ರಾಮೀಣ

ಪ್ರದೇಶಗಳಲ್ಲಿ, ದುಡಿಯುವ ಮಹಿಳೆಯರಿಗೆ,ಮತ್ತು ಮಕ್ಕಳನ್ನು ಬಿಡಲು ಸಂಘಟಿತ ಸ್ಥಳಗಳಿಲ್ಲದವರಿಗೆ ಇದು ಅತ್ಯಂತ ಮುಖ್ಯವಾಗಿದೆ.ಮಕ್ಕಳ ಬೆಳವಣಿಗೆಯಲ್ಲಿ 2.5-6 ವರ್ಷ ವಯೋಮಾನ ಕೂಡ

ಪ್ರಮುಖವಾಗಿದೆ. ಈ ಶಿಕ್ಷಕರು ಅವರ ಶೈಕ್ಷಣಿಕ ಅರ್ಹತೆ ಏನು ಎಂಬುದು ಮತ್ತು ಅವರು ಎಷ್ಟು ತರಬೇತಿ ಪಡೆದಿರುತ್ತಾರೆ ಎಂಬುವುದು ಸದ್ಯದ ಪ್ರಶ್ನೆಯಾಗಿದೆ ಎಂದು ಹೇಳಿರುವುದನ್ನು ವರದಿ ಉಲ್ಲೇಖಿಸಿದೆ.

ರಶ್ಮಿತಾ ಅನೀಶ್

Exit mobile version