ಆಡಳಿತ ಹಿತದೃಷ್ಟಿಯಿಂದ ಬಿಬಿಎಂಪಿ ವಿಭಜಿಸಲು ಮುಂದಾದ ಕರ್ನಾಟಕ ಸರ್ಕಾರ : ಸಮಿತಿ ರಚನೆ ಮಾಡಿ ಆದೇಶ

ಬೆಂಗಳೂರು: ಬಿಬಿಎಂಪಿ (Government to split BBMP) ನಿರ್ವಹಣೆ ಮತ್ತು ಸಾರ್ವಜನಿಕರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಹಿತದೃಷ್ಟಿಯಿಂದ, ಕರ್ನಾಟಕ ಸರ್ಕಾರವು ಪಾಲಿಕೆಯನ್ನು

ವಿಭಜಿಸಲು ಪ್ರಸ್ತಾಪಿಸಿತು ಮತ್ತು ಹಿಂದಿನ ತಜ್ಞರ ಮಂಡಳಿಯನ್ನು ಮರುಸಂಘಟಿಸಲು ಆದೇಶಿಸಿತು. ಜತೆಗೆ ನಿಗದಿತ ಸಮಯದಲ್ಲಿ ವರದಿ ಪ್ರಕಾರ ಪಾಲಿಕೆಯನ್ನು ಪುನರ್ ರಚನೆ ಮಾಡಲು ಸರಕಾರ ನಿರ್ಧರಿಸಿದೆ.

split BBMP

ಆದೇಶದ ಪ್ರಕಾರ, ಆಡಳಿತದ ಹಿತದೃಷ್ಟಿಯಿಂದ ಬಿಬಿಎಂಪಿ ಪಾಲಿಕೆಯನ್ನು ವಿಭಜಿಸುವುದು ಮತ್ತು ಸಾರ್ವಜನಿಕರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಸೂಕ್ತವೆಂದು ಪರಿಗಣಿಸಲಾಗಿದೆ.

ಪಾಲಿಕೆಯನ್ನು ಈ ರೀತಿ ವಿಭಜಿಸುವ ಮೊದಲು ತಜ್ಞರ ಸಮಿತಿಯನ್ನು ನೇಮಿಸಿ ನಿಗದಿತ ಸಮಯದೊಳಗೆ ವರದಿ ಸಲ್ಲಿಸಲು ಸರ್ಕಾರ (Government to split BBMP) ನಿರ್ಧರಿಸಿದೆ.

ಇದನ್ನು ಓದಿ: ಗೂಗಲ್ ಪೇನಲ್ಲಿ ಕ್ರೆಡಿಟ್ ಕಾರ್ಡ್ ಬಳಸಿ ಪಾವತಿ ಮಾಡೋದು ಹೇಗೆ? ಯಾವೆಲ್ಲ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಗಳಿಗೆ ಈ ಸೇವೆ ಲಭ್ಯ?

ಈ ಹಿಂದೆ ಸಮಿತಿಗೆ ನಿವೃತ್ತ ಐಎಎಸ್ (IAAS) ಅಧಿಕಾರಿ ಬಿ.ಎಸ್.ಪಾಟೀಲ್ ಅಧ್ಯಕ್ಷರಾಗಿದ್ದರು. ಇದಲ್ಲದೇ ಪ್ರಸ್ತುತ ಕಾರ್ಪೊರೇಟ್ ಆಡಳಿತದ ಹಿತದೃಷ್ಟಿಯಿಂದ ಅಧ್ಯಯನ ನಡೆಸಿ ವರದಿ ಸಲ್ಲಿಸಲು

ಬಿ.ಎಸ್.ಪಾಟೀಲ್ (B S Patil) ಅಧ್ಯಕ್ಷತೆಯ ಸಮಿತಿಯನ್ನು ಪುನರ್ ರಚನೆ ಮಾಡಲು ಸರ್ಕಾರ ಈಗ ನಿರ್ಧರಿಸಿದೆ.

ಪಾಟೀಲ್ ಅಧ್ಯಕ್ಷತೆಯ ಸಮಿತಿಯಲ್ಲಿ ಅದರಂತೆ ಹಿಂದಿನ ಬೆಂಗಳೂರು (Bengaluru) ಅಜೆಂಡಾ ಟಾಸ್ಕ್ ಫೋರ್ಸ್​ ಸದಸ್ಯ ರವಿಚಂದರ್ ಮತ್ತು ಬಿಬಿಎಂಪಿ ನಿವೃತ್ತ ಆಯುಕ್ತ ಸಿದ್ದಯ್ಯ ಅವರನ್ನು ಸದಸ್ಯರನ್ನಾಗಿ

ನೇಮಿಸಲಾಗಿದೆ.ಸಮಿತಿಯು ವರದಿಯನ್ನು ಬಿಬಿಎಂಪಿ ಪುನರ್ ರಚನೆ ಸಂಬಂಧ ಅಧ್ಯಯನ ನಡೆಸಿ ಸರ್ಕಾರಕ್ಕೆ ಸಲ್ಲಿಸಬೇಕು.ಸಮಿತಿಗೆ ಬೇಕಾದ ಅಗತ್ಯ ಮಾಹಿತಿಯನ್ನು ಪಾಲಿಕೆ ವಿಶೇಷ ಆಯುಕ್ತರು (ಆಡಳಿತ) ಒದಗಿಸಬೇಕು.

ಇದನ್ನು ಓದಿ: ಜನಾರ್ದನ ರೆಡ್ಡಿ ದಂಪತಿಗೆ ಶಾಕ್​ ಕೊಟ್ಟ ನ್ಯಾಯಾಲಯ : ಆಸ್ತಿ ಜಪ್ತಿಗೆ ಸಿಬಿಐ ವಿಶೇಷ ಕೋರ್ಟ್​ ಆದೇಶ

ಪೀಠೋಪಕರಣಗಳು, ವಾಹನ ಸೌಲಭ್ಯ, ಉತ್ತಮ ಕಚೇರಿ, ಕೊಠಡಿ, ಅಗ್ಯತ್ಯ ಸಿಬ್ಬಂದಿ ಸೇರಿದಂತೆ ಸಮಿತಿಗೆ ಇನ್ನಿತರ ಅವಶ್ಯ ಸೌಲಭ್ಯ ಒದಗಿಸುವಂತೆ ನಗರಾಭಿವೃದ್ಧಿ

ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಹೆಚ್​ಎಸ್​ ಶಿವಕುಮಾರ್ ಅವರು ಆದೇಶ ಹೊರಡಿಸಿದ್ದಾರೆ.

ರಶ್ಮಿತಾ ಅನೀಶ್

Exit mobile version