Business Desk: ಭಾರತದಲ್ಲಿ ಇತ್ತೀಚಿನ ವರ್ಷಗಳಲ್ಲಿ ಈ ಯುನಿಫೈಡ್ ಪೇಮೆಂಟ್ಸ್ ಇಂಟರ್ ಫೇಸ್ ಅಂದರೆ ಯುಪಿಐ ಪೇಮೆಂಟ್ (GooglePay through credit card) ಸಾಕಷ್ಟು ಜಪ್ರಿಯತೆ ಗಳಿಸಿದೆ.
ಅಲ್ಲದೆ ತುಂಬಾ ಉಪಯುಕ್ತವಾಗಿವೆ. ಅಲ್ಲದೆ ಇದು ಸುಲಭ ಹಾಗೂ ಸುರಕ್ಷಿತ ವಿಧಾನವಾಗಿದೆ.ಈಗಾಗಲೇ ಅನೇಕ ಜನಪ್ರಿಯ ಪಾವತಿ ಗೇಟ್ ವೇಗಳು ಈಗ ಲಭ್ಯವಿವೆ.
ಇವುಗಳಲ್ಲಿ ಗೂಗಲ್ ಪೇ (Google Pay) ಕೂಡ ಒಂದು.

ಗೂಗಲ್ ಪೇ ನಲ್ಲಿ ತಮ್ಮ ಬ್ಯಾಂಕ್ ಖಾತೆ, ಡೆಬಿಟ್ ಕಾರ್ಡ್(Debit Card) ಬಳಸಿ ಯಪಿಐ ಪಾವತಿಗಳನ್ನು ಮಾಡಲು ಬಳಕೆದಾರರಿಗೆ ಅವಕಾಶ ನೀಡುತ್ತದೆ ಎಂಬುದು ಎಲ್ಲರಿಗೂ ಗೊತ್ತು. ಆದರೆ ಇದೀಗ
ಆಯ್ದ ಕೆಲವು ಕ್ರೆಡಿಟ್ ಕಾರ್ಡ್ ಗಳನ್ನು (Credit Card) ಕೂಡ ಬಳಸಿ ಯುಪಿಐ ಪಾವತಿಗಳನ್ನು ಗೂಗಲ್ ಪೇ (GooglePay through credit card) ಮೂಲಕ ಮಾಡಬಹುದು ಎಂಬುದು ಅನೇಕರಿಗೆ ತಿಳಿದಿಲ್ಲ.
ಇದನ್ನು ಓದಿ: ಬಿಜೆಪಿ ಸರಕಾರದ ವಿರುದ್ಧ ಇರುವ 40 ಪರ್ಸೆಂಟ್ ಆರೋಪದ ಬಗ್ಗೆ ತನಿಖೆ ನಡೆಸಿ: ಕಾಂಗ್ರೆಸ್ಗೆ ಕುಮಾರಸ್ವಾಮಿ ಸವಾಲು
ಈ ಮೊದಲು ಬ್ಯಾಂಕ್ ಖಾತೆಗಳನ್ನು ಬಳಸಿಕೊಂಡು ಯುಪಿಐ ಪಾವತಿಗಳನ್ನು ಮಾಡಲು ಭಾರತದ ರಾಷ್ಟ್ರೀಯ ಪಾವತಿಗಳ ನಿಗಮ (ಎನ್ ಪಿಸಿಐ) ಬಳಕೆದಾರರಿಗೆ ಅವಕಾಶ ನೀಡಿತ್ತು. ಆದರೆ ಇತ್ತೀಚೆಗೆ
ಯುಪಿಐ ಜೊತೆಗೆ ರುಪೇ (Rupay)ಕ್ರೆಡಿಟ್ ಕಾರ್ಡ್ ಗಳನ್ನು ಗೂಗಲ್ ಪೇ ಸಹಯೋಗದಲ್ಲಿ ಸಮನ್ವಯಗೊಳಿಸಿದೆ. ಈ ಮೂಲಕ ಕ್ರೆಡಿಟ್ ಕಾರ್ಡ್ ಬಳಸಿ ವ್ಯಾಪಾರಿಗಳ ಕ್ಯುಆರ್ ಕೋಡ್ (QR Code)
ಸ್ಕ್ಯಾನ್ ಮಾಡಿ ಪಾವತಿಗಳನ್ನು ಮಾಡಲು ಬಳಕೆದಾರರಿಗೆ ಅವಕಾಶ ನೀಡಿದೆ.ಹಾಗಾಗಿ ಬಳಕೆದಾರರು ಈ ಪಾವತಿಗಳಿಗೆ ಬ್ಲಾಕ್ ಕ್ರೆಡಿಟ್ ಕಾರ್ಡ್ ಅನ್ನು ತಮ್ಮ ಜೊತೆಗೆ ತೆಗೆದುಕೊಂಡು ಹೋಗಬೇಕಾದ ಅಗತ್ಯ ಕೂಡ ಇಲ್ಲ.

ಯಾವೆಲ್ಲ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಗಳಿಗೆ ಈ ಸೇವೆ ಲಭ್ಯ?
ಇಂಡಿಯನ್ ಬ್ಯಾಂಕ್, ಆಕ್ಸಿಸ್ ಬ್ಯಾಂಕ್,ಎಚ್ ಡಿಎಫ್ ಸಿ ಬ್ಯಾಂಕ್, ಕೋಟಕ್ ಮಹೀಂದ್ರ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ ಬಿ), ಕೆನರಾ ಬ್ಯಾಂಕ್,
ಹಾಗೂ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಂತಹ ಪ್ರಮುಖ ಬ್ಯಾಂಕ್ ಗಳ ಎಲ್ಲ ರುಪೇ ಕ್ರೆಡಿಟ್ ಕಾರ್ಡ್ ಬಳಕೆದಾರರು ಈ ಸೌಲಭ್ಯವನ್ನು ಬಳಸಿಕೊಳ್ಳಬಹುದು ಎಂದು ರುಪೇ ಮಾಹಿತಿ ನೀಡಿದೆ.
ಅಷ್ಟೇ ಅಲ್ಲದೆ ಇನ್ನಷ್ಟು ಬ್ಯಾಂಕ್ ಗಳು ಈ ಹೊಸ ಸೇವೆಯನ್ನು ಮುಂದಿನ ದಿನಗಳಲ್ಲಿ ಅನುಷ್ಠಾನಕ್ಕೆ ತರಲಿವೆ ಎಂದು ರುಪೇ ಗ್ರಾಹಕರಿಗೆ ಭರವಸೆ ನೀಡಿದೆ. ಹೀಗಾಗಿ ಮೇಲೆ ಹೇಳಿದ ಯಾವುದೇ
ಬ್ಯಾಂಕ್ ನ ರುಪೇ ಕ್ರೆಡಿಟ್ ಕಾರ್ಡ್ ನಿಮ್ಮ ಬಳಿ ಇದ್ದರೆ, ಅದನ್ನು ನೀವು ಗೂಗಲ್ ಪೇಗೆ ಲಿಂಕ್ ಮಾಡುವ ಮೂಲಕ ಪಾವತಿಗಳನ್ನು ಮಾಡಬಹುದು.

ಗೂಗಲ್ ಪೇನಲ್ಲಿ ಕ್ರೆಡಿಟ್ ಕಾರ್ಡ್ ಬಳಕೆ ಹೇಗೆ?
ಹಂತ 1. ನಿಮ್ಮ ಗೂಗಲ್ ಪೇ ಖಾತೆಗೆ ರುಪೇ ಕ್ರೆಡಿಟ್ ಕಾರ್ಡ್ ಸೇರ್ಪಡೆಗೊಳಿಸಿ.
- ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ಮೊದಲು ಗೂಗಲ್ ಪೇ ಅಪ್ಲಿಕೇಷನ್ಅನ್ನು ತೆರೆಯಿರಿ.
- ನಂತರ ಸೆಟ್ಟಿಂಗ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ
- ನಂತರ ಇಲ್ಲಿ ‘Setup payment method’ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಆ ಬಳಿಕ ಅದರಲ್ಲಿ ‘Add RuPay credit card’ ಎಂಬ
ಆಯ್ಕೆ ಕ್ಲಿಕ್ ಮಾಡಿ. - ನಿಮ್ಮ ಬಳಿ ಇರುವ ಮೇಲೆ ತಿಳಿಸಿದ ಯಾವುದೇ ರುಪೇ ಕ್ರೆಡಿಟ್ ಕಾರ್ಡ್ ನ ಕೊನೆಯ ಆರು ಅಂಕೆಗಳು, ಗಡುವು ದಿನಾಂಕ ( expiry date)
ಹಾಗೂ ಪಿನ್ ಅನ್ನು ನಮೂದಿಸಿ
ಹಂತ 2: ಯುಪಿಐನಲ್ಲಿ ರುಪೇ ಕ್ರೆಡಿಟ್ ಕಾರ್ಡ್ ಸಕ್ರಿಯಗೊಳಿಸಿ ಹಾಗೂ ಅದನ್ನು ಬಳಸಿ.
- ನಿಮ್ಮಬಳಿ ಇರುವ ಕಾರ್ಡ್ ಅನ್ನು ಸಕ್ರಿಯಗೊಳಿಸಲು ಗೂಗಲ್ ಪೇ ನಲ್ಲಿ ನಿಮ್ಮ ಪ್ರೊಫೈಲ್ ನಲ್ಲಿ ‘RuPay credit card on UPI’ ಎಂಬ ಆಯ್ಕೆ
ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಿ. - ನಂತರ ನಿಮ್ಮ ಬಳಿ ಇರುವ ರುಪೇ ಕ್ರೆಡಿಟ್ ಕಾರ್ಡ್ ಬ್ಯಾಂಕ್ ಆಯ್ಕೆ ಮಾಡಿ.
- ನಂತರ ನಿಮ್ಮ ಕ್ರೆಡಿಟ್ ಕಾರ್ಡ್ ಗೆ ಯುಪಿಐ ಪಿನ್ ಸೆಟ್ ಮಾಡಿಕೊಳ್ಳಿ
- ಈಗ ಯುಪಿಐ ಪಾವತಿಗಳನ್ನು ಮಾಡಲು ನಿಮ್ಮ ರುಪೇ ಕ್ರೆಡಿಟ್ ಕಾರ್ಡ್ ಸಿದ್ಧವಾಗಿದೆ.
ರಶ್ಮಿತಾ ಅನೀಶ್