ಸರ್ಕಾರಿ ಅಧಿಕಾರಿಗಳಿಗೆ ಸೇರಿದ 60 ಸ್ಥಳಗಳಲ್ಲಿ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳ ದಾಳಿ

Bengaluru: ಲೋಕಸಭೆ ಚುನಾವಣೆಯ ಹೊತ್ತಿನಲ್ಲಿಯೇ ಲೋಕಾಯುಕ್ತ ಪೊಲೀಸರು ಸರ್ಕಾರಿ ಅಧಿಕಾರಿಗಳಿಗೆ (Govt Officials -Lokayukta Raid) ಬಿಸಿ ಮುಟ್ಟಿಸಿದ್ದಾರೆ. ಪಿಡಿಓ (PDO) ಸೇರಿದಂತೆ

ವಿವಿಧ ಹಂತದ 16 ಅಧಿಕಾರಿಗಳ ಮನೆಗಳ ಮೇಲೆ ಬುಧವಾರ ಲೋಕಾಯುಕ್ತ ದಾಳಿ ನಡೆದಿದೆ.ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿದ ಆರೋಪದ ಮೇಲೆ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಬುಧವಾರ

ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು (Lokayukta) ದಾಳಿ ನಡೆಸಿದ್ದಾರೆ.


16 ಸರ್ಕಾರಿ ಅಧಿಕಾರಿಗಳಿಗೆ ಸೇರಿದ 60 ಸ್ಥಳಗಳ ಮೇಲೆ (Govt Officials -Lokayukta Raid) ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದಾರೆ. ದಾಖಲೆಗಳ ಪರಿಶೀಲನೆ ನಡೆಯುತ್ತಿದ್ದು, ಎಷ್ಟು

ಅಕ್ರಮ ಆಸ್ತಿ ಪತ್ತೆಯಾಗಿದೆ? ಎಂದು ಸಂಜೆಯ ವೇಳೆಗೆ ಸಂಪೂರ್ಣ ಮಾಹಿತಿ ಸಿಗಲಿದೆ.

ದಾಳಿಗೊಳಗಾದ ಅಧಿಕಾರಿಗಳ ವಿವರ

ರಂಗನಾಥ್ ಎಸ್.ಪಿ – ಬಿಬಿಎಂಪಿಯ (BBMP) ಯಲಹಂಕ ಹಾಗೂ ಬ್ಯಾಟರಾಯನಪುರ ವಿಭಾಗದ ಚೀಫ್ ಇಂಜಿನಿಯರ್ ಗೆ ಸಂಬಂಧಿಸಿದ ಬೆಂಗಳೂರಿನ 5 ಸ್ಥಳಗಳ ಮೇಲೆ ದಾಳಿ ನಡೆಸಿದೆ.

ರೂಪ – ಡೆಪ್ಯುಟಿ ಕಮಿಷನರ್, ಅಬಕಾರಿ ಇಲಾಖೆ – ಸಂಬಂಧಿತ ಉಡುಪಿಯ 5 ಸ್ಥಳಗಳ ಮೇಲೆ ದಾಳಿ ಮಾಡಲಾಗಿದೆ.

ಪ್ರಕಾಶ್ – ಜ್ಯೂನಿಯರ್ ಇಂಜಿನಿಯರ್ – ಕಾರವಾರ (Karwar) – ಉತ್ತರ ಕನ್ನಡ ಜಿಲ್ಲೆಯ 4 ಸ್ಥಳಗಳ ಮೇಲೆ ಏಕಾಏಕಿ ದಾಳಿ.

ಫಯಾಜ್ ಅಹಮದ್ – ಅಸಿಸ್ಟೆಂಟ್ ಇಂಜಿನಿಯರ್ – ಸಂಬಂಧಿಸಿದ ಮೈಸೂರಿನ 12 ಸ್ಥಳಗಳ ಮೇಲೆ ದಾಳಿ.

ಜಯಣ್ಣ ಬಿ.ವಿ. ಮುಖ್ಯ ಕಾರ್ಯಕಾರಿ ಅಭಿಯಂತರ, ಕೊಡಗು

ಮಹೇಶ್ ಚಂದ್ರಯ್ಯ ಹೀರೆಮಠ್- ಅರಣ್ಯ ವಲಯದ ಅಧಿಕಾರಿ- ಧಾರವಾಡದ 6 ಸ್ಥಳಗಳು

ಶಿವಕುಮಾರಸ್ವಾಮಿ (Shivakumaraswamy)– ಎಕ್ಸಿಕ್ಯೂಟಿವ್ ಇಂಜಿನಿಯರ್ ಬೀದರ್ ನ 4 ಸ್ಥಳಗಳು

ನಾಗರಾಜಪ್ಪ- ಅಸ್ಟಿಸೆಂಟ್ ಡೈರೆಕ್ಟರ್ ಕೋಲಾರದ 5 ಕಡೆಗಳಲ್ಲಿ ದಾಳಿ ಮಾಡಿದ್ದಾರೆ.

ಷಣ್ಮುಗಪ್ಪ, ಎಆರ್ ಟಿಓ ಜಮಖಂಡಿ, ಬಾಗಲಕೋಟೆಯ (Bagalkot) ನಾಲ್ಕು ಕಡೆಗಳಲ್ಲಿ ದಾಳಿ ಮಾಡಿದ್ದಾರೆ.

ಸದಾಶಿವಯ್ಯ, ಅಸ್ಟಿಸೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಚಿಕ್ಕಬಳ್ಳಾಪುರದ 6 ಕಡೆಗಳಲ್ಲಿ ದಾಳಿ ನಡೆಸಿದ್ದಾರೆ.

ದಾಳಿಕೃಷ್ಣಗೌಡ- ದ್ವೀತಿಯ ದರ್ಜೆ ಸಹಾಯಕ ಲೆಕ್ಕಾಧಿಕಾರಿ, ಆಗಸನಪುರ ಗ್ರಾಮ ಪಂಚಾಯಿತಿ ಮಳವಳ್ಳಿ, ಮಂಡ್ಯ (Mandya) 4 ಕಡೆಗಳಲ್ಲಿ ದಾಳಿ ಮಾಡಿದ್ದಾರೆ.

ದಾಳಿಸದಾಶಿವ ಜಯಪ್ಪ, ಸೆಕ್ರೆಟರಿ ಪಿಡಿಓ (PDO), ನಿಡಗುಂದಿ ಗ್ರಾಮ ಬೆಳಗಾವಿಯ 3 ಕಡೆಗಳಲ್ಲಿ ಲೋಕಾಯುಕ್ತ ದಾಳಿ ಮಾಡಿ, ದಾಖಲೆ ಪರಿಶೀಲಿಸುತ್ತಿದ್ದಾರೆ.

ಇದನ್ನು ಓದಿ: ಕುಖ್ಯಾತ ಗ್ಯಾಂಗ್ಸ್ಟರ್ ಮುಕ್ತಾರ್ ಅನ್ಸಾರಿ ಹೃದಯಾಘಾತದಿಂದ ಸಾವು: ಯುಪಿಯಾದ್ಯಂತ ಸೆಕ್ಷನ್ 144

Exit mobile version