ಬಾಳಲ್ಲೂ ಬೆಳಕಿಲ್ಲ, ಮನೆಯಲ್ಲೂ ಬೆಳಕಿಲ್ಲ: ಗೃಹಜ್ಯೋತಿ ಯೋಜನೆಯಿಂದ 35,089 ಫಲಾನುಭವಿಗಳು ವಂಚಿತರು.

Karnataka: ರಾಜ್ಯ ಸರ್ಕಾರದ ಉಚಿತ ವಿದ್ಯುತ್‌ ಯೋಜನೆ ಗೃಹಜ್ಯೋತಿಯ ಗ್ಯಾರಂಟಿ (Gruhajyothi – 35089 people Deprive) ಬೆಳಕಿನಿಂದ ಜಿಲ್ಲೆಯ 35089 ಫಲಾನುಭವಿಗಳು

ವಂಚಿತರಾಗಿದ್ದು, ಮಳೆಯಾಶ್ರಿತ ಪ್ರದೇಶವೇ ಹೆಚ್ಚಿನ ಸಂಖ್ಯೆಯಲ್ಲಿರುವ ಈ ಭಾಗದಲ್ಲಿ ಕೃಷಿ ನಂಬಿ ಜೀವನ ನಡೆಸುವುದು ಬಹಳ ಕಷ್ಟವಾಗಿದ್ದು, ವಿಜಯನಗರ (ಹೊಸಪೇಟೆ) ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ

(Hagari Bommanahalli), ಹಡಗಲಿ, ಕೊಟ್ಟೂರು, ಹರಪನಹಳ್ಳಿ, ಹೊಸಪೇಟೆ ಆರು ತಾಲೂಕುಗಳ ಪೈಕಿ ಮೂರು ವಿಭಾಗಗಳಿದೆ ಇವುಗಳಲ್ಲಿ 35,089 ಜನ ಫಲಾನುಭವಿಗಳು ಯೋಜನೆಯಿಂದ ಹೊರಗುಳಿದಿದ್ದಾರೆ.

ಇಲ್ಲಿನವರು ಒಮ್ಮೆ ಊರು ಬಿಟ್ಟರೆ ವರ್ಷದ ನಂತರವೇ ಊರಿಗೆ ಬಂದು ಕೆಲ ಕಾಲ ಇದ್ದು, ಮತ್ತೆ ಮರಳಿ ಕೆಲಸಕ್ಕಾಗಿ ವಲಸೆ ಹೋಗುತ್ತಾರೆ. ಮಳೆಯಾಶ್ರಿತ ಪ್ರದೇಶವಾಗಿರುವವರಿಂದ ಹೆಚ್ಚಿನ

ಸಂಖ್ಯೆಯಲ್ಲಿರುವ ಈ ಭಾಗದಲ್ಲಿ ಕೃಷಿ ನಂಬಿ ಜೀವನ ನಡೆಸುವುದು ಬಹಳ ಕಷ್ಟಕರವಾಗಿದೆ. ಹಬ್ಬ, ಹರಿದಿನಗಳಲ್ಲಿ ಮಾತ್ರ ಬಂದು ಹೋಗುತ್ತಾರೆ. ಹಾಗಾಗಿ, ಇವರು ಸರಕಾರದ ಬಹುತೇಕ

ಯೋಜನೆಗಳಿಂದ ವಂಚಿತರಾಗುವುದು (Gruhajyothi – 35089 people Deprive) ಸಾಮಾನ್ಯವಾಗಿ ಬಿಟ್ಟಿದೆ.

ಸ್ಥಳೀಯವಾಗಿ ಕೆಲಸ ಸಿಗದೇ ವರ್ಷ ಪೂರ್ತಿ ಮಂಡ್ಯ (Mandya), ಮೈಸೂರು, ಚಿಕ್ಕಮಗಳೂರು, ಮಂಗಳೂರು ಭಾಗಗಳಲ್ಲಿ ಕಬ್ಬು ಕಡಿಯುವ ಮತ್ತು ಕಾಫಿ ತೋಟಗಳಲ್ಲಿ ಕೂಲಿ ಕೆಲಸ ಮಾಡಿ ಜೀವನ

ಸಾಗಿಸುತ್ತಾ ವಲಸೆ ಹೋಗಿರುವ ಕಾರಣದಿಂದ ಈ ಭಾಗದಲ್ಲಿ ಊರು ತೊರೆಯುವವರ ಸಂಖ್ಯೆ ಹೆಚ್ಚಿದ್ದು . ಹಾಗಾಗಿ ಇವರ ಬಾಳಿನಲ್ಲಿ ಬೆಳಕಿಲ್ಲ. ಮನೆಯಲ್ಲಿಯೂ ಬೆಳಕಿಲ್ಲ ಎನ್ನುವಂತಾಗಿದೆ .

ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳಲ್ಲಿ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಗೃಹಜ್ಯೋತಿ (Gruhajyothi) ಯೋಜನೆಯಡಿ ಜಿಲ್ಲೆಯಲ್ಲಿ ಒಟ್ಟು 3,15,235 ಗ್ರಾಹಕರು ನೋಂದಣಿಯಾಗಿದ್ದು,

ಇದರಲ್ಲಿ ಹೊಸಪೇಟೆ 70617,ಹಗರಿಬೊಮ್ಮನಹಳ್ಳಿ ವಿಭಾಗದಲ್ಲಿ 144518, ಹರಪನಹಳ್ಳಿ 280146 ಸೇರಿ 65011 ಗ್ರಾಹಕರು ನೋಂದಣಿಯಾಗಿದ್ದಾರೆ. ಒಟ್ಟು ಗ್ರಾಹಕರಲ್ಲಿ 35089 ಆರ್‌.ಆರ್‌.ಸಂಖ್ಯೆ

ಜ್ಯೋತಿಯಿಂದ ಹೊರಗುಳಿದಿದ್ದಾರೆ

ನೋಂದಣಿ-ವಿಭಾಗ
ಗೃಹಜ್ಯೋತಿಯಡಿ ನೋಂದಣಿಯಾದವರು
ಹರಪನಹಳ್ಳಿ ವಿಭಾಗ –65011
ಹೊಸಪೇಟೆ ವಿಭಾಗ – 70617
ಹಗರಿಬೊಮ್ಮನಹಳ್ಳಿ ವಿಭಾಗ –144518,

ನಗರ ಪ್ರದೇಶಗಳಲ್ಲಿ ಒಬ್ಬರೇ ಮಾಲೀಕರ ಒಂದೆರಡು ಮನೆಗಳಿರುತ್ತವೆ. ಬಾಡಿಗೆಗೆ ಯಾರೂ ಬರದೆ ಮನೆಗಳು ಖಾಲಿ ಇರುವ ಕಾರಣ ನೋಂದಣಿಯಾಗಿಲ್ಲ. ಹಗರಿಬೊಮ್ಮನಹಳ್ಳಿ ವಿಭಾಗದ ವ್ಯಾಪ್ತಿಯ

ಜನತೆಗೆ 200 ಯೂನಿಟ್‌ಗಿಂತ (Unit) ಹೆಚ್ಚು ವಿದ್ಯುತ್‌ ಬಳಕೆ ಮಾಡುವವರು ಸೇರಿ 4600 ಗ್ರಾಹಕರು ಯೋಜನೆಯಡಿ ನೋಂದಣಿಯಾಗಿಲ್ಲ ಎಂದು ಶ್ರೀನಿವಾಸ್‌, ಇಇ, ಜೆಸ್ಕಾಂ (Jescom), ಹೊಸಪೇಟೆ

ವಿಭಾಗದ ಅಧಿಕಾರಿ ಹೇಳಿದ್ದಾರೆ.

ಇದನ್ನು ಓದಿ: ಮೋದಿಯನ್ನು ಗಾಂಧೀಜಿಗೆ ಹೋಲಿಸಿದ ಉಪರಾಷ್ಟ್ರಪತಿ ಜಗದೀಪ್ ಧನಕರ್: ವಿರೋಧ ಪಕ್ಷಗಳು ಕೆಂಡಾಮಂಡಲ

Exit mobile version