ವಿದ್ಯುತ್ ನಿಗಮಗಳಿಗೆ ಶಾಕ್ ನೀಡಿದ ಸರ್ಕಾರ ; ಗೃಹಜ್ಯೋತಿಯ ಅರ್ಧ ಮೊತ್ತ ಮಾತ್ರ ಬಿಡುಗಡೆ..!

Bengaluru: ರಾಜ್ಯ ಕಾಂಗ್ರೆಸ್ (Congress) ಸರ್ಕಾರ ಪ್ರಮುಖ ಐದು ಗ್ಯಾರಂಟಿಗಳಲ್ಲಿ ಒಂದಾಗಿರುವ 200 ಯೂನಿಟ್ (gruhajyothi half amount released) ಉಚಿತ ವಿದ್ಯುತ್

ನೀಡುವ ಗೃಹಜ್ಯೋತಿ ಯೋಜನೆಯ ಮೊದಲ ಕಂತಿನ ಹಣವನ್ನು ರಾಜ್ಯದ ವಿದ್ಯುತ್ ನಿಗಮಗಳಿಗೆ ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ಆದರೆ ನಿಗಮಗಳು ಸಲ್ಲಿಸಿರುವ ಮೊತ್ತದಲ್ಲಿ ಅರ್ಧ

ಮೊತ್ತವನ್ನು ಮಾತ್ರ ಬಿಡುಗಡೆ ಮಾಡಲಾಗಿದೆ. ರಾಜ್ಯ ಸರ್ಕಾರದ ಈ ನಿರ್ಧಾರದಿಂದಾಗಿ ಇದೀಗ ವಿದ್ಯುತ್ ನಿಗಮಗಳು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಮೂಲಗಳ ಪ್ರಕಾರ ರಾಜ್ಯ

ಸರ್ಕಾರ ಹೀಗೆ ಅರ್ಧ ಹಣವನ್ನು ಮಾತ್ರ ಬಿಡುಗಡೆ ಮಾಡಿದರೆ, ಮುಂದಿನ ದಿನಗಳಲ್ಲಿ ನೌಕರರಿಗೆ ಸಂಬಳ ನೀಡುವುದು ಕಷ್ಟವಾಗುತ್ತದೆ ಎನ್ನಲಾಗಿದೆ.

gruhajyothi half amount released

ಇನ್ನು ಗೃಹಜ್ಯೋತಿ ಯೋಜನೆ ಅಡಿಯಲ್ಲಿ ಜುಲೈ (July) ತಿಂಗಳಿನಲ್ಲಿ ಒಟ್ಟು 970.50 ಕೋಟಿ ಅನುದಾನ ಬಿಡುಗಡೆ ಮಾಡುವಂತೆ ರಾಜ್ಯ ವಿದ್ಯುತ್ ನಿಗಮಗಳು ರಾಜ್ಯ ಸರ್ಕಾರಕ್ಕೆ

ಪ್ರಸ್ತಾಪ ಸಲ್ಲಿಸಿದ್ದವು. ಈ ಪೈಕಿ ರಾಜ್ಯ ಸರ್ಕಾರ ಕೇವಲ 476 ಕೋಟಿ ರೂಪಾಯಿ ಮಾತ್ರ ಅನುದಾನ ಬಿಡುಗಡೆ ಮಾಡಿದ್ದು, ಇನ್ನುಳಿದ ಹಣವನ್ನು ಯಾವಾಗ ಬಿಡುಗಡೆ ಮಾಡಲಾಗುವುದು

ದಂಡ ಕಟ್ಟಿ: 2019 ಕ್ಕಿಂತ ಮುಂಚಿನ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಕಡ್ಡಾಯ, ಇಲ್ಲವೇ ದಂಡ ಕಟ್ಟಿ !

ಎಂಬ ಬಗ್ಗೆ ಯಾವುದೇ ಮಾಹಿತಿಯನ್ನು (gruhajyothi half amount released) ನಿಗಮಗಳಿಗೆ ನೀಡಿಲ್ಲ ಎನ್ನಲಾಗಿದೆ.

ವಿದ್ಯುತ್ ಸರಬರಾಜು ಕಂಪನಿಗಳು- ಗೃಹಜ್ಯೋತಿ ಯೋಜನೆ ಸಹಾಯಧನಕ್ಕಾಗಿ ಸಲ್ಲಿಸಿರುವ ಮೊತ್ತದ ವಿವರ ಹೀಗಿದೆ
1.ಬೆಸ್ಕಾಂ – 478.95 ಕೋಟಿ

  1. ಮೆಸ್ಕಾಂ – 108.6 ಕೋಟಿ
  2. ಹೆಸ್ಕಾಂ – 167.35 ಕೋಟಿ
  3. ಗುವಿಕಂ – 108.50 ಕೋಟಿ
  4. ಚೆಸ್ಕಾಂ – 104.63 ಕೋಟಿ
  5. ಹುಕ್ಕೇರಿ – 3.02 ಕೋಟಿ
    ಒಟ್ಟು – 970.5 ಕೋಟಿ

ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಮೊತ್ತದ ವಿವರ ಹೀಗಿದೆ :
1.ಬೆಸ್ಕಾಂ – 235.07 ಕೋಟಿ

  1. ಮೆಸ್ಕಾಂ – 52.73 ಕೋಟಿ
  2. ಹೆಸ್ಕಾಂ – 82.2 ಕೋಟಿ
  3. ಗುವಿಕಂ – 53.46 ಕೋಟಿ
  4. ಚೆಸ್ಕಾಂ – 51.26 ಕೋಟಿ
  5. ಹುಕ್ಕೇರಿ – 1.46 ಕೋಟಿ
    ಒಟ್ಟು – 476.00 ಕೋಟಿ

ಇನ್ನು ರಾಜ್ಯದಲ್ಲಿ ಈವರೆಗೂ ಗೃಹಜ್ಯೋತಿ ಉಚಿತ ವಿದ್ಯುತ್ ಯೋಜನೆಗೆ ಒಂದು ಕೋಟಿಗೂ ಅಧಿಕ ಅರ್ಜಿ ಸಲ್ಲಿಕೆಯಾಗಿವೆ. ರಾಜ್ಯದ ಆರು ವಿದ್ಯುತ್ ಕಂಪನಿಗಳನ್ನು ಸೇರಿಸಿಕೊಂಡು

ಒಟ್ಟಾರೆ 1.03 ಕೋಟಿ ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ಇಂಧನ ಇಲಾಖೆ ಮಾಹಿತಿ ನೀಡಿದೆ.

Exit mobile version