ಡೇವಿಡ್ ಮಿಲ್ಲರ್ ಭರ್ಜರಿ ಹೊಡೆತಕ್ಕೆ ಕಂಗಾಲಾದ CSK!

GT

ಗುಜರಾತ್ ಟೈಟನ್ಸ್(Gujarat Titans) ಮತ್ತು ಸಿಎಸ್ಕೆ(CSK) ತಂಡಗಳ ನಡುವೆ ನಡೆದ ಬೃಹತ್ ಕಾಳಗದಲ್ಲಿ ಡೇವಿಡ್ ಮಿಲ್ಲರ್(David Miller) ಆರ್ಭಟಕ್ಕೆ ಜಡೇಜಾ(Jadeja) ಪಡೆ ತತ್ತರಿಸಿ ಹೋಗಿದೆ. ಡೇವಿಡ್ ಮಿಲ್ಲರ್ ಬ್ಯಾಟಿಂಗ್ ಮಾಸ್ಟರ್‌ಕ್ಲಾಸ್‌ಗೆ ಜೊತೆಯಾಗಿ ರಶೀದ್ ಖಾನ್(Rashid Khan) ಅಲ್ಪ ಅವಧಿಯ ಸೂಪರ್ ಇನ್ನಿಂಗ್ಸ್ ಗುಜರಾತ್ ಟೈಟಾನ್ಸ್ ಚೆನ್ನೈ ಸೂಪರ್ ಕಿಂಗ್ಸ್(Chennai Super Kings) ಅನ್ನು ಕೊನೆಯ ಓವರ್ ನಲ್ಲಿ ಮಣಿಸಿದೆ.

ಚೆನೈ ಸೂಪರ್ ಕಿಂಗ್ಸ್ ತಂಡವನ್ನು ಸೋಲಿಸಲು 170 ರನ್ ಗುರಿಯನ್ನು ಬೆನ್ನಟ್ಟಿದ ಗುಜರಾತ್ ತಂಡ ಮೊದಲಿನಿಂದಲೂ ಇಂಡಿಯನ್ ಪ್ರೀಮಿಯರ್ ಲೀಗ್ (IPL) 2022ರ ಅಗ್ರಸ್ಥಾನದಲ್ಲೇ ಕುಳಿತುಕೊಂಡಿತ್ತು. ಆರು ಪಂದ್ಯಗಳಲ್ಲಿ ಐದು ಪಂದ್ಯಗಳನ್ನು ಗೆಲ್ಲುವ ಮೂಲಕ ಮೊದಲ ಸ್ಥಾನದಲ್ಲಿರುವ ತಂಡವಾಗಿತ್ತು. ಇದೀಗ ಪಾಯಿಂಟ್ಸ್ ಟೇಬಲ್‌ನಲ್ಲಿ ಈ ಪಂದ್ಯವನ್ನು ಗೆಲ್ಲುವ ಮುಖೇನ ಮತ್ತೊಮ್ಮೆ ಅಗ್ರಸ್ಥಾನದಲ್ಲಿದ್ದಾರೆ. ಆದ್ರೆ CSK ಆರು ಪಂದ್ಯಗಳನ್ನು ಆಡಿ ಕೇವಲ ಆರ್.ಸಿ.ಬಿ ತಂಡದ ಮೇಲೆ ಗೆಲುವು ಸಾಧಿಸಿ ೧ ಪಂದ್ಯವನ್ನು ಗೆದ್ದು ಕೆಳಕ್ರಮಾಂಕದಲ್ಲಿ ಉಳಿದಿದೆ.

ನಾಯಕ ಹಾರ್ದಿಕ್ ಪಾಂಡ್ಯ ಅನುಪಸ್ಥಿತಿಯಲ್ಲಿ ಮಿಲ್ಲರ್ ಏಕಾಂಗಿ ಹೋರಾಟ ನಡೆಸಿದರು ಮತ್ತು ಅಜೇಯ 51 ಎಸೆತಗಳಲ್ಲಿ 94 ರನ್ ಗಳಿಸುವ ಮೂಲಕ ತಂಡದ ಗೆಲುವಿಗೆ ಆಸರೆಯಾದರು. ಸ್ಟ್ಯಾಂಡ್-ಇನ್ ನಾಯಕ ರಶೀದ್ ಖಾನ್ 21 ಎಸೆತಗಳಲ್ಲಿ 40 ರನ್ ಗಳಿಸಿದರು. ಕೊನೆಯ ಹಂತದವರೆಗೂ ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದ ಗುಜರಾತ್ ಟೈಟಾನ್ಸ್ ತಂಡ, ಮಿಲ್ಲರ್ ಅವರ ಮುಂದಾಳತ್ವದಲ್ಲಿ ಸುಲಭವಾಗಿ 2 ರನ್ ಭಾರಿಸುವ ಮೂಲಕ ಪಂದ್ಯವನ್ನು ಗೆದ್ದು ಬೀಗಿತು.

ಸಿಎಸ್ಕೆ 6 ಪಂದ್ಯಗಳನ್ನು ಆಡಿ ಕೇವಲ 1 ಪಂದ್ಯವನ್ನು ಗೆದ್ದು, 5 ಪಂದ್ಯವನ್ನು ಸೋತು ಪಾಯಿಂಟ್ಸ್ ಟೇಬಲ್ ನಲ್ಲಿ ಕೆಳ ಕ್ರಮಾಂಕವನ್ನು ತಲುಪಿದೆ.

Exit mobile version