Visit Channel

ಕೊನೆಯ ಓವರ್ ನಲ್ಲಿ ಥ್ರಿಲ್ ಕೊಟ್ಟ ಗುಜರಾತ್ ಟೈಟಾನ್ಸ್!

gujarat titans

ಟಾಟಾ ಐಪಿಎಲ್(Tata IPL) 2022ರ ನೂತನ ತಂಡಗಳಾದ ಲಕ್ನೋ ಸೂಪರ್ ಜೈಂಟ್ಸ್(Lucknow Super Giants) ಮತ್ತು ಗುಜರಾತ್ ಟೈಟನ್ಸ್(Gujarat Titans) ನಡುವೆ ನಡೆದ ಮೊದಲ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿದೆ. ಮೊಹಮ್ಮದ್ ಶಮಿ(Mohammud Shami), ಡೇವಿಡ್ ಮಿಲ್ಲರ್(David Miller) ಮತ್ತು ರಾಹುಲ್ ತೆವಾಟಿಯಾ(Rahul Tewatia) ಅವರು ಮುಂಬೈನ(Mumbai) ವಾಂಖೆಡೆ ಸ್ಟೇಡಿಯಂನಲ್ಲಿ(Wankhade Stadium) ಕಮಾಲ್ ಮಾಡಿದ್ದಾರೆ.

tata ipl 2022

ಕೆ.ಎಲ್ ರಾಹುಲ್(KL Rahul) ಅವರ ನಾಯಕತ್ವದಿಂದಾಗಿ ಎಲ್ಎಸ್ಜಿ ತಂಡ ಸೋಲನ್ನು ಅನುಭವಿಸಿತು. ಇಬ್ಬರು ಆಕ್ರಮಣಕಾರಿ ಬ್ಯಾಟರ್ಗಳ ವಿರುದ್ಧ ಸ್ಪಿನ್ನರ್ಗಳೊಂದಿಗಿನ ಸೆಣಸಾಟ ನಿರಂತರವಾಗಿ ಸಾಗಿತು. ಬೌಲಿಂಗ್ ಮಾಡಲು ಆಯ್ಕೆ ಮಾಡಿಕೊಂಡ ನಂತರ, ಗುಜರಾತ್ ಟೈಟಾನ್ಸ್ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಸೋಲಿಸುವ ಪ್ರಮುಖ ಕಾರಣಗಳನ್ನು ತಮ್ಮದಾಗಿಸಿಕೊಂಡಿತ್ತು, ಮೊಹಮ್ಮದ್ ಶಮಿ ಹೊಸ ಬಾಲ್ ಮೂಲಕ ಮೂರು ಓವರ್ಗಳ ಸ್ಪೆಲ್ನಲ್ಲಿ ಮೂರು ವಿಕೆಟ್ಗಳನ್ನು ಕಬಳಿಸಿದರು. ದೀಪಕ್ ಹೂಡಾ ಮತ್ತು ಆಯುಶ್ ಬಡೋನಿ ಅರ್ಧಶತಕಗಳನ್ನು ಗಳಿಸುವ ಮೊದಲು ಕೆ.ಎಲ್ ರಾಹುಲ್ ಗೋಲ್ಡನ್ ಡಕ್‌ಗೆ ಔಟಾದರು.

ಈ ಮೂಲಕ ನಾಯಕನ ಆಟ ಕ್ರಿಕೆಟ್ ಅಭಿಮಾನಿಗಳಿಗೆ ಕಾಣಿಸಲಿಲ್ಲ. ಗುಜರಾತ್ ಟೈಟಾನ್ಸ್ ತಂಡವು ಶುಭಮನ್ ಗಿಲ್ ಮತ್ತು ವಿಜಯ್ ಶಂಕರ್ ಅವರನ್ನು ಪ್ರಾರಂಭದಲ್ಲೇ ಕಳೆದುಕೊಂಡಿತು. ಆದರೆ ನಾಯಕ ಹಾರ್ದಿಕ್ ಪಾಂಡ್ಯ ಅವರು ಮ್ಯಾಥ್ಯೂ ವೇಡ್ ಅವರನ್ನು ಶೀಘ್ರವಾಗಿ ಪತನಗೊಳಿಸುವುದರೊಂದಿಗೆ ಇನ್ನಿಂಗ್ಸ್ ಅನ್ನು ಮತ್ತಷ್ಟು ಬಲ ಪಡಿಸಿದರು. ಗುಜರಾತ್ ಟೈಟಾನ್ಸ್‌ಗೆ ಅಂತಿಮ ಓವರ್‌ನಲ್ಲಿ 11 ರನ್ ಅಗತ್ಯವಿತ್ತು ಮತ್ತು ಅಭಿನವ್ ಮನೋಹರ್ ಮೊದಲ ಎರಡು ಎಸೆತಗಳಲ್ಲಿ ಬೌಂಡರಿಗಳನ್ನು ಬಾರಿಸಿ ತಮ್ಮ ತಂಡದ ಸ್ಕೋರನ್ನು ಸುಲಭಗೊಳಿಸಿದರು.

ipl 2022

ಲಕ್ನೋ ಸೂಪರ್ ಜೈಂಟ್ಸ್ ಅಭಿಮಾನಿಗಳಿಗೆ ನಿರಾಶೆಯ ಮುಖ ಕಾದಿತ್ತು. ಕಾರಣ ಅವರ ಅತ್ಯುತ್ತಮ ಬೌಲರ್ ದುಷ್ಮಂತ ಚಮೀರ ಅವರು ತಮ್ಮ ಮೂರು ಓವರ್ ಗಳನ್ನು ಪೂರ್ಣವಾಗಿ ಮೂಗಿಸಿಕೊಂಡಿದ್ದರು, ಹೀಗಾಗಿ ಅಂತಿಮ ಸೆಣಸಾಟದಲ್ಲಿ ಗೆಲುವಿನ ಕುದುರೆ ಏರಲು ಅವಕಾಶ ಕೈತಪ್ಪಿತು ಎಂದೇ ಹೇಳಬಹುದು.

Latest News

Pingali
ಮಾಹಿತಿ

ನಮ್ಮ ರಾಷ್ಟ್ರಧ್ವಜವನ್ನು ನಿರ್ಮಿಸಿದ ಪಿಂಗಳಿ ವೆಂಕಯ್ಯ, ಮೊದಲು ಬ್ರಿಟಿಷ್ ಸೈನ್ಯದಲ್ಲಿದ್ದರು ; ಇಲ್ಲಿದೆ ಓದಿ ಅಚ್ಚರಿಯ ಮಾಹಿತಿ

ದೇಶಕ್ಕೊಂದು ಧ್ವಜಕೊಟ್ಟು 100 ವರ್ಷ ಕಳೆದರೂ ಪಿಂಗಳಿ ಅವರ ನೆನಪು ಅಜರಾಮರವಾಗಿದೆ. ಪಿಂಗಳಿ ವೆಂಕಯ್ಯ ಅವರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ ಮುಂದೆ ಓದಿ.

JK
ದೇಶ-ವಿದೇಶ

ಜಮ್ಮು-ಕಾಶ್ಮೀರದಲ್ಲಿ ಕಾಶ್ಮೀರಿ ಪಂಡಿತರನ್ನು ಹತ್ಯೆಗೈದ ಭಯೋತ್ಪಾದಕರು!

ಕಾಶ್ಮೀರಿ ಪಂಡಿತರೊಬ್ಬರನ್ನು(Kashmiri Pandits) ಗುಂಡಿಕ್ಕಿ ಕೊಂದು ಆತನ ಸಹೋದರನನ್ನು ಗಾಯಗೊಳಿಸಿದ್ದಾರೆ. ಸಂತ್ರಸ್ತ ಸಹೋದರನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ.

Assam
ದೇಶ-ವಿದೇಶ

ತನ್ನ ಪ್ರೀತಿಯನ್ನು ನಿರೂಪಿಸಲು, ಏಡ್ಸ್ ರೋಗವಿರುವ ಪ್ರಿಯಕರನ ರಕ್ತವನ್ನು ತನ್ನ ದೇಹಕ್ಕೆ ಚುಚ್ಚಿಕೊಂಡ 15 ವರ್ಷದ ಹುಡುಗಿ!

ಏಡ್ಸ್ ರೋಗವಿರುವ ತನ್ನ ಹುಡುಗನ ರಕ್ತವನ್ನು ಸೂಜಿಯ ಮೂಲಕ ತನ್ನ ದೇಹಕ್ಕೆ ಚುಚ್ಚಿಕೊಂಡಿದ್ದಾಳಂತೆ! ಇನ್ನೊಂದು ಅಚ್ಚರಿಯ ವಿಷಯ ಎಂದರೆ, ಈಕೆಯ ವಯಸ್ಸು ಕೇವಲ 15 ವರ್ಷ!