ನುಹ್‌ ಹಿಂಸಾಚಾರ: ‘ನಾವು 100 ಕುಟುಂಬಗಳಲ್ಲಿ ಕೇವಲ 15 ಜನ ಮಾತ್ರ ಉಳಿದಿದ್ದೇವೆ,’ ಜೀವ ಭಯದಲ್ಲಿ ಗುರುಗ್ರಾಮ್‌ ವಾಸಿಗಳು

Gurugram : ಆಗಸ್ಟ್ 3: ಕಳೆದ ಕೆಲವು ದಿನಗಳಿಂದ ಹರಿಯಾಣದ (Haryana) ನುಹ್‌ನಲ್ಲಿ (Gurugram Residents fear lives) ಭುಗಿಲೆದ್ದ ಹಿಂಸಾಚಾರದಿಂದಾಗಿ ವಲಸಿಗರು ಗುರುಗ್ರಾಮ್‌ನಲ್ಲಿ

(Gurugram) ಜೀವ ಭಯದಲ್ಲಿ ವಾಸಿಸುತ್ತಿದ್ದಾರೆ. ಇವರಿಗೆ ಹಿಂಸಾಚಾರ ಪೀಡಿತ ಪ್ರದೇಶಗಳನ್ನು ತೊರೆಯುವಂತ ಪರಿಸ್ಥಿತಿ ಬಂದಿದೆ. ಅಲ್ಲದೆ ಹಣದ ಕೊರತೆ ಅವರನ್ನು ಅಸಹಾಯಕರನ್ನಾಗಿ ಮಾಡಿದೆ.

ದೆಹಲಿಯಿಂದ (Delhi) ಸುಮಾರು 80 ಕಿಮೀ ದೂರದಲ್ಲಿರುವ ಹರಿಯಾಣದ ನುಹ್‌ ಎಂಬಲ್ಲಿ ನಡೆದ ಗಲಭೆಯಲ್ಲಿ ಸೋಮವಾರದಿಂದ ಒಟ್ಟು ಆರು ಜನರು ಸಾವನ್ನಪ್ಪಿದ್ದಾರೆ. ಹಿಂಸಾಚಾರಕ್ಕೆ ಮುಖ್ಯವಾಗಿ

ವಿಎಚ್‌ಪಿ (VHP) ಮತ್ತು ಬಜರಂಗದಳ (Bajarangadala) ನಡೆಸಿದ ಧಾರ್ಮಿಕ ಮೆರವಣಿಗೆ ಕಾರಣವಾಯಿತು. ಗುಂಡಿನ ದಾಳಿ ಮತ್ತು ಭಾರೀ ಕಲ್ಲು ತೂರಾಟವೂ ಈ ವೇಳೆ ನಡೆಯಿತು. ಅಲ್ಲಿಂದ

ಗುರುಗ್ರಾಮ್ ಸೇರಿದಂತೆ ಪಕ್ಕದ ಪ್ರದೇಶಗಳಿಗೂ (Gurugram Residents fear lives) ಕೂಡ ಈ ಗಲಭೆ ಹಬ್ಬಿತು.

ಅದೆಷ್ಟೋ ಜನ ಹರಿಯಾಣದ ನುಹ್‌ನಲ್ಲಿ ನಡೆದ ಹಿಂಸಾಚಾರದಿಂದಾಗಿ ರಾಜ್ಯದ ಇತರ ಭಾಗಗಳಿಗೆ ತೆರಳಿದ್ದಾರೆ. ಸದ್ಯಕ್ಕೆ ಇಂತವರ ಸಂಖ್ಯೆ ಗಣನೆಗೆ ಸಿಗುತ್ತಿಲ್ಲ. ಪಶ್ಚಿಮ ಬಂಗಾಳದ (West Bengal)

100 ಕ್ಕೂ ಹೆಚ್ಚು ಮುಸ್ಲಿಂ (Muslim) ಕುಟುಂಬಗಳು ಈ ಪ್ರದೇಶದಲ್ಲಿ ನೆಲೆಸಿದ್ದರು. ಈಗ ಇದರಲ್ಲಿ ಕೇವಲ 15 ಕುಟುಂಬಗಳು ಮಾತ್ರ ಉಳಿದಿವೆ. ಇವರು ರಾತ್ರಿ ಹಗಲು ಎನ್ನದೆ ಭಯದಿಂದಲೇ ದಿನ ಕಳೆಯುವಂತಹ

ಸ್ಥಿತಿ ನಿರ್ಮಾಣವಾಗಿದೆ. ಇವರು ಹಿಂಸಾಚಾರ ಪೀಡಿತ ಪ್ರದೇಶದಲ್ಲಿ ಸ್ಥಳ ತೊರೆಯಲು ಹಣವಿಲ್ಲದ ಕಾರಣ ಅಸಹಾಯಕರಾಗಿ ಇಲ್ಲೇ ವಾಸಿಸುವ ಅನಿವಾರ್ಯತೆ ಎದುರಾಗಿದೆ.

ಇದನ್ನೂ ಓದಿ : ಪಿಜಿ, ಪೇಯಿಂಗ್ ಹಾಸ್ಟೆಲ್ ಗಳಿಗೆ ಶಾಕ್: ಶೇ. 12 ರಷ್ಟು ಜಿಎಸ್‌ಟಿ ಅನ್ವಯ, ಇನ್ನಷ್ಟು ಏರಿಕೆಯಾಗಲಿದೆ ತಿಂಗಳ ಬಾಡಿಗೆ

ಈ ಬಗ್ಗೆ 25 ವರ್ಷದ ಶಮೀಮ್ ಹುಸೇನ್ (Shameem Husain) ತಮ್ಮ ಬೇಸರವನ್ನು ವ್ಯಕ್ತಪಡಿಸಿ (ಕಣ್ಣೀರು ಹಾಕುತ್ತಾ ಮತ್ತು ತಮ್ಮ ಕೈಗಳನ್ನು ಮಡಚಿ), “ಕಳೆದ ಸಂಜೆ ಎಲ್ಲಾ ಮುಸ್ಲಿಮರನ್ನು ಬಿಟ್ಟು

ಹೋಗುವಂತೆ ಕೆಲವರು ಬಂದು ಕೇಳಿದರು. ನಮಗೆ ಹಿಂತಿರುಗಲು ಹಣವಿಲ್ಲ ಮತ್ತು ಯಾರೂ ಕೂಡ ಸಾಲ ಕೊಡುವವರು ಸಹ ಇಲ್ಲ. ನಾನು ಇಲ್ಲಿಯೇ ಸ್ಥಳೀಯವಾಗಿ ಅಂಗಡಿ ಇಟ್ಟುಕೊಂಡಿದ್ದೇನೆ. ನನಗೆ ಏನು

ಆದರೂ ಕೂಡ ಪರವಾಗಿಲ್ಲ. ಆದರೆ ನನಗೆ ಈಗ ಒಂದು ವರ್ಷದ ಪುಟ್ಟ ಮಗನಿದ್ದಾನೆ, ಸರ್ಕಾರ (Government), ಜಿಲ್ಲಾಡಳಿತ ಮತ್ತು ಸ್ಥಳೀಯ ನಿವಾಸಿಗಳಿಗೆ ನಮ್ಮನ್ನು ರಕ್ಷಿಸಲು ನನ್ನ ಪ್ರಾಮಾಣಿಕ ವಿನಂತಿ.

ನಮಗೆ ದಯವಿಟ್ಟು ಸಹಾಯ ಮಾಡಿ.” ಎಂದು ಅವರು ಕೇಳಿಕೊಂಡಿದ್ದಾರೆ.

ಇಲ್ಲಿ ನಡೆಯುತ್ತಿರುವ ಹಿಂಸಾಚಾರದಿಂದ ನಮ್ಮಂತಹ ಬಡವರು ಬೆಲೆ ತೆರುತ್ತಿದ್ದಾರೆ. ನಾವು ದಿನಗೂಲಿಗಳಾಗಿದ್ದು, ನಾವು ಕೆಲಸಕ್ಕೆ ಹೋಗಿ ದಿನ ನಿತ್ಯ ಹಣ ಸಂಪಾದಿಸುವವರು. ನಮಗೆ ಹಣದ ಕೊರತೆಯಿಂದ

ಈ ಪ್ರದೇಶವನ್ನು ಬಿಡಲು ಸಾಧ್ಯವಾಗುತ್ತಿಲ್ಲ. ಇದು ಹೀಗೆಯೇ ಮುಂದುವರಿದರೆ ನಾವು ಹಸಿವಿನಿಂದ ಬಳಲುತ್ತೇವೆ” ಎಂದು ಕಣ್ಣೀರು ಹಾಕಿದ್ದಾರೆ.

ವಲಸೆ ಕುಟುಂಬಗಳಿಗೆ ರಕ್ಷಣೆ ನೀಡುವುದಾಗಿ ಹಿಂದಿನ ದಿನ, ಗುರುಗ್ರಾಮ್ ಜಿಲ್ಲಾಧಿಕಾರಿ ಭರವಸೆ ನೀಡಿದ್ದರು. ಎರಡೂ ಸಮುದಾಯಗಳ ಧಾರ್ಮಿಕ ಸ್ಥಳಗಳಾದ ಮಸೀದಿಗಳು ಮತ್ತು ದೇವಾಲಯಗಳ ಸುತ್ತಮುತ್ತ

ರಾತ್ರೋರಾತ್ರಿ ಬಿಗಿ ಭದ್ರತೆ ನಿಯೋಜಿಸಲಾಗುವುದು ಹಾಗೂ ಸೂಕ್ಷ್ಮ ಪ್ರದೇಶಗಳಿಗೆ ಭದ್ರತೆ ನೀಡಲಾಗುವುದು ಎಂದು ಅವರು ಹೇಳಿದರು. ಗುರುಗ್ರಾಮದ ಜಿಲ್ಲಾಧಿಕಾರಿಗಳು ಈ ಬಗ್ಗೆ ಇದೀಗ ಇಲ್ಲಿಯ ಪರಿಸ್ಥಿತಿ

ಶಾಂತವಾಗಿದ್ದು, ನಗರದಲ್ಲಿ ನಾಳೆ ಸಂಪೂರ್ಣ ಸಹಜ ಸ್ಥಿತಿಗೆ ಮರಳುವ ಸಾಧ್ಯತೆ ಇದೆ ಎಂದು ಈ ಹಿಂದೆಯೇ ತಿಳಿಸಿದ್ದರು.

ರಶ್ಮಿತಾ ಅನೀಶ್

Exit mobile version