ಗ್ಯಾನವಾಪಿ(Gyanvapi Mosque) ಪ್ರಕರಣ ಇಡೀ ದೇಶಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದೆ. ಗ್ಯಾನವಾಪಿ ಮಸೀದಿಯ ಒಳಗಿರುವ ರಚನೆಯು ಕಾರಂಜಿ(Fountain) ಎಂದು ಮುಸ್ಲಿಂ ಕಡೆಯವರು ಹೇಳಿದರೆ, ಹಿಂದೂಗಳ ಕಡೆಯವರು ಇದು ಶಿವಲಿಂಗ ಎಂದು ಹೇಳುತ್ತಿದ್ದಾರೆ.

ಸದ್ಯ ವಾರಣಾಸಿ ನ್ಯಾಯಾಲಯಕ್ಕೆ(Varanasi Court) ಗ್ಯಾನವಾಪಿ ಸಮೀಕ್ಷಾ(Survey) ವರದಿ ಸಲ್ಲಿಕೆಯಾಗಿದ್ದು, ಇನ್ನೂ ನಿರ್ಧಾರ ಕೈಗೊಳ್ಳಬೇಕಿದೆ. ಈ ಮಧ್ಯೆ ಮಸೀದಿಯ ಹಿಂಭಾಗದಲ್ಲಿರುವ ಕಾಶಿ ಕರ್ವಾಟ್ ದೇವಾಲಯದ ಪ್ರಧಾನ ಅರ್ಚಕರು, ಗ್ಯಾನವಾಪಿ ಮಸೀದಿಯೊಳಗೆ ಕಂಡುಬರುವ ರಚನೆಯು ಕಾರಂಜಿಯಾಗಿದೆ ಮತ್ತು ಶಿವಲಿಂಗವಲ್ಲ ಎಂದು ಹೇಳಿದ್ದಾರೆ. ದರ್ಶಕ ಗಣೇಶ್ ಶಂಕರ್ ಉಪಾಧ್ಯಾಯ ಅವರು ಕಳೆದ 50 ವರ್ಷಗಳಿಂದ ಈ ರಚನೆಯನ್ನು ಗಮನಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ.
ಆದ್ರೆ, ಅವರು ನೀಡಿರುವ ಹೇಳಿಕೆಯ ಅನುಸಾರ, ಅದನ್ನು ಇಲ್ಲಿಯವರೆಗೂ ಕಾರ್ಯಗತಗೊಳಿಸುವುದನ್ನು ನಾನು ನೋಡಿಲ್ಲ. ಸ್ಥಳೀಯ ಮಾಧ್ಯಮದ ಸಂದರ್ಶನದಲ್ಲಿ ಮಾತನಾಡಿದ ಉಪಾಧ್ಯಾಯ ಅವರು, ಈ ರಚನೆಯು ಅನೇಕರಿಗೆ ಶಿವಲಿಂಗದಂತೆ ಕಾಣಿಸಬಹುದು, ಆದರೆ ನಮ್ಮ ಮಾಹಿತಿಯ ಪ್ರಕಾರ, ಇದು ಒಂದು ಕಾರಂಜಿ. ನಾವು ಬಾಲ್ಯದಿಂದಲೂ ಈ ಕಾರಂಜಿ ನೋಡಿದ್ದೇವೆ, ಸುಮಾರು 50 ವರ್ಷಗಳು ಕಳೆದಿವೆ ಎಂದರು. ನಾನು ಹಲವಾರು ಬಾರಿ ಸೂಕ್ಷ್ಮವಾಗಿ ಗಮನಿಸಿದ್ದಾರೆ ಮತ್ತು ಮಸೀದಿಯ ಕೆಲಸಗಾರರು ಮತ್ತು ಮೌಲ್ವಿಗಳೊಂದಿಗೆ (ಇಸ್ಲಾಮಿಕ್ ಧರ್ಮಗುರುಗಳು) ಸಂವಾದ ನಡೆಸಿದ್ದರು ಎಂದು ಹೇಳಿದ್ದಾರೆ.

ಈ ರಚನೆಯು ಬಹಳ ಹಿಂದಿನಿಂದಲೂ ಇದೆ ಮತ್ತು ಕುತೂಹಲದಿಂದ ಮಸೀದಿಯಲ್ಲಿ ಜನರನ್ನು ಹಲವಾರು ಬಾರಿ ಪ್ರಶ್ನಿಸಿದ್ದಾರೆ ಎಂದು ಹೇಳಿದರು.