ಚಳಿಗಾಲದಲ್ಲಿ ತಲೆಕೂದಲ ಆರೈಕೆ ಬಗ್ಗೆ ಇರಲಿ ಕಾಳಜಿ; ಇಲ್ಲಿವೆ ಪರಿಣಾಮಕಾರಿ ಸಲಹೆಗಳು.

ಈಗಾಗಲೇ ಚಳಿಗಾಲ(Winter)ಶುರುವಾಗಿದೆ, ಈ ಸಮಯದಲ್ಲಿ ನಮ್ಮ ಆರೋಗ್ಯ ಮತ್ತು ಸೌಂದರ್ಯ ಎರಡಕ್ಕೂ ಹೆಚ್ಚಿನ ಮಹತ್ವ ನೀಡಬೇಕಾಗುತ್ತದೆ. ಹೆಚ್ಚಿನವರು ಈ ಸಮಯದಲ್ಲಿ ತ್ವಚೆಯ ಆರೈಕೆ(hair fall treatment in home) ಮಾಡುತ್ತಾರೆ, ಆದರೆ ಕೂದಲಿನ ಬಗ್ಗೆ ಅಷ್ಟೇನೂ ಗಮನಹರಿಸುವುದಿಲ್ಲ.

ಪುರುಷರಿರಲಿ, ಮಹಿಳೆಯರಿರಲಿ, ಕೂದಲು ಸೊಂಪಾಗಿದ್ದರೆ ಅಂದ ದುಪ್ಪಟ್ಟಾಗುತ್ತದೆ. ಆದರೆ, ಚಳಿಗಾಲದಲ್ಲಿ ಕೂದಲು ಉದುರುವ ಪ್ರಮಾಣ ಬೇರೆ ಸಮಯಕ್ಕಿಂತ ಹೆಚ್ಚು.

ಚಳಿಗಾಲದಲ್ಲಿ ಕೂದಲ ಬುಡ ಸಡಿಲವಾಗುವುದರಿಂದ ಮತ್ತು ಚರ್ಮ ಒಣಗುವುದರಿಂದ ಕೂದಲು ಶುಷ್ಕವಾಗುತ್ತದೆ.

ಹೀಗಾಗಿ, ನಾವು ಸ್ವಲ್ಪ ಎಚ್ಚರಿಕೆ ವಹಿಸಿದರೆ ಕೂದಲು ಉದುರುವ(Hair fall) ಪ್ರಮಾಣವನ್ನು ನಿಯಂತ್ರಿಸಬಹುದು. ಸಾಮಾನ್ಯವಾಗಿ, ದೇಹದಲ್ಲಿ ಪಿತ್ತ ಅಥವಾ ಉಷ್ಣಾಂಶದ ಪ್ರಮಾಣ ಹೆಚ್ಚಾದರೆ ಕೂದಲು ಉದುರುವಿಕೆ ಹೆಚ್ಚುತ್ತದೆ.

ಹೀಗಾಗಿ, ದೇಹವನ್ನು ಎಷ್ಟು ತಂಪಾಗಿ ಇಟ್ಟುಕೊಳ್ಳುತ್ತೀರೋ ಅಷ್ಟು ಆರೋಗ್ಯವೂ ಸಮಸ್ಥಿತಿಯಲ್ಲಿರುತ್ತದೆ.

ಇದನ್ನೂ ಓದಿ : https://vijayatimes.com/namma-yatri-app-hits/

ನಿಮ್ಮ ಆರೋಗ್ಯ ಸುಸ್ಥಿತಿಯಲ್ಲಿದ್ದರೆ ಕೂದಲು ಉದುರುವಿಕೆಯ ಪ್ರಮಾಣವೂ ಕಡಿಮೆಯಾಗುತ್ತದೆ.

ತೆಂಗಿನೆಣ್ಣೆ ಕೂದಲಿನ ಆರೋಗ್ಯಕ್ಕೆ ವರದಾನ, ಒಳ್ಳೆಯ ಗುಣಮಟ್ಟದ ತೆಂಗಿನಎಣ್ಣೆ ಜೊತೆಗೆ ಭೃಂಗರಾಜ ಎಣ್ಣೆಯೂ ಕೂದಲಿಗೆ ಅತ್ಯುತ್ತಮ ಆಯ್ಕೆಯಾಗಿದೆ, ಭೃಂಗರಾಜ ಎಣ್ಣೆಯನ್ನು ತಲೆಯ ಬುಡಕ್ಕೆ ಹಚ್ಚುವುದರಿಂದ ಕೂದಲಿನ ಆರೋಗ್ಯ ಹೆಚ್ಚುತ್ತದೆ.

ಹಾಗೂ ಕೂದಲಿನ ಬೆಳವಣಿಗೆಯೂ ಚೆನ್ನಾಗಿರುತ್ತದೆ. ಹೆಚ್ಚಿನವರು ಮೊಸರನ್ನು ಇಷ್ಟಪಡುವುದಿಲ್ಲ. ಆದರೆ, ಮೊಸರನ್ನು ಕೂದಲ ಬುಡಕ್ಕೆ ಹಚ್ಚುವುದರಿಂದ ಕಂಡೀಷನರಿಂಗ್ ರೀತಿ ಕೆಲಸ ಮಾಡುತ್ತದೆ.

ಹೊಸ ಕೂದಲು ಬೆಳೆಯಲು ಸಹಕರಿಸುವ ಜೊತೆಗೆ, ಕೂದಲಿನ ಬುಡದಲ್ಲಿರುವ ಕೊಳೆಯನ್ನು ಕಿತ್ತೊಗೆದು ಕೂದಲ ಉಸಿರಾಟಕ್ಕೆ ಉತ್ತೇಜನ ನೀಡುತ್ತದೆ.

ಹಾಗಾಗಿ, ತಲೆಸ್ನಾನ ಮಾಡುವ 15 ನಿಮಿಷಕ್ಕೂ ಮುನ್ನ ತಲೆಗೆ ಮೊಸರನ್ನು ಹಚ್ಚಿಡಿ. ಕೈ ಬೆರಳಿಂದ ಮೆಲ್ಲಗೆ ಮಸಾಜ್ ಮಾಡಿ.

ನಂತರ ಹೆಚ್ಚು ರಾಸಾಯನಿಕಗಳಿಲ್ಲದ ಶಾಂಪೂವಿನಿಂದ ಕೂದಲನ್ನು ತೊಳೆಯಿರಿ, ಅತಿಯಾದ ಬಿಸಿನೀರು ಬಳಸುವುದು ಸೂಕ್ತವಲ್ಲ.
ಬೆಟ್ಟದ ನೆಲ್ಲಿಕಾಯಿ ಕೂಡ ತಲೆಕೂದಲ ಬೆಳವಣಿಗೆಗೆ ಸಹಾಯ ಮಾಡಬಲ್ಲದು.

ಹೆಚ್ಚಿನವರಲ್ಲಿ ವಿಟಮಿನ್ ಸಿ(Vitamin c) ಕೊರತೆಯಿಂದ ಕೂದಲು ಉದುರುತ್ತದೆ.

ಆದರೆ, ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಪ್ರಮಾಣ ಹೆಚ್ಚಾಗಿರುವುದರಿಂದ ಕೂದಲ ಬೆಳವಣಿಗೆಯೂ ಹೆಚ್ಚುತ್ತದೆ ಹಾಗೂ ತಲೆಹೊಟ್ಟು ಕೂಡ ಕಡಿಮೆಯಾಗುತ್ತದೆ. ನೆಲ್ಲಿಕಾಯಿಯೊಂದಿಗೆ ತೆಂಗಿನೆಣ್ಣೆಯನ್ನು ಮಿಕ್ಸ್ ಮಾಡಿ ಒಲೆಯ ಮೇಲಿಟ್ಟು ಕುದಿಸಿ.

https://youtu.be/7ITwpBTJQm4 ಭ್ರಷ್ಟರ ಬೇಟೆ. ಬಡವರ ಅನ್ನಕ್ಕೆ ಕನ್ನ ಹಾಕೋ ದುಷ್ಟರ ಬೇಟೆ. Lets build corruption free society.

ಈ ಎಣ್ಣೆ ತಲೆಯ ಕೂದಲಿಗೆ ಗಾಢ ಕಪ್ಪು ಬಣ್ಣ ನೀಡುವುದರೊಂದಿಗೆ ಕೂದಲು ಸದೃಢವಾಗಿಯೂ ಬೆಳೆಯಲು ಸಹಕರಿಸುತ್ತದೆ.

ಇನ್ನು, ತಲೆ ಸ್ನಾನ ಮಾಡಿದ ನಂತರ ಕೂದಲನ್ನು ಹೆಚ್ಚಾಗಿ ಟವೆಲ್‌ನಿಂದ ಉಜ್ಜಬೇಡಿ, ಇದು ನಿಮ್ಮ ಕೂದಲನ್ನು ದುರ್ಬಲಗೊಳಿಸುವುದರ ಜೊತೆಗೆ ಉದುರುವಂತೆ ಮಾಡುತ್ತದೆ.

ಹೀಗಾಗಿ ನಿಮ್ಮ ಕೂದಲನ್ನು ಒಂದು ಮೆತ್ತನೆಯ ಬಟ್ಟೆಯಿಂದ ಮೃದುವಾಗಿ ಮಸಾಜ್ ಮಾಡುವ ರೀತಿಯಲ್ಲಿ ಒಣಗಿಸಿ.

ಅದೇ ರೀತಿ, ಕೂದಲು ಕವಲೊಡೆಯುವುದನ್ನು ತಪ್ಪಿಸಲು ನಿಯಮಿತವಾಗಿ ಟ್ರಿಮಿಂಗ್ ಮಾಡಿಸಿ. ಇಲ್ಲದಿದ್ದರೆ ಕೂದಲು ಆರೋಗ್ಯಯುತವಾಗಿ ಬೆಳೆಯಲು ತಡೆಯುಂಟಾಗುತ್ತದೆ.

Exit mobile version