ಹಿಂದೂಗಳ ಮೇಲೆ ಕಾಂಗ್ರೆಸ್‍ಗೆ ಏಕಿಷ್ಟು ಕೋಪ : ಹಾರ್ದಿಕ್ ಪಟೇಲ್!

Congress

ಗುಜರಾತ್‍ನ(Gujarat) ಪಾಟಿದಾರ ಸಮುದಾಯದ ಯುವ ನಾಯಕ ಹಾರ್ದಿಕ್ ಪಟೇಲ್(Hardik Patel) ಕಾಂಗ್ರೆಸ್(Congress) ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್ ಪಕ್ಷಕ್ಕೆ ಶ್ರೀರಾಮ್ ಮತ್ತು ಹಿಂದೂಗಳ ಮೇಲೆ ಏಕಿಷ್ಟು ಕೋಪ ಎಂದು ಮಾರ್ಮಿಕವಾಗಿ ಪ್ರಶ್ನಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಭಗವಾನ್ ಶ್ರೀರಾಮನ ಮಂದಿರ ಅಯೋಧ್ಯೆಯಲ್ಲಿ ಶತಮಾನಗಳ ನಂತರ ನಿರ್ಮಾಣವಾಗುತ್ತಿದೆ. ಈ ಸಂಗತಿ ಭಾರತದ ಎಲ್ಲ ಜನರು ಹೆಮ್ಮೆಪಡುವಂತದ್ದು. ಆದರೆ ಕಾಂಗ್ರೆಸ್ ಶ್ರೀರಾಮನ ಕುರಿತು ಅವಹೇಳನಕಾರಿಯಾಗಿ ಮಾತನಾಡುತ್ತಾ, ಕೀಳು ಭಾವನೆಗಳ ಹೇಳಿಕೆಗಳನ್ನು ನೀಡುತ್ತಾ, ಕೋಟ್ಯಾಂತರ ಹಿಂದೂಗಳ ಭಾವನೆಗಳಿಗೆ ಧಕ್ಕೆಯುಂಟು ಮಾಡುತ್ತಿದೆ. ಕಾಂಗ್ರೆಸ್‍ಗೆ ಶ್ರೀರಾಮನ ಮತ್ತು ಹಿಂದೂಗಳ ಮೇಲೆ ಏಕಿಷ್ಟು ಕೋಪ ಎಂದು ಪ್ರಶ್ನಿಸಿದ್ದಾರೆ.

ಇನ್ನು ಕಾಂಗ್ರೆಸ್ ಯಾವಾಗಲೂ ಹಿಂದೂಗಳ ಭಾವನೆಗಳಿಗೆ ಧಕ್ಕೆ ತರಲು ಪ್ರಯತ್ನಿಸುತ್ತದೆ. ಹಿಂದೂಗಳ ಧಾರ್ಮಿಕ ಭಾವನೆಗಳನ್ನು ಅಗೌರವದಿಂದ ನೋಡುತ್ತದೆ. ಈ ಹಿಂದೆಯೂ ನಾನು ಇದನ್ನೆ ಹೇಳಿದ್ದೆ. ಹಾಗಾಗಿ ರಾಮಮಂದಿರವನ್ನು ಆದಷ್ಟು ಬೇಗ ನಾವೆಲ್ಲರೂ ಒಟ್ಟಾಗಿ ಪೂರ್ಣಗೊಳಿಸಬೇಕಿದೆ. ರಾಮಮಂದಿರವನ್ನು ನಾನು ನೋಡ ಬಯಸುತ್ತೇನೆ ಎಂದಿದ್ದಾರೆ. ಇನ್ನು ಹಾರ್ದಿಕ್ ಪಟೇಲ್ ಬಿಜೆಪಿ ಅಧ್ಯಕ್ಷ(BJP President) ಜೆ.ಪಿ.ನಡ್ಡಾ(JP Nadda) ಅವರೊಂದಿಗಿನ ಪೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ‘ಹೇಳಲು ಇನ್ನೇನು ಉಳಿದಿಲ್ಲ’ ಎಂದು ಬರೆದುಕೊಂಡಿದ್ದಾರೆ.

ಹಾರ್ದಿಕ್ ಪಟೇಲ್ ಹಾಕಿರುವ ಈ ಪೋಟೋಗೆ ತೀವ್ರ ಟೀಕೆ ಕೇಳಿ ಬಂದಿದ್ದು, “ಭಾಯ್ ನೀವು ಇಷ್ಟು ವೇಗವಾಗಿ ಬದಲಾಗುತ್ತೀರಿ ಎಂದು ನಾವು ಭಾವಿಸಿರಲಿಲ್ಲ. ನೀವು ಕಪಿಲ್ ಮಿಶ್ರಾ ಆಗಲು ಬಯಸುತ್ತೀರೆಂದು ನಾನು ಒಪ್ಪುತ್ತೇನೆ” ಎಂದು ವ್ಯಂಗ್ಯವಾಡಿದ್ದಾರೆ. ಮೇ 18ರಂದು ಹಾರ್ದಿಕ್ ಪಟೇಕ್ ಕಾಂಗ್ರೆಸ್ ಪಕ್ಷದ ಎಲ್ಲ ಸ್ಥಾನಗಳಿಗೂ ರಾಜೀನಾಮೆ ನೀಡಿದ್ದರು.

ಪಕ್ಷದಲ್ಲಿನ ಆಂತರಿಕ ಕಲಹ ಮತ್ತು ಕಾಂಗ್ರೆಸ್ ಕೇವಲ ರಾಜಕೀಯ ಪ್ರತಿಭಟನೆಗೆ ಸೀಮಿತವಾಗಿದೆ ಎಂದು ಆರೋಪಿಸಿ ರಾಜೀನಾಮೆ ನೀಡಿದ್ದರು.

Exit mobile version