ಹರ್ನಾಜ್ ಸಂಧುಗೆ ಒಲಿದ ಭುವನ ಸುಂದರಿ ಪಟ್ಟ

ಸರಿ ಸುಮಾರು 20 ವರ್ಷಗಳ ಬಳಿಕ ಭಾರತಕ್ಕೆ ಭುವನ ಸುಂದರಿ ಪ್ರಶಸ್ತಿ ಒಲಿದು ಬಂದಿದೆ  ಇದೀಗ 70ನೇ ಭುವನ ಸುಂದರಿ 2021 (Miss Universe 2021) ಆಗಿ 21 ವರ್ಷದ ಹರ್ನಾಜ್ ಸಂಧು ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. 

ಇಸ್ರೇಲ್‌ನ ಐಲಾಟ್‌ನಲ್ಲಿ ನಡೆದ ಮಿಸ್ ಯೂನಿವರ್ಸ್ 2021 ರ ಸ್ಪರ್ಧೆ ಕಿರೀಟವನ್ನು ಗೆಲ್ಲುವ ಮೂಲಕ ಹರ್ನಾಜ್ (Harnaaz Sandhu) ಇಡೀ ದೇಶವೇ ಹೆಮ್ಮೆಪಡುವಂತೆ ಮಾಡಿದ್ದಾರೆ.

ಹರ್ನಾಜ್ ಸ್ಪರ್ಧಿಗಳಾದ ಪರಾಗ್ವೆ ಮತ್ತು ದಕ್ಷಿಣ ಆಫ್ರಿಕಾವನ್ನು ಹಿಂದಿಕ್ಕಿ ಭುವನ ಸುಂದರಿ ಪಟ್ಟ ಪಡೆದಿದ್ದಾರೆ. ಆಕೆಯ ಹೆಸರನ್ನು ವಿಜೇತರೆಂದು ಘೋಷಿಸಿದ ಕ್ಷಣ, ಹರ್ನಾಜ್ ಆನಂದ ಬಾಷ್ಪ ಸುರಿಸಿದರು. ಧನ್ಯತಾಭಾವದಿಂದ ಅವಳ ಕೈಜೋಡಿಸಿದರು. 2020 ರ ಭುವನ ಸುಂದರಿ ಮೆಕ್ಸಿಕೋದ ಆಂಡ್ರಿಯಾ ಮೆಜಾ ತನ್ನ ಕಿರೀಟವನ್ನು ಹೊಸ ಉತ್ತರಾಧಿಕಾರಿಗೆ ಹಸ್ತಾಂತರಿಸಿದರು. 

ಭಾರತ ಈ ಹಿಂದೆ 1994 ರಲ್ಲಿ ಸುಶ್ಮಿತಾ ಸೇನ್ ಮತ್ತು 2000 ರಲ್ಲಿ ಲಾರಾ ದತ್ತಾ ಪ್ರಶಸ್ತಿಯನ್ನು ಬಾಚಿಕೊಳ್ಳುವ ಮೂಲಕ ಎರಡು ಬಾರಿ ಭುವನ ಸುಂದರಿ (Miss Universe)ಪ್ರಶಸ್ತಿ ಗೆದ್ದಿತ್ತು.  ಇದಕ್ಕೂ ಮೊದಲು 2000 ರಲ್ಲಿ ಲಾರಾ ದತ್ತಾ ಈ ಪ್ರಶಸ್ತಿಯನ್ನು ಗೆದ್ದಿದ್ದರು.

Exit mobile version