ಗಂಡನ ವರ್ಕ್ ಫ್ರಮ್ ಹೋಮ್ ಸ್ಥಗಿತಗೊಳಿಸಿ ಬಾಸ್‌ಗೆ ಪತ್ರ ಬರೆದ ಪತ್ನಿ

ಕೊರೊನಾ ಹಲವು ಮಂದಿಗೆ ಹೊಸ ಹೊಸ ಅನುಭವವನ್ನು ಕಲಿಸಿ ಕೊಟ್ಟಿದೆ. ಆನ್ ಲೈನ್ ಕ್ಲಾಸ್‌ಗಳು, ಮನೆಯಿಂದಲೇ ಕೆಲಸ ಮಾಡುವ ಅವಕಾಶಗಳು ಹೀಗೆ ಹಲವು ಬದಲಾವಣೆಗಳನ್ನು ಕೊರೊನಾ ತಂದಿದೆ.

ಆದರೆ ಗಂಡನ ವರ್ಕ್ ಫ್ರಮ್ ಹೋಮ್ ಅನ್ನು ಸ್ಥಗಿತಗೊಳಿಸಿ ಎಂದು ಹೆಂಡತಿ ಗಂಡನ ಬಾಸ್‌ಗೆ ಟ್ವೀಟ್ ಮಾಡಿದ್ದು ಇದೀಗ ವೈರಲ್ ಆಗಿದೆ. ಟ್ವೀಟ್‌ನಲ್ಲಿರುವ ಪ್ರಮುಖ ಅಂಶವೆಂದರೆ ನನ್ನ ಗಂಡನ ವರ್ಕ್ ಫ್ರಮ್ ಹೋಮ್ ಸ್ಥಗಿತಗೊಳಿಸಬೇಕು ಮತ್ತು ಕಚೇರಿಯಿಂದ ಕೆಲಸ ಆರಂಭಿಸಬೇಕು ಎಂದು ಕೋರಿದ್ದಾರೆ. ಇದಕ್ಕಾಗಿ ಉದ್ಯೋಗಿಯ ಪತ್ನಿ ಹಲವು ಕಾರಣಗಳನ್ನು ನೀಡಿದ್ದಾರೆ

ಟ್ವೀಟ್ ಸಾರಂಶ ಹೀಗಿದೆ ಪ್ರಿಯ ಸರ್, ನಾನು ನಿಮ್ಮ ಉದ್ಯೋಗಿ ಮನೋಜ್ ಅವರ ಪತ್ನಿ ಎಂದು ಉದ್ಯೋಗಿಯ ಪತ್ನಿ ಬರೆದಿದ್ದಾರೆ. ನಾನು ನಿಮಗೆ ಮನವಿ ಮಾಡುತ್ತೇನೆ ದಯವಿಟ್ಟು ಈಗ ಕಚೇರಿಯಿಂದ ಕೆಲಸ ಆರಂಭಿಸಿ. ನನ್ನ ಪತಿ ಕರೋನಾ ಲಸಿಕೆಯ ಎರಡೂ ಪ್ರಮಾಣಗಳನ್ನು ತೆಗೆದುಕೊಂಡಿದ್ದಾರೆ ಮತ್ತು ಕರೋನಾ ಪ್ರೋಟೋಕಾಲ್ ಅನ್ನು ಸಂಪೂರ್ಣವಾಗಿ ನೋಡಿಕೊಳ್ಳುತ್ತಾರೆ. ಇನ್ನೂ ಸ್ವಲ್ಪ ಸಮಯ ಮನೆಯಿಂದ ಕೆಲಸ ಮುಂದುವರಿದರೆ ನಮ್ಮ ಸಂಸಾರ ಮುರಿದು ಬೀಳುವ ಸಾಧ್ಯತೆ ಇದೆ ನನ್ನ ಗಂಡ ದಿನದಲ್ಲಿ 10 ಬಾರಿ ಕಾಫಿ ಸೇವಿಸುತ್ತಾರೆ. ಬೇರೆ ಬೇರೆ ಕೊಠಡಿಗಳಿಗೆ ಹೋಗುತ್ತಾರೆ ಮತ್ತು ಎಲ್ಲವನ್ನು ಅಸ್ತವ್ಯಸ್ತ ಮಾಡುತ್ತಾರೆ. ಇದಲ್ಲದೆ ಸತತವಾಗಿ ಅವರು ತಿನ್ನಲು ಏನಾದರು ಕೇಳುತ್ತಾರೆ. ಕೆಲಸದ ಅವಧಿಯಲ್ಲಿ ಅವರು ಮಲಗುವುದನ್ನು ನಾನು ನೋಡಿದ್ದೇನೆ. ನನ್ನ ಬಳಿ ಈಗಾಗಲೇ ಎರಡು ಮಕ್ಕಳಿವೆ. ನಾನು ನನ್ನ ಮಕ್ಕಳ ಕಾಳಜಿ ವಹಿಸಬೇಕು. ನನಗೆ ಸಹಾಯ ಮಾಡಿ ಎಂದು ಟ್ವೀಟ್ ಮಾಡಿದ್ದು ಇದೀಗ ವೈರಲ್ ಆಗಿದೆ.

Exit mobile version