ಹಾಸನದಲ್ಲಿ ಭವಾನಿ ರೇವಣ್ಣಗೆ ಟಿಕೆಟ್ ಕೈ ತಪ್ಪೋದು ಬಹುತೇಕ ಫಿಕ್ಸ್?

Bangalore : ಜಾತ್ಯತೀತ ಜನತಾ ದಳದಲ್ಲಿ ಕಗ್ಗಾಂಟಾಗಿರುವ ಹಾಸನ (Hasana) ಟಿಕೆಟ್ ವಿಚಾರ ಮತ್ತಷ್ಟು ಜಟಿಲಗೊಳ್ಳೋ ಲಕ್ಷಣಗಳು ಕಂಡು ಬರುತ್ತಿವೆ. ಇವತ್ತಿನ ಬೆಳವಣಿಗೆ ಕಂಡ್ರೆ ಭವಾನಿ ರೇವಣ್ಣಗೆ (Bhavani Revanna) ಟಿಕೆಟ್ ಕೈ ತಪ್ಪುವ ಲಕ್ಷಣಗಳು ಕಂಡು (Hassan Assembly Constituency) ಬರುತ್ತಿವೆ.

ಟಿಕೆಟ್ ವಿಚಾರವಾಗಿ ಮಾತುಕತೆಗಾಗಿ ದೇವೇಗೌಡರ (Devegowda) ಮನೆಗೆ ಆಗಮಿಸಿದ್ದ ರೇವಣ್ಣ ಹಾಗೂ ಪತ್ನಿ ಭವಾನಿ ರೇವಣ್ಣ ಅವರು ಅಸಮಾಧಾನದಿಂದಲೇ ಮನೆಯಿಂದ ಹೊರ ಬಂದಿದ್ದಾರೆ.

ಮೂಲಗಳ ಪ್ರಕಾರ ದೇವೇಗೌಡರೊಂದಿಗಿನ ಮಾತುಕತೆ ಫಲಪ್ರದವಾಗಿಲ್ಲ. ಹಾಸನ ವಿಧಾನಸಭಾ ಕ್ಷೇತ್ರದಲ್ಲಿ (Hassan Assembly Constituency) ಭವಾನಿ ರೇವಣ್ಣ ಅವರು ಸ್ಪರ್ಧಿಸಲು ಉತ್ಸುಕರಾಗಿದ್ದಾರೆ.

ಅವರು ಹಲವು ಸಾರ್ವಜನಿಕ ಸಭೆಯಲ್ಲಿ ತಮ್ಮ ಇಂಗಿತ ವ್ಯಕ್ತಪಡಿಸಿ ದೇವೇಗೌಡ ಕುಟುಂಬಕ್ಕೆ ಇರಿಸು ಮುರಿಸಿನ ಸನ್ನಿವೇಶ ತಂದೊಡ್ಡಿದ್ದರು.

ಈಗ ಹಾಸನ ಟಿಕೆಟ್ ಭವಾನಿಗೆ ನೀಡಲೇ ಬೇಕೆಂದು ರೇವಣ್ಣ ಅವರೂ ಹಠಹಿಡಿದಿದ್ದಾರೆ. ಭವಾನಿಗೆ ಟಿಕೆಟ್ ನೀಡದಿದ್ದರೆ ಮಗ ಸೂರಜ್‌ಗೂ ಟಿಕೆಟ್ ಬೇಡ ಎಂಬ ಮಾತನ್ನು ಹೇಳಿದ್ದರು.

ಇದನ್ನೂ ಓದಿ : https://vijayatimes.com/shakeelal-out-of-the-tournament/

ಈ ಹಿನ್ನೆಲೆಯಲ್ಲಿ ಹಾಸನ ಜೆಡಿಎಸ್ (JDS) ಟಿಕೆಟ್ ಫೈನಲ್ ವಿಚಾರಕ್ಕೆ ಸಂಬAಧಿಸಿದAತೆ ಹೆಚ್ ಡಿ ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ

ಅವರನ್ನು ಮಾತುಕತೆಗೆ ಬೆಂಗಳೂರಿನ ಪದ್ಮನಾಭ ನಗರಕ್ಕೆ ಆಹ್ವಾನಿಸಲಾಗಿತ್ತು. ಹಾಸನ ಟಿಕೆಟ್ ಕೊಡಲೇ ಬೇಕು ಎಂದು ರೇವಣ್ಣ ದಂಪತಿ ಮಾತುಕತೆಯಲ್ಲಿ ಪಟ್ಟು ಹಿಡಿದಿದ್ದರು.

ಆದರೆ ಕೆಲವೇ ಸಮಯ ಮಾತುಕತೆ ಮಾಡಿ ಅಸಮಾಧಾನದಿಂದ ದೇವೇಗೌಡ ಮನೆಯಿಂದ ಭವಾನಿ ರೇವಣ್ಣ ವಾಪಸ್ದು ತೆರಳಿದ್ದಾರೆ.

ಪದ್ಮಾನಾಭನಗರ ದೇವೇಗೌಡ ಮನೆಯಿಂದ ಮುನಿಸಿಕೊಂಡು ಭವಾನಿ ರೇವಣ್ಣ ತೆರಳಿದ್ದು ಟಿಕೆಟ್ ಕೈ ತಪ್ಪುವ ಹಿನ್ನೆಲೆ ಅಸಮಾಧಾನಗೊಂಡಂತೆ ಕಂಡರು.

ಇದನ್ನೂ ಓದಿ : https://vijayatimes.com/injustice-in-assembly-elections/

ಅಸಮಾಧಾನಕೊಂಡು ಬೇಸರದಿಂದಲೇ ರೇವಣ್ಣ (H. D. Revanna) ಕೂಡ ಮನೆಯಿಂದ ಹೊರ ನಡೆದರು. ಮಾತ್ರವಲ್ಲ ದಂಪತಿಗಳು ಮಾಧಮ್ಯಕ್ಕೆ ಯಾವುದೇ ಪ್ರತಿಕ್ರಿಯೆ ನೀಡದೆ ತೆರಳಿದ್ರು.

ಈ ಮೂಲಕ ಪರೋಕ್ಷವಾಗಿ ಭವಾನಿ ರೇವಣ್ಣಗೆ ಟಿಕೆಟ್ ಇಲ್ಲ ಎಂದು ಕುಮಾರಸ್ವಾಮಿ ಹೇಳಿದ್ರಾ ಸೆಕೆಂಡ್ ಲಿಸ್ಟ್ ನಾಳೆ ಬಿಡುಗಡೆ ಎನ್ನುತ್ತಲೇ ಹಾಸನದ ಕಗ್ಗಂಟಿಗೆ ಉತ್ತರವಿಲ್ಲ.

ದೇವೇಗೌಡ ಸಂಧಾನ ಸಫಲತೆಯಿಂದ ಯಾರಿಗೆ ಒಲಿಯುತ್ತೆ ಅದೃಷ್ಟ ಎಂಬುದನ್ನು ಕಾದು ನೋಡಬೇಕು. ಮಾತ್ರವಲ್ಲ ಹಾಸನ ಟಿಕೆಟ್ ತಾನು ಹೇಳಿದವರಿಗೆ ಸಿಗಬೇಕು ಎಂದು ರೇವಣ್ಣ ಹಠ ಹಿಡಿದಿದ್ದು,

ಕುಟುಂಬದ ರಾಜಕೀಯ ವಿಚಾರದಲ್ಲಿ ಚಾಣಕ್ಯ ದೇವೇಗೌಡರ ನಿಲುವಿಗೆ ಮನ್ನಣೆ ಸಿಗುತ್ತಾ ಎಂಬುದು ಭವಿಷ್ಯದಲ್ಲಿ ತಿಳಿಯಲಿದೆ. ಒಟ್ನಲ್ಲಿ ಜೆಡಿಎಸ್ ಪಕ್ಷದಿಂದ ಹಾಸನದಲ್ಲಿ ಟೀಕೆಟ್ ಯಾರಿಗೆ ಕೊಡತ್ತಾರೆ ಎಂಬುದು ಕುತೂಹಲವಾಗಿದೆ.

Exit mobile version