ಭಾರತದಲ್ಲಿ ಕುಖ್ಯಾತವಾಗಿರುವ ಕೆಲವು ರಹಸ್ಯಮಯ ನಿಗೂಢ ತಾಣಗಳು ಇದೆ ನೋಡಿ!

India : ಭಾರತವೇ ಒಂದು ರಹಸ್ಯ ತಾಣಗಳ ಆಗರವಾಗಿದ್ದು, ಕೆಲವೊಂದು ತಾಣಗಳು ವಿಸ್ಮಯತೆಯನ್ನು ಒಳಗೊಂಡರೆ, ಇನ್ನು ಕೆಲವು ತಾಣಗಳು ಭಯವನ್ನು ಹುಟ್ಟಿಸುತ್ತವೆ.

ಅಂತಹ ಬಹಳಷ್ಟು ತಾಣಗಳು ಭಾರತದಲ್ಲಿದ್ದು, ಬಹಳ ಧೈರ್ಯವಂತರಾದರೆ ಅಥವಾ ಸಾಹಸಿ ಪ್ರವೃತ್ತಿಯವರಾದರೆ ಈ ತಾಣಗಳನ್ನು ಮುಂದಿನ ಪ್ರವಾಸಕ್ಕೆ ಆಯ್ಕೆ ಮಾಡಿಕೊಳ್ಳುವ ಬಗ್ಗೆ ಯೋಚಿಸಬಹುದು.

ಕೆಲವು ಪ್ರದೇಶಗಳು ಪ್ರಕೃತಿ ಸೌಂದರ್ಯದಿಂದ ಮನುಷ್ಯನನ್ನು ಆಕರ್ಷಿಸಿದರೆ, ಮತ್ತೆ ಕೆಲವು ಮಾನವ ನಿರ್ಮಿತ ಕಟ್ಟಡಗಳಿಂದಲೇ ಆಕರ್ಷಣೀಯ ಕೇಂದ್ರವಾಗಿರುತ್ತವೆ.

ಅದರಲ್ಲಿಯೂ ಕೆಲವು ಅತ್ಯಂತ ನಿಗೂಢ ಹಾಗೂ ವಿಸ್ಮಯತೆಗಳಿಂದ ಕೂಡಿರುವ ತಾಣಗಳಿವೆ, ಅವುಗಳ ಬಗ್ಗೆ ಮಾಹಿತಿ ಇಲ್ಲಿದೆ.


ಮೀರತ್ ನಲ್ಲಿರುವ ಜಿಪಿ ಬ್ಲಾಕ್ : ಇಲ್ಲಿ ಕುಡಿಯುತ್ತಿರುವ ಸ್ನೇಹಿತರ ಆತ್ಮ ಹಲವರಿಗೆ ಕಂಡು ಬಂದಿದೆ. ಜೊತೆಗೆ ಕೆಂಪು ಬಟ್ಟೆ ಧರಿಸಿದ ಕೆಲವು ಹುಡುಗಿಯರ ಭೂತವೂ ಕಂಡಿದೆ ಎಂದು ಹಲವರು ಹೇಳುತ್ತಾರೆ.

https://fb.watch/gX2zCLlZO2/ ಧೂಳಿನಿಂದ ಕೂಡಿದ ವನಹಟ್ಟಿ ರಸ್ತೆ!


ದೆಹಲಿ ಕಂಟೋನ್ ಮೆಂಟ್ : ಈ ಜಾಗದಲ್ಲಿ ಜನದಟ್ಟಣೆ ಹೆಚ್ಚು, ಆದರೆ ಇದು ಒಂದು ಹಾಂಟೆಡ್ ತಾಣ ಎನ್ನುವುದು ಹೆಚ್ಚಿನ ಜನರ ಗಮನಕ್ಕೆ ಬಂದಿಲ್ಲ.

ಆದರೆ ಕೆಲವರು ಹೇಳುವ ಪ್ರಕಾರ, ಈ ಜಾಗದಲ್ಲಿ ರಾತ್ರಿ ಹೊತ್ತು ಬಿಳಿ ಸೀರೆಯುಟ್ಟ ಮಹಿಳೆಯೊಬ್ಬಳು ಲಿಫ್ಟ್ ಕೇಳುತ್ತಾಳಂತೆ.

ಒಂದು ವೇಳೆ ನೀವು ವಾಹನ ನಿಲ್ಲಿಸದಿದ್ದರೆ, ಬೈಕ್ ಅಥವಾ ಕಾರು ಎಷ್ಟು ವೇಗವಾಗಿ ಹೋಗುತ್ತದೆ ಅಷ್ಟೇ ವೇಗದಲ್ಲಿ ಆ ಪ್ರೇತಾತ್ಮ ಹಿಂಬಾಲಿಸುತ್ತಂತೆ.

ಇದನ್ನೂ ಓದಿ : https://vijayatimes.com/iran-actress-detained/


ಪಶ್ಚಿಮ ಬಂಗಾಳದ ಡೌ ಹಿಲ್ : ಇದೊಂದು ಸಾವಿನ ಹಾದಿ ಎಂದೇ ಕುಖ್ಯಾತವಾಗಿದೆ. ಇಲ್ಲಿ ಜನರು ರುಂಡವಿಲ್ಲದ ಹುಡುಗನ ದೇಹವೊಂದು ಅಟ್ಟಿಸಿಕೊಂಡು ಬಂದು ಮರಗಳ ಎಡೆಯಲ್ಲಿ ಕಾಣೆಯಾಗುವುದನ್ನು ನೋಡಿದ್ದಾರೆ. ಇದನ್ನು ಕಂಡು ಹೆದರಿದ ಕೆಲವರು ಆತ್ಮಹತ್ಯೆ ಮಾಡಿಕೊಂಡ ಉದಾಹರಣೆಗಳೂ ಇವೆ.


ಪುಣೆಯ ಶನೀಶ್ವರವಾಡ ಕೋಟೆ : ಇಲ್ಲಿ ಹುಣ್ಣಿಮೆ ದಿನಗಳಲ್ಲಿ ಅಪರಿಚಿತ ವ್ಯಕ್ತಿಯ ಸ್ವರ ಕೇಳಿಸುತ್ತದಂತೆ. ಈ ವ್ಯಕ್ತಿ ಅಳುತ್ತಾ ಸಹಾಯಕ್ಕಾಗಿ ಅಂಗಲಾಚುತ್ತಿರುತ್ತದೆ,

ಒಬ್ಬ ಸಣ್ಣ ಹುಡುಗ ‘ಕಾಕಾ ನನ್ನನು ರಕ್ಷಿಸಿ’ ಎಂದು ಆಕ್ರಂದಿಸುವ ಶಬ್ದ ಕೇಳಿಸುತ್ತದಂತೆ.


ಭಾಂಗ್ರಾದ ಕೋಟೆ : ಈ ಕೋಟೆ ಇಂದಿಗೂ ಬಹಳ ನಿಗೂಢ ಎಂದು ಹೆಸರಾಗಿದೆ. ಬಹಳ ಹಿಂದಿನ ಕಾಲದಲ್ಲಿ ಒಬ್ಬ ಮಂತ್ರವಾದಿ ಇಲ್ಲಿನ ಅರಮನೆಯಲ್ಲಿ ಮಾಟ ಮಾಡಿದ್ದ,

ಅದರಿಂದಾಗಿ ಭಾಂಗ್ರಾದಲ್ಲಿದ್ದ ಸುತ್ತಲಿನ ಜನರು ಅಲ್ಲಿಂದ ಬೇರೆಡೆ ವಲಸೆ ಹೋದರಂತೆ.

https://youtu.be/DXZ9Sc0_agQ ಮುರುಗಮಲ್ಲ ನ್ಯಾಯಬೆಲೆ ಅಂಗಡಿಯಲ್ಲಿ ಹಗಲು ದರೋಡೆ.

ಹಾಗಾಗಿ, ಇಂದಿಗೂ ಈ ಜಾಗದಲ್ಲಿ ಸಂಜೆಯ ನಂತರ ಆತ್ಮಗಳ ಉಪಟಳವಿರುತ್ತದೆ ಎಂದು ಹೇಳಲಾಗುತ್ತದೆ. ಆದ್ದರಿಂದ ಸಂಜೆಯ ನಂತರ ಈ ಕೋಟೆಗೆ ಯಾರೂ ಹೋಗಬಾರದು ಎಂಬ ನಂಬಿಕೆ ಜನರಲ್ಲಿದೆ.

Exit mobile version