ಹವಾಯಿಯ ಮಾಯಿ ದ್ವೀಪದಲ್ಲಿ ಹಬ್ಬಿದ ಕಾಡ್ಗಿಚ್ಚು: ಮೃತರ ಸಂಖ್ಯೆ 53 ಕ್ಕೆ ಏರಿಕೆ, ಬದುಕುಳಿದವರಿಗಾಗಿ ಶೋಧ, ಲಹೈನಾ ಪಟ್ಟಣ ಸುಟ್ಟು ಕರಕಲು

America : ಅಮೆರಿಕದ ಪೆಸಿಫಿಕ್ ಮಹಾಸಾಗರದ(Pacific Ocean) ಮಧ್ಯಭಾಗದಲ್ಲಿರುವ ಐತಿಹಾಸಿಕ ಪ್ರವಾಸಿ ದ್ವೀಪ ಪಟ್ಟಣವಾದ ಮಾಯಿ ಅರಣ್ಯದ (Hawaiis Maui Island forestfires)

ಸ್ಥಿತಿ ತುಂಬಾ ಕೆಟ್ಟದಾಗಿದೆ. ಮಾಯಿ ಅರಣ್ಯದಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿದೆ. ಅರಣ್ಯ ಕಾಡ್ಗಿಚ್ಚು ಸದ್ಯಕ್ಕೆ ಆರುವಂತೆ ಕಾಣಿಸುತ್ತಿಲ್ಲ, ವೇಗವಾಗಿ ಅರಣ್ಯದ ತುಂಬೆಲ್ಲಾ ಹಬ್ಬುತ್ತಿದೆ.

ಜನರನ್ನು ಸ್ಥಳಾಂತರಿಸುವ ಸಮಯದಲ್ಲಿ ಲಾಹೈನಾ(Lahaina) ಪಟ್ಟಣದಲ್ಲಿ ಬೆಂಕಿಗೆ ಸಿಲುಕಿ ಕನಿಷ್ಠ 53 ಮಂದಿ ಸಾವನ್ನಪ್ಪಿದ್ದಾರೆ, ಬೆಂಕಿಯನ್ನು ನಿಯಂತ್ರಿಸಲು ಅಗ್ನಿಶಾಮಕ ದಳದವರು

ನಿರಂತರ ಪ್ರಯತ್ನಿಸುತ್ತಿದ್ದಾರೆ.ಆಗಸ್ಟ್‌ 9 ರಿಂದ ಹವಾಯಿಯ ಮಾಯಿಯಲ್ಲಿ ಭಾರಿ ಕಾಡ್ಗಿಚ್ಚು ಆವರಿಸಿದೆ.

ಹವಾಯಿಯ(Hawaii) ಮಾಯಿ ದ್ವೀಪದಲ್ಲಿರುವ(Maui Island) ಐತಿಹಾಸಿಕ ಪಟ್ಟಣವಾದ ಲಹೈನಾವನ್ನು ಕಾಡ್ಗಿಚ್ಚು(Forest Fire) ಸಂಪೂರ್ಣ ನೆಲಸಮಗೊಳಿಸಿದೆ. ಈ ಕಾಡ್ಗಿಚ್ಚಿನಿಂದಾಗಿ

ಕನಿಷ್ಠ 53 ಜನರು ಈವರೆಗೆ ಸಾವನ್ನಪ್ಪಿದ್ದಾರೆ ಮತ್ತು ಈಗಾಗಲೇ ಇಲ್ಲಿಂದ ಸಾವಿರಾರು ಜನರನ್ನು ಸ್ಥಳಾಂತರಿಸಲಾಗಿದೆ. ಅನೇಕ ನೆರೆಹೊರೆಯ ವನ್ಯಜೀವಿಗಳು ಸಹ ಈ ಕಾಡ್ಗಿಚ್ಚಿನೊಂದಿಗೆ

ವೇಗವಾಗಿ ಬೀಸಿದ ಗಾಳಿಯಿಂದ (Hawaiis Maui Island forestfires) ಸುಟ್ಟುಭಸ್ಮವಾಗಿವೆ.

ಈವರೆಗೆ 1,700ಕ್ಕೂ ಹೆಚ್ಚು ಕಟ್ಟಡಗಳು ಮತ್ತು ಶತಕೋಟಿ ಡಾಲರ್ ಆಸ್ತಿ ‘ಕಾಡ್ಗಿಚ್ಚಿಗೆ ನಾಶವಾಗಿದೆ ಎಂದು ಗುರುವಾರ ಸಿಎನ್‌ಎನ್‌ಗೆ(CNN) ಹವಾಯಿ ಗವರ್ನರ್ ಜೋಶ್ ಗ್ರೀನ್ (Josh Green)

ಅವರು ಈ ಬಗ್ಗೆ ಮಾತನಾಡಿ ಹೇಳಿದರು. ಲಹೈನಾ ಎಲ್ಲವೂ ಸುಟ್ಟು ಕರಕಲಾಗಿದೆ”,”ನಾನು ನೋಡಿರದ ಅತ್ಯಂತ ಕೆಟ್ಟ ದುರಂತ ಇದಾಗಿದೆ ಎಂದು ಅಲ್ಲಿಯ ಸ್ಥಳೀಯ ನಿವಾಸಿ ಮೇಸನ್

ಜಾರ್ವಿ (Mason Jarvey) ಲಹೈನಾದಲ್ಲಿ ಕಾಡ್ಗಿಚ್ಚಿನ ಅಪಾಯವನ್ನು ವಿವರಿಸಿ ಹೇಳಿದ್ದಾರೆ.

ಗುರುವಾರ ಬೆಳಗಿನ ವೇಳೆಗೆ 80 ಪ್ರತಿಶತದಷ್ಟು ಲಹೈನಾವನ್ನು ಸುಟ್ಟುಹಾಕಿದ ಬೆಂಕಿಯು ಆವರಿಸಿದೆ ಎಂದು ಹೇಳಲಾಗುತ್ತಿದೆ. ಅಧಿಕಾರಿಗಳು ಲಹೈನಾ ಮತ್ತು ಅಲ್ಲಿಯ ಸುತ್ತಮುತ್ತಲಿನ

ಕೆಲವು ಪ್ರದೇಶಗಳು ವ್ಯಾಪಕವಾಗಿ ವಿನಾಶ ಆಗುತ್ತಿರುವುದನ್ನು ಗಮನಿಸಿ 14,000 ಕ್ಕೂ ಹೆಚ್ಚು ಜನರನ್ನು ಬುಧವಾರದ ವೇಳೆಗೆ ಮಾಯಿಯಿಂದ ಸ್ಥಳಾಂತರಿಸಿದ್ದಾರೆ. ರಾತ್ರೋರಾತ್ರಿ ಲಹೈನಾನಲ್ಲಿ

ಬೆಂಕಿ ಬಿದ್ದಿದ್ದು ಪಟ್ಟಣದ ಸುಮಾರು ಭಾಗ ಈಗಾಗಲೇ ಬಾರಿ ಗಾಳಿಯಿಂದ ಉರಿದುಹೋಗಿದೆ,ಪೊಲೀಸರು (Police) ಟ್ಟೀಟ್‍ (Tweet) ಮೂಲಕ ಪ್ರವಾಸಿಗರು ಈ ದ್ವೀಪಕ್ಕೆ ಹೋಗಬೇಡಿ ಎಂದು

ಸಂದೇಶ ರವಾನಿಸಿದ್ದಾರೆ.

ಇದನ್ನೂ ಓದಿ : ಸಮಸ್ಯೆಗಳ ಸಾಗರದಲ್ಲಿ ನಲುಗಿ ಹೋಗಿರುವ ಪಾಕಿಸ್ತಾನದಲ್ಲಿ ಇದೀಗ ಸಂಸತ್ ವಿಸರ್ಜನೆ, ಮುಂದಿನ ಕಥೆ ಏನು?

ಪಶ್ಚಿಮ ಮಾಯಿಯಲ್ಲಿ ಎಲ್ಲಾ ರಸ್ತೆಗಳನ್ನು ಬಂದ್ ಮಾಡಲಾಗಿದೆ ಇಲ್ಲಿ ಅತಿದೊಡ್ಡ ಜನ ಸಮುದಾಯ ವಾಸಿಸುತ್ತಿದ್ದಾರೆ ಆದ್ದರಿಂದ ತುರ್ತು ಸಿಬ್ಬಂದಿ ಹೊರತುಪಡಿಸಿ ಎಲ್ಲರಿಗೂ ರಸ್ತೆ ಬಂದ್ ಮಾಡಲಾಗಿದೆ.

ಶುಷ್ಕ ಗಾಳಿ ಇರುವ ಕಾರಣ ಅಲ್ಲಿ ಮಾನವ ಚಟುವಟಿಕೆಯಿಂದ ಉಂಟಾದ ಬೆಂಕಿಯು ಬೇಗನೆ ಪಸರಿಸಿ ಕ್ಷಣ ಮಾತ್ರದಲ್ಲಿ ಇಡೀ ಪಟ್ಟಣದಲ್ಲಿ ವ್ಯಾಪಿಸಿದೆ. ಇಬ್ಬರು ಮಕ್ಕಳು ಬೆಂಕಿ ಮತ್ತು ಹೊಗೆಯ

ವಾತಾವರಣದಿಂದ ತಪ್ಪಿಸಿಕೊಳ್ಳಲು ಸಾಗರಕ್ಕೆ ದುಮುಕಿದ್ದರು ಇದೀಗ ಅಮೆರಿಕ ಕೋಸ್ಟ್ ಗಾರ್ಡ್ (Coast Guard) ಆ ಮಕ್ಕಳೂ ಸೇರಿದಂತೆ 14 ಜನರನ್ನು ರಕ್ಷಿಸಿದ್ದಾರೆ.

ಈ ಪಟ್ಟಣದಲ್ಲಿ ಇರುವ ಅಗ್ನಿಶಾಮಕ ಠಾಣೆ ಈಗಾಗಲೇ ಬಹುತೇಕವಾಗಿ ಹಾನಿಯಾಗಿದ್ದು ,ಅಲ್ಲದೆ ಬೆಂಕಿಯಿಂದ ಅಗ್ನಿಶಾಮಕ ಹೆಲಿಕಾಪ್ಟರ್ (Helicopter) ಕೂಡ ಬೂದಿಯಾಗಿದೆ. ಪ್ರಸ್ತುತ ದ್ವೀಪದ

ಒಂದು ಭಾಗ ಸಂಪೂರ್ಣ ನಾಶವಾಗಿದೆ ಅಲ್ಲದೆ ಪರಿಸ್ಥತಿ ಸ್ವಲ್ಪ ಹತೋಟಿಗೆ ಬಂದಿದೆ. ವಿನಾಶಕಾರಿ ಬೆಂಕಿಯ ಸರಣಿಯು ಮನೋಹರವಾದ ದ್ವೀಪ ಮಾಯಿಯಲ್ಲಿನ ಜನ ಸಮುದಾಯವನ್ನು ತತ್ತರಿಸುವಂತೆ

ಮಾಡಿದೆ. ಈ ಮಾನವ ಚಟುವಟಿಕೆಯ ಪಾತ್ರದ ಬಗ್ಗೆ ಭಾರಿ ಕಾಡ್ಗಿಚ್ಚು ದುರಂತಕ್ಕೆ ತಜ್ಞರು ಕಳವಳ ವ್ಯಕ್ತಪಡಿಸುವಂತೆ ಮಾಡಿದೆ. ಶುಷ್ಕ ಪರಿಸ್ಥಿತಿಗಳಿಂದಾಗಿ ಮತ್ತು ಬಲವಾದ ಗಾಳಿಯಿಂದಾಗಿ ಇಡೀ

ಮಾಯಿಯನ್ನು ಆವರಿಸಿರುವ ಬೆಂಕಿಯ ಮೂಲ ಯಾವುದು ಎಂದು ಕಂಡು ಹಿಡಿಯಲು ಅಧಿಕಾರಿಗಳು ಈಗಾಗಲೇ ಪರದಾಡುತ್ತಿದ್ಧಾರೆ.

ರಶ್ಮಿತಾ ಅನೀಶ್

Exit mobile version