ಬಿಯರ್ ನಲ್ಲಿ ಅಪಾಯಕಾರಿ ಅಂಶ ಪತ್ತೆ : 350000 ಬಾಕ್ಸ್ ಕಿಂಗ್ ಫಿಷರ್ ಬಿಯರ್ ವಶಕ್ಕೆ ಪಡೆದ ಅಬಕಾರಿ ಇಲಾಖೆ..!

ಮೈಸೂರು : ಅಪಾಯಕಾರಿ ಅಂಶವು ಕಿಂಗ್ ಫಿಷರ್ ಬಿಯರ್ ನಲ್ಲಿ ಪತ್ತೆ ಆಗಿರುವ ಹಿನ್ನೆಲೆಯಲ್ಲಿ ಇದೀಗ ಸರಿ ಸುಮಾರು 25 ಕೋಟಿ ಮೌಲ್ಯದ ಕಿಂಗ್ ಫಿಶರ್ ಬಿಯರ್ ಅನ್ನು ಅಬಕಾರಿ ಇಲಾಖೆ ವಶ ಪಡಿಸಿಕೊಂಡಿದೆ. ಈ ಒಂದು ಅಪಾಯಕಾರಿ ಅಂಶವು ನಂಜನಗೂಡಿನ ಘಟಕದಲ್ಲಿ‌ ತಯಾರಿಸಲಾಗಿದ್ದ ಬಿಯರ್ ನಲ್ಲಿ ಮಾತ್ರ ಪತ್ತೆಯಾಗಿದೆ. ಮೈಸೂರು ಗ್ರಾಮಾಂತರ ಅಬಕಾರಿ ಇಲಾಖೆಯ ಉಪ ಆಯುಕ್ತ ಎ.ರವಿಶಂಕರ್ ನೀಡಿರುವ ಮಾಹಿತಿ ಪ್ರಕಾರ ಯುನೈಟೆಡ್ ಬ್ರಿವರಿಸಿಸ್ ಕಂಪನಿ ಈ ಬಿಯರ್ ನ್ನು ತಯಾರಿಸಿದೆ ಎಂದು ಹೇಳಿದ್ದಾರೆ.

ಕಿಂಗ್ ಫಿಷರ್ ಅಲ್ಟ್ರಾ ಲ್ಯಾಗರ್ ಬಿಯರ್ ನಲ್ಲಿ ಮತ್ತು ಕಿಂಗ್ ಫಿಷರ್ ಸ್ಟ್ರಾಂಗ್ ನಲ್ಲಿ ಅಪಾಯಕಾರಿ ಸೆಡಿಮೆಂಟ್ ಅಂಶ ಪತ್ತೆಯಾಗಿದೆ.ಈ ಸೆಡಿಮೆಂಟ್ ಅಂಶವು 7e ಮತ್ತು 7c ದಿನಾಂಕ 15-07-23 ರಂದು ಬಾಟಿಲಿಂಗ್ ಆದ ಬಿಯರ್ ನಲ್ಲಿ ಪತ್ತೆಯಾಗಿದೆ.

ಇದನ್ನೂ ಓದಿ : ಹನಿಟ್ರ್ಯಾಪ್‌: 60 ವರ್ಷದ ಹಿರಿಯ ನಾಗರಿಕನಿಂದ ₹82 ಲಕ್ಷ ಹಣ ಸುಲಿಗೆ ಮಾಡಿದ ಇಬ್ಬರು ಮಹಿಳೆಯರ ಬಂಧನ

ಕೆಮಿಕಲ್ ಲ್ಯಾಬ್ ಗೆ ಈ ಬಿಯರ್ ಸ್ಯಾಂಪಲ್ ಅನ್ನು ಕಳುಹಿಸಲಾಗಿತ್ತು. ಈ ಕೆಮಿಕಲ್ ವರದಿ 2-08-2023 ರಂದು ಬಂದಿತ್ತು, ಅನ್ ಫಿಟ್ ಫಾರ್ ಹ್ಯುಮನ್ ಕನ್ಸಂಪ್ಷನ್ ಎಂದು ಆ ವರದಿಯಲ್ಲಿ ಬಂದಿದೆ. ಆದರೆ ಅಷ್ಟರಲ್ಲಿ ಒಟ್ಟು‌ 78,678 ಬಾಕ್ಸ್ ಬಿಯರ್ ಬಾಕ್ಸ್ ಸರಬರಾಜಾಗಿತ್ತು. ಸದ್ಯ ಎಲ್ಲಾ ಬಾಕ್ಸ್ ಗಳನ್ನ ಈಗ ತಡೆಹಿಡಿಯಲಾಗಿದೆ.

ಕಂಪನಿಯ ವಿರುದ್ಧ ಗುಣಮಟ್ಟದ ಬಿಯರ್ ತಯಾರು ಮಾಡದ ಕಾರಣ ಎಫ್ ಐಆರ್ ದಾಖಲಿಸಲಾಗಿದೆ. ಅಷ್ಟೇ ಅಲ್ಲದೆ ಕೆಲವು ಅಂಗಡಿಗಳಿಗೂ ಡಿಪೋದಿಂದ ವಿತರಣೆಯಾಗಿತ್ತು. ಸದ್ಯ ಅಬಕಾರಿ ಇಲಾಖೆಯು ಈ ಬಿಯರ್ ಗಳನ್ನು ರಿಟೈಲ್ ನಲ್ಲೂ ಸೇಲ್ ಆಗದಂತೆ ತಡೆಹಿಡಿಯಲಾಗಿದೆ.

ಇದನ್ನೂ ಓದಿ : ಹೆಂಡತಿಗೆ ಇನ್ಸ್ಟಾಗ್ರಾಮ್‌ನಲ್ಲಿ ಹೆಚ್ಚು ಫಾಲೋವರ್ಸ್‌ ಇದ್ದಾರೆಂಬ ಅಸೂಯೆ ಮತ್ತು ಕೀಳರಿಮೆಯಿಂದ ಮಕ್ಕಳ ಎದುರೇ ಪತ್ನಿಯನ್ನು ಕೊಂದ ಉದ್ಯಮಿ

ಸದ್ಯ ಇನ್ ಹೌಸ್ ಕೆಮಿಸ್ಟ್ ಅವರು ಕೊಟ್ಟಿರುವ ರಿಪೋರ್ಟ್ ಮೇಲೆ ಕ್ರಮಗಳನ್ನು ಕೈಗೊಂಡಿದ್ದು, ಅಬಕಾರಿ ಇಲಾಖೆಯು ಮನುಷ್ಯರು ಕುಡಿಯಲು ಯೋಗ್ಯವಲ್ಲ ಎಂದು ಬಂದ ವರದಿ ಆದರಿಸಿ ಕ್ರಮ ಕೈಗೊಂಡಿದೆ.

ರಶ್ಮಿತಾ ಅನೀಶ್

Exit mobile version