Bengaluru, ಆಗಸ್ಟ್ 15: ಸಾಮಾಜಿಕ ಮಾಧ್ಯಮಗಳಲ್ಲಿ(Social Media) ಹಿರಿಯ ನಾಗರಿಕರೊಬ್ಬರ ಖಾಸಗಿ ಫೋಟೊಗಳನ್ನು (womens Honeytrap senior citizen) ವೈರಲ್ (Viral)
ಮಾಡುತ್ತೇವೆ ಎಂದು ಬೆದರಿಸಿ ಆ ವ್ಯಕ್ತಿಯಿಂದ ಹಣ ವಸೂಲಿ ಮಾಡುತ್ತಿದ್ದ ಇಬ್ಬರು ಮಹಿಳೆಯರನ್ನು ಇದೀಗ ಜಯನಗರ(Jayanagara) ಪೊಲೀಸರು ಬಂಧಿಸಿದ್ದಾರೆ. ಈಗಾಗಲೇ ಈ ಮಹಿಳೆಯರಿಗೆ
ನೊಂದಿರುವ ಸಂತ್ರಸ್ತ 82 ಲಕ್ಷ ರೂ.ಗಳನ್ನು ನೀಡಿದ್ದಾರೆ. ಅಷ್ಟೇ ಅಲ್ಲದೆ ಆ ಹಿರಿಯ ನಾಗರಿಕನ ಬಳಿ ಇನ್ನೂ ಹೆಚ್ಚಿನ ಹಣಕ್ಕಾಗಿ ಆರೋಪಿಗಳು ಬೇಡಿಕೆ ಇಟ್ಟಾಗ ಪೊಲೀಸರನ್ನು ಸಂಪರ್ಕಿಸಲು
ನಿರ್ಧರಿಸಿದ್ದಾರೆ (womens Honeytrap senior citizen) ಎಂದು ತಿಳಿದುಬಂದಿದೆ.
ಪೊಲೀಸರು(Police) ಬಂಧಿಸಿರುವ ಆ ಇಬ್ಬರು ಮಹಿಳೆಯರನ್ನು 40 ವರ್ಷದ ಅಣ್ಣಮ್ಮ(Annamma) ಮತ್ತು ಸ್ನೇಹಾ(Sneha) ಎಂದು ಗುರುತಿಸಲಾಗಿದೆ. ಜಯನಗರ ಪೊಲೀಸರು ಮಹಿಳೆಯರನ್ನು
ನಿವೃತ್ತ ಸರ್ಕಾರಿ ನೌಕರ ನೀಡಿದ ದೂರಿನ ಆಧಾರದ ಮೇಲೆ ಬಂಧಿಸಿದ್ದಾರೆ. ಪೊಲೀಸರು ದಾಖಲಿಸಿರುವ ಎಫ್‌ಐಆರ್(FIR) ಪ್ರಕಾರ, ಈ ಪ್ರಕರಣದಲ್ಲಿ ಆರೋಪಿ ನಂಬರ್ ಒನ್ ಅಣ್ಣಮ್ಮ ಆಗಿದ್ದಾಳೆ.
ನಂತರ ಅಣ್ಣಮ್ಮನೊಂದಿಗೆ ಸ್ನೇಹಾ ಸ್ನೇಹಿತರೊಬ್ಬರ ಮೂಲಕ ಸಂಪರ್ಕಕ್ಕೆ ಬಂದಿದ್ದಾಳೆ. ಸದ್ಯ ಇವಳು (womens Honeytrap senior citizen) ಎರಡನೇ ಆರೋಪಿ ಆಗಿದ್ದಾಳೆ.

ಈ ಪ್ರಕರಣದ ಕುರಿತು ಹಿರಿಯ ನಾಗರಿಕ, ಪೊಲೀಸರಿಗೆ ಹೇಳಿಕೆ ನೀಡಿರುವ ಪ್ರಕಾರ ನನ್ನ ಸ್ನೇಹಿತರೊಬ್ಬರು ‘ಅಣ್ಣಮ್ಮನಿಗೆ ಹಣದ ತೊಂದರೆ ಇದೆ ನೀವು ಅವಳಿಗೆ ಅವಳಿಗೆ ಹಣದ ಸಹಾಯ
ಮಾಡುವಂತೆ ಹೇಳಿದರು.ಮೊದಲ ಬಾರಿಗೆ ನಾನು ಅಣ್ಣಮ್ಮಳನ್ನು ಭೇಟಿಯಾದಾಗ, ತನ್ನ ಕಷ್ಟಗಳನ್ನು ಅವಳು ನನ್ನ ಹತ್ತಿರ ಹೇಳಿಕೊಂಡಳು. ಕ್ಯಾನ್ಸರ್‌ನಿಂದ (Cancer) ಅವಳ ಮಗ ಬಳಲುತ್ತಿದ್ದಾನೆ
ಎಂದೆಲ್ಲಾ ಅವಳ ನೋವು ತೋಡಿಕೊಂಡಳು. ಆ ಸಂದರ್ಭದಲ್ಲಿ ನನ್ನಿಂದ ಒಟ್ಟು 5,000 ರೂಪಾಯಿಗಳನ್ನು ಪಡೆದುಕೊಂಡಳು. ಪದೇ ಪದೇ ಕರೆ ಮಾಡಿ ಅದಾದ ಬಳಿಕ ನನ್ನ ಬಳಿ ಹಣದ
ಬೇಡಿಕೆ ಇಟ್ಟಿದ್ದಾಳೆ’ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ಹೆಂಡತಿಗೆ ಇನ್ಸ್ಟಾಗ್ರಾಮ್‌ನಲ್ಲಿ ಹೆಚ್ಚು ಫಾಲೋವರ್ಸ್ ಇದ್ದಾರೆಂಬ ಅಸೂಯೆ ಮತ್ತು ಕೀಳರಿಮೆಯಿಂದ ಮಕ್ಕಳ ಎದುರೇ ಪತ್ನಿಯನ್ನು ಕೊಂದ ಉದ್ಯಮಿ
ಎಲೆಕ್ಟ್ರಾನಿಕ್ ಸಿಟಿಯ (Electronic city) ಓಯೋ (OYO) ಹೋಟೆಲ್‌ಗೆ (Hotel) ಈ ವರ್ಷದ ಮೇ ತಿಂಗಳಲ್ಲಿ ಆ ಮಹಿಳೆಯು ನನ್ನನ್ನು ಕರೆದೊಯ್ದಳು. ಆ ಬಳಿಕ ಲೈಂಗಿಕ ಕ್ರಿಯೆ ಬಲವಂತವಾಗಿ
ನಡೆಸಿದಳು ಎಂದು ಸಂತ್ರಸ್ತ ಹೇಳಿಕೊಂಡಿದ್ದಾರೆ. ಆ ನಂತರ ಆಕೆಯ ಸ್ನೇಹಿತೆ ಸ್ನೇಹಾ ಎಂಬಾಕೆಯನ್ನು ಆರೋಪಿ ಅಣ್ಣಮ್ಮ ಪರಿಚಯಿಸಿ ಮಾಡಿಕೊಟ್ಟಳು. ಹಲವಾರು ಸಮಸ್ಯೆಗಳನ್ನು ಆಕೆಯ
ಸ್ನೇಹಿತೆ ಸ್ನೇಹಾ ಹೇಳಿಕೊಂಡು ಅವಳು ಕೂಡ ಹಣಕ್ಕೆ ಬೇಡಿಕೆಯಿಡಲು ಪ್ರಾರಂಭಿಸಿದಳು ಎಂದು ನಿವೃತ್ತ ನೌಕರ ಹೇಳಿಕೆ ದಾಖಲಿಸಿದ್ದಾರೆ.

ಸ್ನೇಹಾ ಅಣ್ಣಮ್ಮನಿಂದ ಈ ವರ್ಷ ಜೂನ್‌ನಲ್ಲಿ(June) ಸಂತ್ರಸ್ತರ ಖಾಸಗಿ ಚಿತ್ರಗಳನ್ನು ಪಡೆದುಕೊಂಡಿದ್ದಾಳೆ. ಆ ಖಾಸಗಿ ಚಿತ್ರಗಳನ್ನು ಸ್ನೇಹಿತರಿಗೆ ಮತ್ತು ನನ್ನ ಕುಟುಂಬಕ್ಕೆ ಕಳುಹಿಸುವುದಾಗಿ
ಬೆದರಿಕೆ ಹಾಕ ತೊಡಗಿದಳು. ಅವಾಗದಿಂದ ಎಲ್ಲಾ ತೊಂದರೆಗಳು ಪ್ರಾರಂಭವಾಯಿತು ಎಂದು ಹಿರಿಯ ನಾಗರಿಕ ಹೇಳಿದ್ದಾರೆ. ಸಂತ್ರಸ್ತರು ಅವಮಾನದ ಭಯದಿಂದ ಆರೋಪಿಗಳ ಎರಡು ವಿಭಿನ್ನ ಖಾತೆಗಳಿಗೆ
ಒಟ್ಟು 82 ಲಕ್ಷ ರೂ.ಗಳನ್ನು ವರ್ಗಾಯಿಸಿದ್ದಾರೆ. ನಂತರ ಆ ಆರೋಪಿಗಳು ಹಿರಿಯ ನಾಗರಿಕನಿಗೆ ಇದನ್ನು ಯಾರಿಗೂ ಬಹಿರಂಗಪಡಿಸದಂತೆ ಬೆದರಿಕೆ ಹಾಕಿದ್ದಾರೆ. ಅಷ್ಟೇ ಅಲ್ಲದೆ ಆರೋಪಿಗಳು ತಮ್ಮ
ಮಗಳ ಮೇಲೆ ಅತ್ಯಾಚಾರ ಮಾಡಿಸುವುದಾಗಿಯೂ ಬೆದರಿಕೆ ಹಾಕಿದ್ದಾರೆ ಎಂದು ಹೇಳಿಕೆ ದಾಖಲಿಸಿದ್ದಾರೆ.
ಕುಟುಂಬ ಸದಸ್ಯರಿಗೆ ನನ್ನ ಖಾಸಗಿ ಫೋಟೊಗಳನ್ನು ಕಳಿಹಿಸುವುದಾಗಿ ಬೆದರಿಕೆ ಹಾಕಿದರು. ಯಾಕೆಂದರೆ ಆರೋಪಿಗಳು 42 ಲಕ್ಷ ರೂ.ಗೆ ಮತ್ತೆ ಬೇಡಿಕೆಯಿಟ್ಟರು. ಪೊಲೀಸರನ್ನು ಆ ನಂತರ ನಾನು
ಸಂಪರ್ಕಿಸಲು ನಿರ್ಧರಿಸಿದೆ ಎಂದು ಹಿರಿಯ ನಾಗರಿಕರು ಹೇಳಿಕೊಂಡಿದ್ದಾರೆ. ಆ ಇಬ್ಬರು ಮಹಿಳೆಯರನ್ನು ಎಫ್‌ಐಆರ್ ಆಧಾರದ ಮೇಲೆ ಇದೀಗ ಮೇಲೆ ಬಂಧಿಸಲಾಗಿದೆ. ವಿಚಾರಣೆ ನಡೆಯುತ್ತಿದೆ.
ರಶ್ಮಿತಾ ಅನೀಶ್