ಮಹಾಕಾಳಿಯಲ್ಲಿ ಮೋದಿ ಪೂಜೆ ; ಒಂದು ಧರ್ಮದ ಪರಿಚಾರಕರಂತೆ ವರ್ತಿಸುವುದು ಸಂವಿಧಾನ ವಿರೋಧಿ ಕ್ರಮ : ಎಚ್‌.ಸಿ. ಮಹದೇವಪ್ಪ

BJP

Bengaluru : ಎಲ್ಲ ಧರ್ಮಗಳನ್ನು ಗೌರವಿಸಬೇಕಾದದ್ದು ಸಂವಿಧಾನ (Constitution) ರಕ್ಷಕರಾದ ಪ್ರಧಾನ ಮಂತ್ರಿಗಳ ಆದ್ಯ ಜವಾಬ್ದಾರಿ.

ಆದರೆ ನಮ್ಮ ಪ್ರಧಾನಿಗಳು ತಾವು ಪ್ರಧಾನಿ ಎಂಬುದನ್ನು ಮರೆತು ತಾವೇ ಒಂದು ನಿರ್ದಿಷ್ಟ ಧರ್ಮದ ಪರಿಚಾರಕರಂತೆ ವರ್ತಿಸುವುದು ಸಂವಿಧಾನ ವಿರೋಧಿ ಕ್ರಮವಾಗಿದೆ.

ಸಂವಿಧಾನ ನೀಡಿದ ಅಧಿಕಾರ ಸೌಲಭ್ಯವನ್ನು ಪಡೆದು ಸಂವಿಧಾನದ ಆಶಯಗಳ ರಕ್ಷಣೆಯ ಜವಾಬ್ದಾರಿಯನ್ನು ಹೊತ್ತಿರುವ ಪ್ರಧಾನಿಗಳು ತಮ್ಮ ಸ್ಥಾನದ ಘನತೆ ಮತ್ತು ಜವಾಬ್ದಾರಿಯನ್ನು ಮರೆತು ವರ್ತಿಸುತ್ತಿದ್ದಾರೆ,

ಎಂದು ಇತ್ತೀಚೆಗೆ ಪ್ರಧಾನಿ ಮೋದಿ ಉಜ್ಜೈನಿಯ (Ujjaini) ಮಾಹಾಕಾಳಿಯಲ್ಲಿ ಪೂಜೆ ಸಲ್ಲಿಸಿರುವುದಕ್ಕೆ ಕಾಂಗ್ರೆಸ್‌ ನಾಯಕ (Congress Leader) ಎಚ್.ಸಿ.ಮಹದೇವಪ್ಪ (HC Mahadevappa) ಆಕ್ಷೇಪ ವ್ಯಕ್ತಪಡಿಸಿದ್ದಾರೆ.

https://youtu.be/OnQ6TYin8EM

ಈ ಕುರಿತು ಟ್ವೀಟ್‌ (Tweet) ಮಾಡಿರುವ ಅವರು, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರೇ, ಜನರಿಗೆ ಒಳಿತಾಗಬೇಕು ಎಂಬುದೇ ನಿಮ್ಮ ಉದ್ದೇಶವಾಗಿದ್ದರೆ ಮೊದಲು ನಿಮ್ಮ ಕಚೇರಿಗೆ ಹೋಗಿ ಬೆಲೆ ಏರಿಕೆ ಕಡಿಮೆ ಮಾಡಿ,

ಒಂದಷ್ಟು ಜನಪರ ಯೋಜನೆ ಹಾಗೂ ಆಡಳಿತಾತ್ಮಕ ನೀತಿಗಳನ್ನು ರೂಪಿಸಿ.

ಇದನ್ನೂ ಓದಿ : https://vijayatimes.com/varanasi-court-over-carbon-dating/

ಆಗ ನಿಮ್ಮ ಪೂಜೆಯ ಉದ್ದೇಶ ಸಾರ್ಥಕಗೊಳ್ಳಲಿದೆ. ಪ್ರಧಾನಿ (HC Mahadevappa Allegation Over PM) ಮೋದಿಯವರು ದೇಶದ ಜನರಿಗೆ ಒಳಿತಾಗಲಿ ಎಂದು ಮಹಾಕಾಲ ದೇವರ ಪೂಜೆ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ.

ಪೆಟ್ರೋಲ್ ಬೆಲೆ 100 ರೂಪಾಯಿ ಗಡಿ ದಾಟಿಸಿ, ಅಡುಗೆ ಸಿಲಿಂಡರ್ ಬೆಲೆಯನ್ನು 400 ರಿಂದ 1000 ರೂಪಾಯಿ ಗಡಿ ದಾಟಿಸಿ,

ಜನರ ಕೊಳ್ಳುವ ಶಕ್ತಿಯನ್ನೇ ನಾಶ ಮಾಡಿದರೆ ಎಲ್ಲಿಂದ ಒಳ್ಳೆಯದಾಗುತ್ತದೆ. ವರ್ಷವೀಡೀ ಕಾರ್ಪೊರೇಟ್ ಮಂದಿಯ ಸೇವೆ ಮಾಡಿ ಅವರನ್ನು ಶ್ರೀಮಂತರನ್ನಾಗಿಸುವ ಇವರು

ಗುಜರಾತ್ ಚುನಾವಣೆ (Gujarat Election) ಸಮಯದಲ್ಲಿ ಮಾತ್ರ ದೇವಾಲಯ ಸೇವೆಗೆ ಬರುವುದು ಹಾಸ್ಯಾಸ್ಪದ ಸಂಗತಿ ಎಂದು ಟೀಕಿಸಿದ್ದಾರೆ.

ಇದೇ ವೇಳೆ ಬಿಜೆಪಿ ನಾಯಕರ (BJP Leader) ದಲಿತರ ಮನೆ ಭೇಟಿಯನ್ನು ಟೀಕಿಸಿದ ಅವರು, ದಲಿತರ ಮನೆಗೆ ಊಟಕ್ಕೆ ಹೋಗುತ್ತಿದ್ದೇವೆ ಎಂದು ಬಹಿರಂಗವಾಗಿ ಹೇಳುವುದು,

ಅಸಹ್ಯಕರವಾದ ಜಾತಿ ಶ್ರೇಷ್ಠತೆಯನ್ನು ಬಿಂಬಿಸುವ ಮತ್ತು ಅವರನ್ನು ನೇರವಾಗಿ (HC Mahadevappa Allegation Over PM )ಅವಮಾನಿಸುವ ಸಂಗತಿಯಾಗಿದ್ದು, ಇಂತಹ ಸಂವಿಧಾನ ವಿರೋಧಿ ನಡವಳಿಕೆಯನ್ನು ನಾನು ತೀವ್ರವಾಗಿ ವಿರೋಧಿಸುತ್ತೇನೆ.

ಇದನ್ನೂ ಓದಿ : https://vijayatimes.com/darling-prabhas-appreciates-kantara/

ಪಕ್ಷಾತೀತವಾಗಿ ರಾಜಕೀಯ ಕ್ಷೇತ್ರದ ಒಳಗೆ ಆಗಮಿಸುತ್ತಿರುವ ಬಹಳಷ್ಟು ಮಂದಿ ಯುವಕ ಯುವತಿಯರಿಗೆ ಸಂವಿಧಾನದ ಆಶಯಗಳ ಬಗ್ಗೆ ಕುರಿತು ಕಿಂಚಿತ್ ತಿಳುವಳಿಕೆ ಇಲ್ಲದೇ ಇರುವುದೇ ಇಂದಿನ ಅಜ್ಞಾನ, ಅಂಧ ಭಕ್ತಿ,

ತಲೆಯಲ್ಲಿ ಕೀಳು ಮಟ್ಟದ ಚರ್ಚಾ ಪ್ರವೃತ್ತಿ ಹೆಚ್ಚಾಗಲು ಬಹುದೊಡ್ಡ ಕಾರಣವಾಗಿದೆ ಎಂದಿದ್ದಾರೆ.

Exit mobile version