• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ರಾಜಕೀಯ

ಕನ್ನಡ ಲಿಪಿಯೊಂದಿಗೆ ಸಾಮರಸ್ಯದ ಭಾಷೆಯಾಗಿ ಬೆರೆತಿರುವ ಬ್ಯಾರಿ ಭಾಷೆಗೆ ಕವಿಗೋಷ್ಠಿಯಲ್ಲಿ ಅವಕಾಶ ನಿರಾಕರಿಸಿರುವುದು ಅಕ್ಷಮ್ಯ : ಹೆಚ್.ಡಿಕೆ

Mohan Shetty by Mohan Shetty
in ರಾಜಕೀಯ, ರಾಜ್ಯ
hdk
0
SHARES
3
VIEWS
Share on FacebookShare on Twitter

Bengaluru : ರಾಜ್ಯ ಬಿಜೆಪಿ ಸರಕಾರ ಮತ್ತು ದಸರಾ(HDK Allegation over state govt) ಸಮಿತಿ ಕೂಡಲೇ ಈ ಬಗ್ಗೆ ಪರಿಶೀಲಿಸಿ, ಆಗಿರುವ ಪ್ರಮಾದವನ್ನು ಸರಿಪಡಿಸಿ ದಸರಾ ಕವಿಗೋಷ್ಠಿಯಲ್ಲಿ ಬ್ಯಾರಿ ಭಾಷೆಗೆ ಅವಕಾಶ ಕಲ್ಪಿಸಿಕೊಡಬೇಕು.

ವಚನ ಸಾಹಿತ್ಯ ಸೇರಿ ಅನೇಕ ಕನ್ನಡದ ಅಮೂಲ್ಯ ಕೃತಿಗಳು(HDK Allegation over state govt) ಬ್ಯಾರಿಗೂ ಅನುವಾದಗೊಂಡಿವೆ.

HDK Allegation over state govt

ಕನ್ನಡ ನೆಲದಲ್ಲಿ ಕನ್ನಡ ಲಿಪಿಯೊಂದಿಗೆ ಸಾಮರಸ್ಯದ ಭಾಷೆಯಾಗಿ ಬೆರೆತಿರುವ ಬ್ಯಾರಿ ಭಾಷೆಗೆ ಈ ವರ್ಷ ದಸರಾ ಕವಿಗೋಷ್ಠಿಯಲ್ಲಿ ಅವಕಾಶ ನಿರಾಕರಿಸಿರುವುದು ಅಕ್ಷಮ್ಯ ಎಂದು ಜೆಡಿಎಸ್‌ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಅವರು, ಬ್ಯಾರಿ ಅಕಾಡೆಮಿಯ ಮೂಲಕ ಅತ್ಯುತ್ತಮ ಸಾಹಿತ್ಯಕ ಕಾರ್ಯಕ್ರಮಗಳು ನಡೆಯುತ್ತಿವೆ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಬ್ಯಾರಿ ಅಧ್ಯಯನ ಪೀಠವನ್ನೂ ಸ್ಥಾಪಿಸಲಾಗಿದೆ.

ಇದನ್ನೂ ಓದಿ : https://vijayatimes.com/pfi-bank-accounts-closed/

ವಿಶೇಷವೆಂದರೆ, ಬ್ಯಾರಿ ಭಾಷಿಗರು ಕನ್ನಡ ಲಿಪಿಯನ್ನೇ ಬಳಸಿ ಅತ್ಯುತ್ತಮ ಕೃತಿಗಳನ್ನು ರಚಿಸಿದ್ದು, ಅವುಗಳಲ್ಲಿ ಕೆಲ ಕೃತಿಗಳು ಕನ್ನಡಕ್ಕೂ ಅನುವಾದಿಸಲ್ಪಟ್ಟಿವೆ.

ರಾಜ್ಯದಲ್ಲಿ 12 ಲಕ್ಷಕ್ಕೂ ಹೆಚ್ಚು ಜನರು ಬ್ಯಾರಿ ಭಾಷೆ ಮಾತಾಡುತ್ತಾರೆ. 2007ರಲ್ಲಿ ನಾನು ಮುಖ್ಯಮಂತ್ರಿ ಆಗಿದ್ದಾಗ ಬ್ಯಾರಿ ಭಾಷಿಗರ ಬಹುಕಾಲದ ಬೇಡಿಕೆ ಆಗಿದ್ದ ‘ಬ್ಯಾರಿ ಸಾಹಿತ್ಯ ಅಕಾಡೆಮಿʼ ಸ್ಥಾಪನೆಗೆ ಅನುಮೋದನೆ ನೀಡಿದ್ದೆ ಎಂದಿದ್ದಾರೆ.

https://youtu.be/goe0pevvNrg

ಏಕಭಾಷೆಯನ್ನು ಮೆರೆಸುವ ಬಿಜೆಪಿ ಸರ್ಕಾರ ಮತ್ತು ಬಿಜೆಪಿ ಪಕ್ಷಕ್ಕೆ(BJP Party) ಈ ನೆಲದ ತಾಯಿಭಾಷೆ ಕನ್ನಡವೂ ಸೇರಿ ಇತರೆ ಎಲ್ಲಾ ಉಪಭಾಷೆಗಳನ್ನು ಅಳಿಸಿ ಹಾಕಬೇಕೆಂಬ ಕೆಟ್ಟ ಮನಃಸ್ಥಿತಿ ಇರುವಂತಿದೆ.

ಇದು ಖಂಡಿತಾ ನಡೆಯುವುದಿಲ್ಲ. ಈ ವರ್ಷದ ದಸರಾ ಕವಿಗೋಷ್ಠಿಯಲ್ಲಿ ಕನ್ನಡದೊಂದಿಗೆ ತುಳು, ಕೊಂಕಣಿ, ಕೊಡವ, ಅರೆಭಾಷೆ ಮತ್ತು ಎರವ ಬಾಷೆಗಳಿಗೆ ಅವಕಾಶ ನೀಡಿರುವುದು ಸ್ವಾಗತಾರ್ಹ.

hdk - HDK Allegation over state govt

ಆದರೆ, ಬ್ಯಾರಿ ಭಾಷೆಗೆ ಅವಕಾಶ ನಿರಾಕರಿಸಿರುವುದು ರಾಜ್ಯ ಸರಕಾರದ ಸಂಕುಚಿತ ಮನೋಭಾವಕ್ಕೆ ಸಾಕ್ಷಿ. ಜಗದ್ವಿಖ್ಯಾತ ದಸರಾ ಕವಿಗೋಷ್ಠಿಯಲ್ಲಿ ಬ್ಯಾರಿ ಭಾಷೆಗೆ ಅವಕಾಶ ನಿರಾಕರಿಸಿರುವುದು ಸಮ್ಮತವಲ್ಲ.

ಬ್ಯಾರಿಯು ಕನ್ನಡದ ನೆರಳಿನಲ್ಲಿ ಅರಳಿರುವ ಭಾಷೆ ಹಾಗೂ ಕರಾವಳಿಯಲ್ಲಿ ಅನೇಕರ ನಿತ್ಯ ನುಡಿ.

ಇದನ್ನೂ ಓದಿ : https://vijayatimes.com/free-ration-plan-extended/

ಕೇವಲ ಒಂದು ಸಮುದಾಯದವರು ಮಾತನಾಡುತ್ತಾರೆ ಎನ್ನುವ ಕಾರಣಕ್ಕೆ ಬ್ಯಾರಿಯನ್ನು ಬೇಡವೆನ್ನುವುದು ತಪ್ಪು. ರಾಜ್ಯ ಸರಕಾರದ್ದು ಏಕಪಕ್ಷೀಯ ನಡೆ ಎಂದು ಟೀಕಿಸಿದ್ದಾರೆ.

  • ಮಹೇಶ್.ಪಿ.ಎಚ್
Tags: bjpHDKKarnatakapoliticalpolitics

Related News

ಜಾಮೀನು ಅರ್ಜಿ ವಜಾ ; ಮಾಡಾಳ್ ವಿರೂಪಾಕ್ಷಪ್ಪ ಬಂಧನಕ್ಕೆ ಕ್ಷಣಗಣನೆ
ರಾಜಕೀಯ

ಜಾಮೀನು ಅರ್ಜಿ ವಜಾ ; ಮಾಡಾಳ್ ವಿರೂಪಾಕ್ಷಪ್ಪ ಬಂಧನಕ್ಕೆ ಕ್ಷಣಗಣನೆ

March 27, 2023
ಕರ್ನಾಟಕದಲ್ಲಿ ಮುಸ್ಲಿಮರಿಗೆ 4% ಕೋಟಾವನ್ನು ರದ್ದುಗೊಳಿಸಿದ್ದು ಎಷ್ಟು ಸರಿ? : ಅಸಾದುದ್ದೀನ್ ಓವೈಸಿ
ರಾಜಕೀಯ

ಕರ್ನಾಟಕದಲ್ಲಿ ಮುಸ್ಲಿಮರಿಗೆ 4% ಕೋಟಾವನ್ನು ರದ್ದುಗೊಳಿಸಿದ್ದು ಎಷ್ಟು ಸರಿ? : ಅಸಾದುದ್ದೀನ್ ಓವೈಸಿ

March 27, 2023
ವೈಟ್ ಫೀಲ್ಡ್ ಹೊಸ ಮೆಟ್ರೋ ಮಾರ್ಗದ ಮೊದಲ ದಿನ ಪ್ರಯಾಣಿಸಿದ ಸಂಖ್ಯೆ 16000 ಕ್ಕೂ ಅಧಿಕ! ವರದಿ
ಪ್ರಮುಖ ಸುದ್ದಿ

ವೈಟ್ ಫೀಲ್ಡ್ ಹೊಸ ಮೆಟ್ರೋ ಮಾರ್ಗದ ಮೊದಲ ದಿನ ಪ್ರಯಾಣಿಸಿದ ಸಂಖ್ಯೆ 16000 ಕ್ಕೂ ಅಧಿಕ! ವರದಿ

March 27, 2023
ಬಿಎಸ್‌ವೈ ಮನೆ ಮೇಲೆ ಚಪ್ಪಲಿ ! ಒಳಮೀಸಲಾತಿ ವಿರೋಧಿಸಿ ಬಂಜಾರರ ಆಕ್ರೋಶ
ರಾಜಕೀಯ

ಬಿಎಸ್‌ವೈ ಮನೆ ಮೇಲೆ ಚಪ್ಪಲಿ ! ಒಳಮೀಸಲಾತಿ ವಿರೋಧಿಸಿ ಬಂಜಾರರ ಆಕ್ರೋಶ

March 27, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.