ಕುಮಾರಸ್ವಾಮಿ ಟೂರಿಂಗ್ ಟಾಕೀಸ್ ತರಹ ಎಂದು ಟಾಂಗ್ ನೀಡಿದ ಡಿ ಕೆ ಶಿವಕುಮಾರ್.

Kolar: ಪ್ರತಿಯೊಬ್ಬ ಅಭ್ಯರ್ಥಿಗೂ ಸ್ವ ಕ್ಷೇತ್ರ ಇರುತ್ತದೆ. ಆ ಕ್ಷೇತ್ರದಲ್ಲಿ ನಿಂತು ಜನಮನ್ನಣೆ ಗಳಿಸಿ ಆರಿಸಿ ಬರುತ್ತಾರೆ. ಆದ್ರೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ (Kumaraswamy) ಟೂರಿಂಗ್ ಟಾಕೀಸ್ ಇದ್ದ ಹಾಗೇ . ಅವರಿಗೆ ಸ್ವಂತ ಕ್ಷೇತ್ರವೂ ಇಲ್ಲ. ಗೆದ್ದು ಬಂದ ಯಾವ ಕ್ಷೇತ್ರದ ಜನರ ವಿಶ್ವಾಸ ಕೂಡ ಗಳಿಸಲಿಲ್ಲ. ರಾಮನಗರದಲ್ಲಿ (Ramanagar) ತಮ್ಮ ಭಾಮೈದ ಡಾ. ಮಂಜುನಾಥ್ ರಿಗೆ ಬಿಜೆಪಿ ಟಿಕೆಟ್ ಕೊಡಿಸಿದ್ದಾರೆ. ಕೋಲಾರದಲ್ಲಿ ಮಲ್ಲೇಶ್‌ಗೆ ತೆನೆ ನೀಡಿದ್ದಾರೆ, ಅಲ್ಲಿ ಕಮಲ ಬೇಕು ಇಲ್ಲಿ ತೆನೆ ಬೇಕಾ ಎಂದು ರಾಜ್ಯದ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (D.K Shivakumar) ಹರಿಹಾಯ್ದಿದ್ದಾರೆ.

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ (Kumaraswamy) ಒಂದು ಸ್ವಕ್ಷೇತ್ರ ಎಂಬುವುದು ಇಲ್ಲದೆ ಪ್ರತಿಯೊಂದು ಚುನಾವಣೆಗೆ ಒಂದೊಂದು ಕ್ಷೇತ್ರದಲ್ಲಿ ಸ್ಪರ್ಧಿಸುವ ಮೂಲಕ ಟೂರಿಂಗ್ ಟಾಕೀಸ್ ಪ್ರೋಗಾಮ್ ರೀತಿಯೇ ಯಾವ ಕ್ಷೇತ್ರಕ್ಕೆ ಹೋಗುತ್ತಾರೋ ಆ ಕ್ಷೇತ್ರದ ಕುರಿತು ಮಾತನಾಡುತ್ತಾರೆ ಹಾಗಾಗಿ ಯಾವ ಕ್ಷೇತ್ರದಲ್ಲೂ ಜನರ ವಿಶ್ವಾಸ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ.

ಇದೀಗ ನೀರಾವರಿ ಯೋಜನೆ ತರದಿದ್ದರೆ ನಿವೃತ್ತಿ ಎಂದಿದ್ದಾರೆ. ಈ ತರಹದ ಅದೆಷ್ಟೋ ಹೇಳಿಕೆಗಳನ್ನು ಈ ಮೊದಲು ಕೂಡ ಹೇಳಿ ಜನರ ನಂಬಿಕೆಯನ್ನು ಕಳೆದುಕೊಂಡಿದ್ದಾರೆ. ಕೋಲಾರ (Kolar) ಕ್ಷೇತ್ರದ ಮೇಲೆ ಮೊದಲಿನಿಂದಲೂ ನನಗೆ ಅತ್ಯಂತ ವಿಶ್ವಾಸವಿದೆ. ಹಾಗಾಗಿ ಇಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕೆ.ವಿ.ಗೌತಮ್‌ರನ್ನು ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಕಲ್ಪಿಸಿದ್ದೇವೆ. ಜನಪರ ಕಾಳಜಿಯುಳ್ಳ ಯುವ ಎಂಜಿನಿಯರ್‌ನನ್ನು ಕಣಕ್ಕಿಳಿಸಿದ್ದೇವೆ.

ನೀವು ಅವರನ್ನು ಆಯ್ಕೆ ಮಾಡಿದಲ್ಲಿ ಸರ್ಕಾರದ ಸೌಲಭ್ಯಗಳನ್ನು ನಿಮ್ಮ ಮನೆ ಬಾಗಿಲಿಗೆ ತಲುಪಿಸುತ್ತಾರೆಂದು ಭರವಸೆ ನೀಡಿದರು. ಹೊಸ ಅಭ್ಯರ್ಥಿಗಳಿಗೆ ಮತನೀಡಿ ಅದೇ ಹಳೆಯ ಮುಖಗಳಿಗಲ್ಲ.

ಭಾರತದ ಸಂವಿಧಾನ ಉಳಿವಿಗಾಗಿ, ಪ್ರಜಾಪ್ರಭುತ್ವ ಬೆಳೆಸಲು, ಸರ್ವಾಧಿಕಾರ ತೊಲಗಿಸಲು ನೀವುಗಳು ಕಾಂಗ್ರೆಸ್ (Congress) ಪಕ್ಷದ ಅಭ್ಯರ್ಥಿಗೆ ಮತ ನೀಡಬೇಕು ಬಹುಮತದಿಂದ ಆಯ್ಕೆ ಮಾಡಬೇಕು ಕಾಂಗ್ರೆಸ್ ಪಕ್ಷವು ಜಾತ್ಯತೀತ ಪಕ್ಷವಾಗಿದೆ. ಹಾಗಾಗಿ ಎಲ್ಲರಿಗೂ ಮನ್ನಣೆ ನೀಡುವ ಪಕ್ಷಕ್ಕೆ ನೀವು ಮತದಾನ ಮಾಡಬೇಕು ಎಂದಿದ್ದಾರೆ.

Exit mobile version