ಟಿಪ್ಪು ಹಿಂದೂ ದೇವಾಲಯಗಳಿಗೆ ಭೂಮಿ ದಾನ ಮಾಡಿದ್ದ : ಹೆಚ್.ಡಿ ಕುಮಾರಸ್ವಾಮಿ!

HDK

ಟಿಪ್ಪು ಸುಲ್ತಾನ್(Tippu Sultan) ಕಾಲದಲ್ಲಿ ಅನೇಕ ಹಿಂದೂ ದೇವಾಲಯಗಳಿಗೆ(Hindu Temples) ಭೂಮಿಯನ್ನು ದಾನವಾಗಿ ನೀಡಲಾಗಿತ್ತು.

ಈಗ ಆ ಸಮುದಾಯದವರು ಬಂದು ಭೂಮಿಯನ್ನು ಮರಳಿ ನೀಡಬೇಕೆಂದು ಕೇಳಿದರೆ, ನೀವು ಭೂಮಿಯನ್ನು ಮರಳಿ ಕೊಡುತ್ತೀರಾ? ಎಂದು ಮಾಜಿ ಸಿಎಂ(Former Chiefminister) ಎಚ್.ಡಿ.ಕುಮಾರಸ್ವಾಮಿಯವರು(HD Kumarswamy) ಪ್ರಶ್ನಿಸಿದರು. ಶ್ರೀರಂಗಪಟ್ಟಣದ(Srirangapatna) ಜಾಮೀಯಾ ಮಸೀದಿ ವಿವಾದದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಟಿಪ್ಪು ಸುಲ್ತಾನ್ ಹಿಂದೂ ದೇವಾಲಯಗಳಿಗೆ ಭೂಮಿಯನ್ನು ದಾನವಾಗಿ ನೀಡಿದ್ದಾನೆ. ಅದನ್ನು ಮರಳಿ ಕೇಳಿದರೆ ಈಗ ಕೊಡಲು ಸಾಧ್ಯವೇ?

ಇನ್ನು ದೇವರು ಇವರ ಕನಸಿನಲ್ಲಿ ಬಂದು ನಾನು ಇಲ್ಲೇ ಇದ್ದೇನೆ ಎಂದು ಹೇಳಿದನಾ? ಎಂದು ಪ್ರಶ್ನಿಸಿದ ಅವರು, ಇಂತಹ ವಿವಾದಗಳನ್ನು ಬದಿಗಿಟ್ಟು, ಜನರು ಬದುಕು ಕಟ್ಟಿಕೊಳ್ಳುವ ಕಡೆ ಗಮನ ಹರಿಸಬೇಕು. ಇದೆಲ್ಲವೂ ರಾಜಕೀಯ ಕಾರಣಕ್ಕೆ ಸೃಷ್ಟಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಇನ್ನು ಇದೇ ಸಂದರ್ಭದಲ್ಲಿ ಮಂಗಳೂರಿನ ಮಳಲಿಯಲ್ಲಿ ನಡೆದ ತಾಂಬೂಲ ಪ್ರಶ್ನೆಯ ಕುರಿತು ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ತಾಂಬೂಲ ಪ್ರಶ್ನೆಗಿಂತ ‘ಕೇಶವಕೃಪಾ’ದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಮುಖ್ಯವಾಗುತ್ತವೆ.

ರಾಜ್ಯ ಸರ್ಕಾರ ಕೇಶವಕೃಪಾದಲ್ಲಿ ತೆಗೆದುಕೊಳ್ಳುವ ನಿರ್ಧಾರದಂತೆ ನಡೆಯುತ್ತದೆ. ಅಲ್ಲಿಂದ ಬರುವ ಸಂದೇಶಗಳ ಪಾಲನೆಯಾಗುತ್ತದೆ. ಈ ರೀತಿಯ ಆಡಳಿತದಿಂದ ದೇಶಕ್ಕೆ ಭವಿಷ್ಯವಿಲ್ಲ. ಇನ್ನು ಒಂದು ವರ್ಷಗಳ ಕಾಲ ಈ ರೀತಿಯ ಘಟನೆಗಳು ನಡೆಯುತ್ತಲೇ ಇರುತ್ತವೆ. ಸಾಮಾಜಿಕ ಶಾಂತಿ ಮತ್ತು ಸಾಮರಸ್ಯ ಮತ್ತಷ್ಟು ಹದಗೆಡುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು. ಇನ್ನು ಶಾಲಾ ಪಠ್ಯಪುಸ್ತಕದ ಕುರಿತು ಮಾತನಾಡಿದ ಅವರು, ಪಠ್ಯಪುಸ್ತಕದ ಮೂಲಕ ಭಾವೈಕ್ಯವನ್ನು ಹಾಳು ಮಾಡುವ ಪ್ರಯತ್ನ ನಡೆಯುತ್ತಿದೆ.

ಪಠ್ಯಪುಸ್ತಕದಲ್ಲಿ ಸತ್ಯವನ್ನು ತಿರುಚುವ ಪ್ರಯತ್ನವನ್ನು ಮಾಡಲಾಗಿದೆ. ಇನ್ನು ದೇವನೂರು ಮಹಾದೇವ(Devanoor Mahadeva) ಅವರು ತಮ್ಮ ಲೇಖನವನ್ನು ಪ್ರಕಟಿಸದಂತೆ ಹೇಳಿರುವುದು ಅವರ ವೈಯಕ್ತಿಕ ವಿಚಾರ. ತಮ್ಮ ಭಾವನೆಗಳನ್ನು ಬಳಕೆ ಮಾಡಿಕೊಳ್ಳದಂತೆ ಲೇಖಕರು ಹೇಳಿದ್ದರೆ ಅದನ್ನು ಗೌರವಿಸಬೇಕೆಂದು ಹೇಳಿದರು.

Exit mobile version