“ತೇಜಸ್ವಿ ಅವರ ಬರವಣಿಗೆಯನ್ನು ಓದುವುದು ಎಂದರೆ ಅದೊಂದು ಅನನ್ಯ ಅನುಭವ” : ಹೆಚ್.ಡಿ.ಕೆ

hdk

Karnataka : ಶ್ರೀ ಪೂರ್ಣಚಂದ್ರ ತೇಜಸ್ವಿ (Poornachandra Tejaswi) ಅವರ ಬರವಣಿಗೆಯನ್ನು ಓದುವುದು ಎಂದರೆ ಅದೊಂದು ಅನನ್ಯ ಅನುಭವ ಎಂದು ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ (HD Kumarswamy) ಅವರು ತೇಜಸ್ವಿ ಅವರ ಜನ್ಮದಿನದಂದು ಟ್ವೀಟ್ ಮಾಡಿದ್ದಾರೆ.

ಈ ಕುರಿತು ಟ್ವೀಟ್(Tweet) ಮಾಡಿರುವ ಅವರು,  ನಿರಂತರವಾಗಿ ನನ್ನ ಓದಿನ ಭಾಗವೇ ಆಗಿರುವ ತೇಜಸ್ವಿ ಅವರು ನನ್ನ ಸ್ಫೂರ್ತಿಯ ಸೆಲೆಗಳಲ್ಲಿ ಪ್ರಮುಖರು. ಅವರು ಸದಾ ನನ್ನ ಪಾಲಿಗೆ ಬೆರಗು.

ಅವರ ಜನ್ಮದಿನದಂದು ಗೌರವಪೂರ್ವಕ ನಮನಗಳು. ಕರ್ವಾಲೋ, ಕಿರುಗೂರಿನ ಗಯ್ಯಾಳಿಗಳು,

ಇದನ್ನೂ ಓದಿ : https://vijayatimes.com/boy-plays-and-sleeps-with-the-python/

ಅಬಚೂರಿನ ಪೋಸ್ಟಾಫೀಸು, ಪರಿಸರದ ಕತೆ, ಚಿದಂಬರ ರಹಸ್ಯ, ಜುಗಾರಿ ಕ್ರಾಸ್ ಸೇರಿದಂತೆ ಅನೇಕ ಅದ್ವಿತೀಯ ಕೃತಿಗಳನ್ನು ಕೊಟ್ಟ ಶ್ರೀ ಪೂರ್ಣಚಂದ್ರ ತೇಜಸ್ವಿ ಅವರ ಬರವಣಿಗೆಯನ್ನು ಓದುವುದು ಎಂದರೆ ಅದೊಂದು ಅನನ್ಯ ಅನುಭವ ಎಂದಿದ್ದಾರೆ.

ಇನ್ನು ಕನ್ನಡದ ನವ್ಯ ಸಾಹಿತ್ಯದ ಪ್ರಮುಖ ಲೇಖಕ, ಸ್ವತಂತ್ರ ಪ್ರವೃತ್ತಿಯ ಬರಹಗಾರ, ಅಪಾರ ಅಭಿಮಾನಿಗಳ ಹೃದಯದಲ್ಲಿ ಶಾಶ್ವತ ಸ್ಥಾನ ಗಳಿಸಿರುವ ದಿವಂಗತ ಶ್ರೀ ಪೂರ್ಣಚಂದ್ರ ತೇಜಸ್ವಿಯವರ ಜನ್ಮದಿನದಂದು ಅವರಿಗೆ ಗೌರವಪೂರ್ವಕ ನಮನಗಳು.

ಜೀವನವನ್ನು ಅನುಭವಿಸುತ್ತಾ ಬದುಕಿದ ಅವರ ಶೈಲಿ ಎಲ್ಲರಿಗೂ ಮಾದರಿಯಾಗಿದೆ  ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ(Basavaraj Bommai) ಅವರು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ : https://vijayatimes.com/bank-check-filled-in-kannada-was-rejected/

ಇನ್ನು ಚಿತ್ರ ನಟ ಚೇತನ್(Chethan) ಅವರು, ಇಂದು ಪರಿವರ್ತನಾಶೀಲ ಚಿಂತಕ/ಲೇಖಕ/ಪರಿಸರವಾದಿ ಪೂರ್ಣಚಂದ್ರ ತೇಜಸ್ವಿ ಅವರ ಜನ್ಮದಿನ.

‘ಜುಗಾರಿ ಕ್ರಾಸ್’ನಲ್ಲಿ ತೇಜಸ್ವಿ ಅವರು ಪ್ರಹಸನದ ಪ್ರೊಫೆಸರ್ ಗಂಗೂಲಿಯನ್ನು ಸೃಷ್ಟಿಸುತ್ತಾರೆ, ಅವರು ತಮ್ಮ ವಿದ್ಯಾರ್ಥಿಗಳನ್ನು ತುರ್ತು ಪರಿಸ್ಥಿತಿಯ ವಿರುದ್ಧ  ಹುರಿದುಂಬಿಸುತ್ತಾರೆ.

ಆದರೆ ಜೈಲಿನ ಅಂಚಿನಲ್ಲಿದ್ದಾಗ ಪರಾರಿಯಾಗುತ್ತಾರೆ. ರಾಷ್ಟ್ರ ನಿರ್ಮಾಣಕ್ಕೆ ಧೈರ್ಯ ಎಷ್ಟು ಅಗತ್ಯ ಎಂಬುದು ತೇಜಸ್ವಿಗೆ ತಿಳಿದಿತ್ತು ಎಂದು ತಮ್ಮ ಫೇಸ್‍ಬುಕ್ ಪುಟದಲ್ಲಿ ಬರೆದುಕೊಂಡಿದ್ದಾರೆ. 

Exit mobile version