ಕೆಎಸ್‌ಆರ್‌ಟಿಸಿ ನೌಕರ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ : ಅಮಾಯಕರ ಜೀವದ ಜೊತೆ ರಾಜಕೀಯದ ತೆವಲುಗಳಿಗೆ ಚೆಲ್ಲಾಟ, ಸರ್ಕಾರದ ವಿರುದ್ಧ ಎಚ್‌ಡಿಕೆ ಕಿಡಿ

Mysore (ಜು.06): ಆತ್ಮಹತ್ಯೆಗೆ ಯತ್ನಿಸಿದ ಕೆಎಸ್‌ಆರ್‌ಟಿಸಿ (KSRTC) ಉದ್ಯೋಗಿ ವೆಂಟಿಲೇಟರ್‌ನಲ್ಲಿದ್ದಾರೆ. ಈ ಸರ್ಕಾರ (HDKumaraswamy spark against Government) ಅಧಿಕಾರಕ್ಕೆ

ಬಂದು 50 ದಿನಗಳು ಕಳೆದಿಲ್ಲ. ದ್ವೇಷದ ರಾಜಕಾರಣ ಈಗಾಗಲೇ ಶುರುವಾಗಿದೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ (H.D Kumaraswamy) ಹೇಳಿದ್ದಾರೆ. ಮೈಸೂರಿನಲ್ಲಿ

(Mysore) ಕೆಎಸ್‌ಆರ್‌ಟಿಸಿ ನೌಕರ ಜಗದೀಶ್‌, ವರ್ಗಾವಣೆ ವಿರೋಧಿಸಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣದ ಕುರಿತು ಮಾತನಾಡಿದರು.

HDKumaraswamy spark against Government

ದುಡ್ಡು ತೆಗೆದು ಕೊಂಡು ವರ್ಗಾವಣೆ ಮಾಡುವುದು ಅವರ ಛಾಳಿ. ಅದು ಅವರ ಹಣೆಬರಹ.. ಆದರೆ ರಾಜಕೀಯ ಕಾರಣಗಳಿಗಾಗಿ ಇಂತಹ ಕಿರುಕುಳವನ್ನು ಸಹಿಸಲು ಸಾಧ್ಯವಿಲ್ಲ. ಆತ್ಮಹತ್ಯೆಗೆ ಯತ್ನಿಸಿದ

ಜಗದೀಶ್ (Jagadish) ಕುಟುಂಬದವರು ಜೆಡಿಎಸ್(JDS) ನಿಷ್ಠಾವಂತ ಕಾರ್ಯಕರ್ತರು ಎಂದು ಹೇಳಿದರು. ಜಗದೀಶ್ ಅವರ ಪತ್ನಿ ಪಂಚಾಯಿತಿ ಸದಸ್ಯೆ. ಹೀಗಾಗಿ ಕಿರುಕುಳ ಕೊಡಲಾಗಿದೆ. ಸಚಿವರು

ಮತ್ತು ಈ ಸರ್ಕಾರ ಶಾಶ್ವತವೇ? ಅಧಿಕಾರದ ದರ್ಪ ಈ ಮಟ್ಟದಲ್ಲಿರಬಾರದು. ಕೃಷಿ ಸಚಿವರ ಛೇಲಾ ಕೂಡ ರೌಡಿಯಾಗಿದ್ದ. ಇವರಿಂದ ಜಗದೀಶ್ ಕುಟುಂಬ ಒತ್ತಡಕ್ಕೆ ಸಿಲುಕಿದೆ.

ಜಗದೀಶ್ ಅವರ ಪತ್ನಿಗೆ ಕಾಂಗ್ರೆಸ್‌ಗೆ(Congress) ಬೆಂಬಲ ನೀಡುವಂತೆ ಒತ್ತಡ ಹಾಕುತ್ತಿದ್ದಾರೆ. ನಾಗಮಂಗಲದ (Nagamangala) ಶಾಸಕರ ಒತ್ತಡವೇ ಕಾರಣ ಅಂತಾ ಡೆತ್ ನೋಟ್ ನಲ್ಲಿ (Death Note)

ಬರೆದಿದ್ದಾರೆ. ಈ ಸರಕಾರಕ್ಕೆ ಮಾನ ಮರ್ಯಾದೆ ಇದ್ದರೆ ಅಂತಹ ಸಚಿವರನ್ನು ಸರಕಾರದಿಂದ ತೆಗೆಯಲಿ. ಜಗದೀಶ್ ಇನ್ನು ಕೂಡ ಸತ್ತಿಲ್ಲ, ಹಾಗಾಗಿ ಎಫ್‌ಐಆರ್ (FIR) ವರದಿ ದಾಖಲಾಗಿಲ್ಲ ಎಂದು ಪೊಲೀಸರು

ತಿಳಿಸಿದ್ದಾರೆ.ಹಣದ ದಂಧೆ ಮುಗಿಯಿತು ಇದೀಗ ಜೀವದ ಜೊತೆ ಚೆಲ್ಲಾಟವನ್ನು ರಾಜಕೀಯದ ತೆವಲುಗಳಿಗೆ ಶುರು ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಕೂಡಲೇ ಸರಕಾರದಿಂದ ಈ ಅಗೌರವ ತೋರಿದ ಕೃಷಿ ಸಚಿವರನ್ನು ವಜಾ ಮಾಡಿ. ಸೂಕ್ತ ತನಿಖೆ ನಡೆಸಿ. ನಾನು ಇಂದು ವಿಧಾನಸಭೆಯಲ್ಲಿ (Vidhana Sabha) ಈ ವಿಷಯವನ್ನು ಚರ್ಚಿಸುತ್ತೇನೆ.

ಇದಕ್ಕಿಂತ ಮುಖ್ಯವಾದುದೇನಿದೆ ಹೇಳಿ? ಮೊದಲು ಸಚಿವರನ್ನು ಹದ್ದು ಬಸ್ತಿಯಲ್ಲಿ ಬಿಡಿ. ವಿರೋಧ ಪಕ್ಷದ ಶಾಸಕರ ಮನೆ ಹಾಳಾಗಲಿ. ಇಲ್ಲಿ ಕೆಲ ಕೆಲವು ಕಾಂಗ್ರೆಸ್ ಶಾಸಕರು ಮನೆ ಕೂಡ ಇಲ್ಲಿ ಹಾಳಾಗುತ್ತಿದೆ.

ಅಂದರೆ ಕಾಂಗ್ರೆಸ್ ಶಾಸಕರ ವರ್ಗಾವಣೆ ಕೂಡ ದುಡ್ಡು ಕೊಡದೆ ಇದ್ದರೆ ಆಗುತ್ತಿಲ್ಲ.ಹಣದ ವ್ಯವಹಾರವು ಇದುವರೆಗೂ ಆಗಿರುವ ಬಹುತೇಕ ವರ್ಗಾವಣೆಗಳಲ್ಲೂ ನಡೆದಿದೆ. ಎಲ್ಲಾ ವರ್ಗಾವಣೆ ಗೂ ಸಹ

ಹಣದ ರೇಟ್ ಫಿಕ್ಸ್ ಆಗಿದೆ ಎಂದು (HDKumaraswamy spark against Government) ಹೇಳಿದರು.

ಇದನ್ನೂ ಓದಿ : ಸದ್ಯದಲ್ಲೇ ರದ್ದಾಗಲಿರುವ 2000 ರೂ ನೋಟುಗಳನ್ನು ಮನೆಗೇ ಬಂದು ಸ್ವೀಕರಿಸಲಿದೆ ಅಮೆಜಾನ್‌

ಬಿಜೆಪಿ(BJP) ಮತ್ತು ಜೆಡಿಎಸ್ ಎರಡೂ ಜನರನ್ನು ವಿರೋಧ ಪಕ್ಷದ ಸ್ಥಾನದಲ್ಲಿ ನಿಲ್ಲಿಸಿವೆ. ಬಿಜೆಪಿಯಲ್ಲೂ ವಿರೋಧ ಪಕ್ಷದ ನಾಯಕರಾಗುವಷ್ಟು ಸಮರ್ಥರು ಇದ್ದಾರೆ. ಯಾರಾದರೂ ಒಬ್ಬರು ಆಗುತ್ತಾರೆ.

ಈ ಸರ್ಕಾರ ನಮ್ಮ ಕುಟುಂಬದ ಆಸ್ತಿಯನ್ನು ಅಂತರಾಷ್ಟ್ರೀಯ ತನಿಖಾ ಸಂಸ್ಥೆಯ ಮೂಲಕ ತನಿಖೆ ಮಾಡಲಿ. ಪೆನ್ ಡ್ರೈವ್ (Pendrive) ಒಳಗಿನ ಸತ್ಯ ಬಹಿರಂಗವಾದರೆ ಸಚಿವರು ರಾಜೀನಾಮೆ ನೀಡಬೇಕಾಗುತ್ತದೆ.

ಇತರರು ನನ್ನ ಬಗ್ಗೆ ಏನೂ ಬೇಕಾದರೂ ಮಾತನಾಡಲಿ. ಬಳಿಕ ಪೆನ್ ಡ್ರೈವ್ ಸತ್ಯ ಹೊರಗೆ ಬಿಡುತ್ತೇನೆ ಎಂದು ತಿಳಿಸಿದರು.

ಜೆಡಿಎಸ್ ಕಾರ್ಯಕರ್ತರ ಟಾರ್ಗೆಟ್ ಜಿಲ್ಲೆಯಲ್ಲಿ ಆಗುತ್ತಿದೆ:

ಮಾಜಿ ಶಾಸಕ ಸುರೇಶ್ ಗೌಡ (Suresh Gowda) ಇನ್ನು ಈ ವಿಚಾರವಾಗಿ ಆಸ್ಪತ್ರೆ ಬಳಿ ಪ್ರತಿಕ್ರಿಯಿಸಿದ್ದು, ಜೆಡಿಎಸ್ ಕಾರ್ಯಕರ್ತರ ಟಾರ್ಗೆಟ್ ಕಾಂಗ್ರೆಸ್ ಶಾಸಕರಿಂದ ಜಿಲ್ಲೆಯಲ್ಲಿ ಆಗುತ್ತಿದೆ. ನಾಗಮಂಗಲದಲ್ಲಿ

ಒಂದು ಸರ್ಕಾರವೇ ಇದೆ. ಎರಡು ತಿಂಗಳಿಂದ ಸತತವಾಗಿ ಕಿರುಕುಳ ಆಗುತ್ತಿದೆ. ಈ ಬಗ್ಗೆ ಆತನ ತಂದೆ ತಾಯಿ ಹಾಗೂ ನನ್ನ ಬಳಿಯೂ ಜಗದೀಶ್ ಹೇಳಿಕೊಂಡಿದ್ದ. ಕ್ಷೇತ್ರದಲ್ಲಿ ಮೂರ್ನಾಲ್ಕು ಆತ್ಮಹತ್ಯೆಗಳು

ಚುನಾವಣೆ ಆದ ಬಳಿಕ ಆಗಿದೆ. ಈಗಾಗಲೇ ಕ್ಷೇತ್ರದಲ್ಲಿ ದ್ವೇಷ, ಸ್ವಜನಪಕ್ಷಪಾತ ಶುರು ಆಗಿದೆ. ಒಂದು ರೀತಿ ಟ್ರಾನ್ಸ್ಫರ್ ಥ್ರೇಟ್ ಆಗಿದೆ ಎಂದರು.

ಇದನ್ನೂ ಓದಿ : ನಂದಿನಿ ಹಾಲಿನ ದರ ಲೀಟರಿಗೆ 5 ರೂ. ಏರಿಕೆಗೆ ಬೇಡಿಕೆ ಇಟ್ಟಿದ್ದೇವೆ : KMF ನೂತನ ಅಧ್ಯಕ್ಷ ಭೀಮಾ ನಾಯ್ಕ್

ಎಲ್ಲರನ್ನು ಜಿಲ್ಲೆಯಲ್ಲಿ ಟಾರ್ಗೆಟ್ ಮಾಡಲಾಗುತ್ತಿದೆ. ಮುಖ್ಯವಾಗಿ ಅವರ ವಿರುದ್ಧ ಯಾರು ಕೆಲಸ ಮಾಡುತ್ತಾರೆ ಅವರ ಮೇಲೆ ಟಾರ್ಗೆಟ್ ಮಾಡಿದ್ದಾರೆ. ಜೆಡಿಎಸ್ ಕಾರ್ಯಕರ್ತರ ಟಾರ್ಗೆಟ್ ಇಡೀ ಜಿಲ್ಲೆಯಲ್ಲಿ ಆಗಿದೆ.

ದುರಂಕಾರ ಎನ್ನುವುದು ಕ್ಷೇತ್ರದಲ್ಲಿ ಮೇಲೆ ಹೋಗಿಬಿಟ್ಟಿದೆ. ಅಧಿಕಾರಿಗಳಿಗೆ ಸಹ ಜಿಲ್ಲೆಯಲ್ಲಿ ತೊಂದರೆ ಆಗಿದೆ. ಸಚಿವ ಚಲುವರಾಯಸ್ವಾಮಿ (Chaluvaraya swamy) ವಿರುದ್ಧ ಮಾಜಿ ಶಾಸಕ ಸುರೇಶ್ ಗೌಡ

ನಾಗಮಂಗಲ ಕ್ಷೇತ್ರದಲ್ಲಿ ಒಂದು ಸರ್ಕಾರವೇ ರಚನೆ ಆಗಿದೆ ಎಂದು ವಾಗ್ದಾಳಿ ನಡೆಸಿದರು.

ರಶ್ಮಿತಾ ಅನೀಶ್

Exit mobile version