New Delhi: ಸದ್ಯದಲ್ಲೇ ರದ್ದಾಗಲಿರುವ 2000 ರು. ನೋಟುಗಳನ್ನು ಗ್ರಾಹಕರಿಂದ ಸ್ವೀಕರಿಸಲು ಆನ್‌ಲೈನ್ (about Amazon payment) ಮಾರುಕಟ್ಟೆ ದೈತ್ಯ ಅಮೆಜಾನ್ ನಿರ್ಧರಿಸಿದೆ.
ಈ ಕುರಿತು ಅಮೆಜಾನ್ ಕಂಪನಿ ನಿಖರವಾದ ಮಾಹಿತಿ ಒದಗಿಸಿದೆ. ಜನರು ಯಾವುದೇ ವಸ್ತುಗಳನ್ನು ಅಮೆಜಾನ್ ಮೂಲಕ ಆರ್ಡರ್ ಮಾಡುವಾಗ ಅದರಲ್ಲಿ ಮುಖ್ಯವಾಗಿ ಕ್ಯಾಶ್ ಆನ್
ಡೆಲಿವರಿ (about Amazon payment) ಆಯ್ಕೆ ಮಾಡಬೇಕು.

ನಂತರ ನೀವು ಆರ್ಡರ್ ಮಾಡಿದ ವಸ್ತುವಿನ ಹಣದ ಜೊತೆ ಗರಿಷ್ಠ 50,000 ರು. ಮೌಲ್ಯದ 2000 ರು. ಮುಖಬೆಲೆಯ ನೋಟುಗಳನ್ನು ಡೆಲಿವರಿ ಬಾಯ್ (Delivery Boy)ಬಳಿ ನೀಡಬಹುದು. ಅವರು ನಿಮ್ಮ
ಅಮೆಜಾನ್ ಪೇ ಖಾತೆಗೆ (Amazon Pay Account) ಆ ಹಣವನ್ನು ಜಮೆ ಮಾಡುತ್ತಾರೆ. ಇದರಿಂದಾಗಿ ನಿಮ್ಮ ಭವಿಷ್ಯದ ಆರ್ಡರ್‌ಗಳಿಗೆ ನೀವು ಕೊಟ್ಟಿರುವ ಆ ಹಣವನ್ನು ಬಳಕೆ ಮಾಡಬಹುದು ಎಂದು ತಿಳಿಸಿದೆ.
ಏನಿದು ಅಮೆಜಾನ್ ಪೇ
ಅಮೆಜಾನ್ ಪೇ ಅಪ್ಲಿಕೇಶನ್ ಜನಪ್ರಿಯ ಯುಪಿಐ (UPI) ಪಾವತಿ ಅಪ್ಲಿಕೇಶನ್‌ಗಳಲ್ಲಿ ಒಂದೆನಿಸಿಕೊಂಡಿದೆ. ಯಾರೆಲ್ಲಾ ಅಮೆಜಾನ್ ಸೈಟ್‌ನಲ್ಲಿ ಶಾಪಿಂಗ್ ಮಾಡುತ್ತಾರೋ ಅವರಲ್ಲಿ ಹೆಚ್ಚಿನ ಮಂದಿಗೆ
ಅಮೆಜಾನ್ ಪೇ ಮೂಲಕ ರಿವಾರ್ಡ್‌ಗಳನ್ನು (Reward) ಪಡೆಯುತ್ತಾರೆ. ಎಲ್ಲಾ ರೀತಿಯ ಪಾವತಿಗಳನ್ನು ಮಾಡಲು ಅಮೆಜಾನ್ ಪೇ ಪೂರ್ಣ ಪ್ರಮಾಣದ ಪಾವತಿ ಆಯ್ಕೆಯಾಗಿ ಉಳಿದುಕೊಂಡಿದೆ.
ಇನ್ನು ನೀವು ಚಲನಚಿತ್ರಗಳನ್ನು (Cinema) ಬುಕ್ ಮಾಡಬಹುದು, ಬಿಲ್‌ಗಳನ್ನು ಪಾವತಿಸುವುದಕ್ಕೆ ಕೂಡ ಅಮೆಜಾನ್ ಪೇ ಬಳಸಿ ಅವಕಾಶ ಲಭ್ಯವಿದೆ. ಹೌದು,
ಅಮೆಜಾನ್ ಪೇ ಬ್ಯಾಲೆನ್ಸ್ ಮೂಲಕ ನೀವು ಅಮೆಜಾನ್‌ನಲ್ಲಿ ಶಾಪಿಂಗ್ ಮಾಡುವುದು ಸುಲಭವಾಗಿದೆ.

ಅಮೆಜಾನ್ ಪೇ ಬ್ಯಾಲೆನ್ಸ್ ಹಿಂಪಡೆಯುವುದು ಹೇಗೆ
(Amazon Pay Balance) ಅಮೆಜಾನ್ ಪೇ ಬ್ಯಾಲೆನ್ಸ್‌ಅನ್ನು ಅದೇ ರೀತಿ ಸುಲಭವಾಗಿ ಹಿಂಪಡೆಯುವುದಕ್ಕೆ ಕೂಡ ಅವಕಾಶವಿದೆ.ಆದರೆ ಅಮೆಜಾನ್ ಪೇ ಬ್ಯಾಲೆನ್ಸ್ ಹಿಂಪಡೆಯುವುದು ಹೇಗೆ
ಅನ್ನೊದು ಹೆಚ್ಚಿನ ಜನರರಿಗೆ ಇನ್ನು ತಿಳಿದಿಲ್ಲ. ಅಮೆಜಾನ್ ಪೇ ಬ್ಯಾಲೆನ್ಸ್ ಅನ್ನು ಹಾಗಾದ್ರೆ ನಿಮ್ಮ ಬ್ಯಾಂಕ್ ಖಾತೆಗೆ ವರ್ಗಾಯಿಸುವುದು ಹೇಗೆ ಅನ್ನೊದನ್ನ ತಿಳಿಸಿಕೊಡ್ತೀವಿ.
ಇದನ್ನೂ ಓದಿ : ಅಂಚೆ ಇಲಾಖೆಯ 12,828 ಜಿಡಿಎಸ್ ಹುದ್ದೆಗಳ ಆನ್‌ಲೈನ್ ಅರ್ಜಿಗೆ ದಿನಾಂಕ ವಿಸ್ತರಣೆ
ನಿಮ್ಮ ಬ್ಯಾಂಕ್ ಖಾತೆಗೆ ಅಮೆಜಾನ್ ಪೇ ಬ್ಯಾಲೆನ್ಸ್ ಅನ್ನು ವರ್ಗಾಯಿಸಿಕೊಳ್ಳಬೇಕಾದರೆ ಮೊದಲು ನೀವು ಕೆವೈಸಿಯನ್ನು (KYC) ಪೂರ್ಣಗೊಳಿಸುವುದು ಅವಶ್ಯಕವಾಗಿದೆ.
ನಿಮ್ಮ ಅಮೆಜಾನ್ ಪೇ ಬ್ಯಾಲೆನ್ಸ್ ಅನ್ನು ಬ್ಯಾಂಕ್ ಖಾತೆಗೆ ವರ್ಗಾಯಿಸಲು ನೀವು ನಿಮ್ಮ ಕೆವೈಸಿ ದಾಖಲೆಗಳನ್ನು ಸಂಪೂರ್ಣವಾಗಿ ನಮೂದಿಸಿದ ನಂತರವಷ್ಟೇ ಸಾಧ್ಯವಾಗಲಿದೆ.
ಬ್ಯಾಂಕ್ ಖಾತೆಗೆ ಅಮೆಜಾನ್ ಪೇ ಬ್ಯಾಲೆನ್ಸ್ ಅನ್ನು ವರ್ಗಾಯಿಸುವುದು ಹೇಗೆ?
- ಹಂತ:1 ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಮೊದಲಿಗೆ ಅಮೆಜಾನ್ ಅಪ್ಲಿಕೇಶನ್ ತೆರೆಯಿರಿ.
- ಹಂತ:2 ನಂತರ ಇದರಲ್ಲಿ ಅಮೆಜಾನ್ ಪೇ ಆಯ್ಕೆಯನ್ನು ಟ್ಯಾಪ್ ಮಾಡಿ.
- ಹಂತ:3 ನಿಮ್ಮ ಬ್ಯಾಂಕ್ ಖಾತೆಗೆ ಅಮೆಜಾನ್ ಪೇ ಬ್ಯಾಲೆನ್ಸ್ ಅನ್ನು ವರ್ಗಾಯಿಸಲು, ಮನಿ ಸೆಂಡ್ ಟ್ಯಾಪ್ ಮಾಡಿ.
- ಹಂತ:4 ಪೇ ಬ್ಯಾಲೆನ್ಸ್ ಹಣವನ್ನು ವರ್ಗಾಯಿಸಬೇಕಾದರೆ ನೀವು ಬಯಸುವ ಬ್ಯಾಂಕ್ ಅನ್ನು ಆಯ್ಕೆ ಮಾಡಿ.
- ಹಂತ:5 ಮೊಬೈಲ್ ಸಂಖ್ಯೆ ಮತ್ತು ಬ್ಯಾಂಕ್ ವಿವರಗಳನ್ನು SMS ಕಳುಹಿಸುವ ಮೂಲಕ ಪರಿಶೀಲಿಸಿ
- ಹಂತ:6 ನಂತರ ಬ್ಯಾಂಕ್‌ಗೆ ಟ್ಯಾಪ್ ಮಾಡಿ.
- ಹಂತ:7 ನಂತರ ಖಾತೆ ಸಂಖ್ಯೆ, IFSC ಕೋಡ್ ಮತ್ತು ಖಾತೆದಾರರ ಹೆಸರನ್ನು ನಮೂದಿಸಿ.
- ಹಂತ:8 ನಂತರ ಪೇ ನೌ ಬಟನ್ ಒತ್ತಿರಿ.
- ಹಂತ:9 ಇದೀಗ ಎಲ್ಲಾ ಆಯ್ಕೆಗಳನ್ನು ಹಣ ವರ್ಗಾವಣೆಗಾಗಿ ಕಾಣಬಹುದು ನಂತರ ಇದರಲ್ಲಿ ಅಮೆಜಾನ್ ಪೇ ಬ್ಯಾಲೆನ್ಸ್ ಅನ್ನು ಆಯ್ಕೆ ಮಾಡಿ.
- ಹಂತ:10 ಕೊನೆಯದಾಗಿ, ಕಂಟಿನ್ಯೂ ಆಯ್ಕೆಯನ್ನು ಟ್ಯಾಪ್ ಮಾಡಿ.
ಇದೀಗ, ನಿಮ್ಮ ಬ್ಯಾಂಕ್ ಖಾತೆಗೆ ನಿಮ್ಮ ಅಮೆಜಾನ್ ಪೇ ಬ್ಯಾಲೆನ್ಸ್ ಅನ್ನು ವರ್ಗಾಯಿಸಲಾಗುತ್ತದೆ. ನೀವು ಅದನ್ನು ನಗದು ರೂಪದಲ್ಲಿ ಅಗತ್ಯವಿದ್ದರೆ ಹಿಂತೆಗೆದುಕೊಳ್ಳಬಹುದು.
ರಶ್ಮಿತಾ ಅನೀಶ್