ಕಿವಿ ಹಣ್ಣು ಸೇವಿಸುವುದು ಆರೋಗ್ಯಕ್ಕೆ ಎಷ್ಟು ಲಾಭಕಾರಿ ಗೊತ್ತಾ? ಇಲ್ಲಿದೆ ಮಾಹಿತಿ!

ಕಿವಿ ಹಣ್ಣು(Kivi Fruit) ತನ್ನ ಆಕರ್ಷಣೀಯ ಬಣ್ಣದಿಂದ ಹೆಚ್ಚು ಜನರ ಗಮನವನ್ನು ಸೆಳೆಯುತ್ತದೆ. ಸಿಹಿ ಜೊತೆಯಲ್ಲೇ ಹುಳಿ ಹುಳಿ ಟೇಸ್ಟ್ ಎಂತವರ ಬಾಯಲ್ಲೂ ನೀರು ತರಿಸೋದು ಗ್ಯಾರಂಟಿ.

ಈ ಕಿವಿ ಹಣ್ಣನ್ನು ಸೇವಿಸೋದ್ರಿಂದ 14 ರೀತಿ ಉಪಯೋಗವಾಗುತ್ತವೆ ಎಂಬ ವರದಿಯ ಉತ್ತರ ಹೀಗಿದೆ. ಈ ಹಣ್ಣನ್ನು ಸೇವಿಸುವುದರಿಂದ ಏನೆಲ್ಲಾ ಪ್ರಯೋಜನಗಳು ಎಂಬುದನ್ನು ತಿಳಿಯೋಣ ಮುಂದೆ ಓದಿ. ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಕೆಲವರಿಗೆ ತಿಂದ ಆಹಾರವೆಲ್ಲ ಜೀರ್ಣವಾಗುವುದಿಲ್ಲ. ಮಲಬದ್ಧತೆಯಿಂದ ಬಳಲುತ್ತಿರುತ್ತಾರೆ. ಅಂತವರು ಈ ಕಿವಿ ಹಣ್ಣನ್ನು ಸೇವಿಸುವುದರಿಂದ ದೇಹದಲ್ಲಿ ಪಚನ ಕ್ರಿಯೆ ಸರಿಯಾಗುವಂತೆ ಮಾಡಲು ಸಹಾಯ ಮಾಡುತ್ತದೆ.

ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ: ತುಂಬಾ ಜನರು ರಕ್ತದೊತ್ತಡಿಂದ ಬಳಲುತ್ತಿರುತ್ತಾರೆ. ಅಂತವರು ಈ ಕಿವಿ ಹಣ್ಣನ್ನು ತಿನ್ನುವುದರಿಂದ ಪೋಟಾಷಿಯಮ್, ಸೋಡಿಯಂನ್ನು ನಿಯಂತ್ರಿಸಲು ಸಹಾಯಕಾರಿಯಾಗುತ್ತದೆ. ಡಿಎನ್ಎ ಡ್ಯಾಮೇಜ್ ತಡೆಯುತ್ತದೆ : ಕಿವಿ ಹಣ್ಣಿನಲ್ಲಿರುವ ಆಂಟಿ ಆಕ್ಸಿಡೆಂಟ್ನ ವಿಶೇಷ ಕಾಂಬಿನೇಷನ್, ಜೀವಕೋಶದ ಡಿಎನ್ಎ ಡ್ಯಾಮೇಜ್ ಆಗದಂತೆ ತಡೆಯುತ್ತದೆ. ಕೆಲ ತಜ್ಞರು ಕ್ಯಾನ್ಸರ್ ತಡೆಯುವುದಕ್ಕೂ ಸಹಕಾರಿ ಅಂತ ಹೇಳ್ತಾರೆ.

ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ : ದೇಹಕ್ಕೆ ನಾವು ಎಷ್ಟು ಆಹಾರ ತಿಂದರೇನು. ನಮಗೆ ರೋಗ ನಿರೋಧಕ ಶಕ್ತಿ ತುಂಬಾನೆ ಮುಖ್ಯವಾಗುತ್ತದೆ. ಕಿವಿ ಪ್ರೂಟ್ಸ್ ಸೇವನೆ ಮಾಡೋದ್ರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.

ತೂಕ ಇಳಿಸಲು ಸಹಾಯಕಾರಿ : ತುಂಬಾ ಜನರು ವೇಟ್ ಲಾಸ್ ಮಾಡ್ಕೋ ಬೇಕು ಅಂತಾ ಎಲ್ಲಿಲ್ಲದ ಕಸರತ್ತು ಮಾಡ್ತಾನೆ ಇರ್ತಾರೆ. ಜಿಮ್ ಜೊತೆ ಡಯಟ್ ಮೊರೆ ಕೂಡ ಹೋಗುತ್ತಾರೆ. ಅಂಥವರು ಈ ಕಿವಿ ಫ್ರೂಟ್ ಸೇವಿಸೋದ್ರಿಂದ ತೂಕವನ್ನು ಇಳಿಸಿಕೊಳ್ಳಬಹುದು.

ಕರುಳಿನ ಸಮಸ್ಯೆಗಳನ್ನೂ ನಿವಾರಿಸುತ್ತೆ : ಕಿವಿ ಪ್ರೂಟ್ಸ್ನಲ್ಲಿ ಉತ್ತಮವಾದ ಫೈಬರ್ ಸತ್ವ ಇದೆ. ಇದು ಮಲಬದ್ಧತೆ ಹಾಗೂ ಕರುಳಿನ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.

ಅನವಶ್ಯಕ ಬ್ಯಾಕ್ಟೀರಿಯಾ ತೊಲಗಿಸಲು ಸಹಾಯ : ನಾವು ತಿಂದ ಕೆಲವು ಆಹಾರ ಪದಾರ್ಥಗಳು ದೇಹದಲ್ಲಿ ಬೇಡ ಅಂದ್ರೂ ಉಳಿದುಕೊಂಡು ಬಿಡುತ್ತವೆ. ಅವುಗಳಿಂದ ಅನೇಕ ಕಾಯಿಲೆಗಳು ಕೂಡ ಹರಡುತ್ತವೆ. ಇಂತ ಅನವಶ್ಯಕ ಬ್ಯಾಕ್ಟೀರಿಯಾಗಳನ್ನು ದೇಹದಿಂದ ಕಿತ್ತು ಹಾಕಲು ಕಿವಿ ಪ್ರೂಟ್ಸ್ ಸಹಾಯ ಮಾಡುತ್ತದೆ.

ಹೃದಯದ ಆರೋಗ್ಯವನ್ನು ಕಾಪಾಡುತ್ತದೆ : ಪ್ರತಿದಿನ 2 ರಿಂದ 3 ಕಿವಿ ಪ್ರೂಟ್ಸ್ ತಿನ್ನೋದ್ರಿಂದ ಶೇಕಡಾ 18 ರಷ್ಟು ರಕ್ತ ಹೆಪ್ಪು ಗಟ್ಟುವುದನ್ನು ತಡೆಗಟ್ಟುತ್ತದೆ. ರಕ್ತ ಹೆಪ್ಪುಗಟ್ಟೋದನ್ನು ತಡೆಯಲು ಅನೇಕರು ಆಸ್ಪಿರಿನ್ ತೆಗೆದುಕೊಳ್ಳುತ್ತಾರೆ. ಇದರಿಂದ ಸೈಡ್ ಎಫೆಕ್ಟ್ ಆಗೋದು ಜಾಸ್ತಿ. ಆದ್ರೆ ಕಿವಿ ಪ್ರೂಟ್ಸ್ ಸೇವನೆ ಮಾಡೋದ್ರಿಂದ ಯಾವುದೇ ಅಡ್ಡಪರಿಣಾಮಗಳಿಲ್ಲ.

ಮಧುಮೇಹ ಇರೋರು ಸೇವಿಸಬಹುದು: ಸಕ್ಕರೆ ಕಾಯಿಲೆ ಇರೋರು ಹಣ್ಣುಗಳನ್ನು ತಿನ್ನೋದಕ್ಕೆ ಹಿಂದೂ ಮುಂದು ನೋಡ್ತಾರೆ. ಅದರಲ್ಲಿನ ಸಕ್ಕರೆ ಅಂಶದಿಂದ ತೊಂದರೆಯಾಗುತ್ತದೆ ಅಂತಾ ಯೋಚಿಸುತ್ತಾರೆ. ಆದ್ರೆ ಕಿವಿ ಹಣ್ಣನ್ನು ಧೈರ್ಯವಾಗಿ ಮಧುಮೇಹಿಗಳು ಸೇವನೆ ಮಾಡಬಹುದು. ಇದು ದೇಹದಲ್ಲಿನ ಸಕ್ಕರೆ ಪ್ರಮಾಣವನ್ನು ಹೆಚ್ಚಿಸೋದಿಲ್ಲ. ದೇಹದ ಆರೋಗ್ಯವನ್ನು ಸಮತೋಲನದಲ್ಲಿಡುತ್ತದೆ. ಕಿವಿ ಪ್ರೂಟ್ಸ್ ತಿನ್ನೋದ್ರಿಂದ ದೇಹಕ್ಕೆ ಬೇಕಾದ ಖನಿಜಾಂಶಗಳು ಹೇರಳವಾಗಿ ಸಿಗುತ್ತವೆ.

ಇದರಿಂದ ತಾರುಣ್ಯ ಪೂರ್ಣ ತ್ವಚೆ, ಸುಖ ನಿದ್ರೆ, ಸಂಧಿವಾತ, ಶೀತವನ್ನು ಕಡಿಮೆ ಮಾಡಬಹುದು. ಚರ್ಮದ ಆರೋಗ್ಯವನ್ನು ಕೂಧ ಕಾಪಾಡುತ್ತದೆ.

Exit mobile version