ಬೆಂಡೆಕಾಯಿ ಚಮತ್ಕಾರ: ಕೇಶರಾಶಿಯ ಆರೋಗ್ಯಕರ ಬೆಳವಣಿಗೆಗೆ ಬೆಂಡೆಕಾಯಿ ಮಾಡುತ್ತೆ ಮ್ಯಾಜಿಕ್

Benefits of Ladies Finger: ನಾವು ಸುಂದರವವಾಗಿ ಕಾಣಲು ಮುಖದ ಸೌಂದರ್ಯ ಮಾತ್ರ ಮುಖ್ಯ ಅಲ್ಲ. ತಲೆಕೂದಲು (Health benefits of Ladies Finger) ಸಹ ನಮ್ಮ ಸೌಂದರ್ಯವನ್ನು

ಹೆಚ್ಚಿಸಲು ಬಹಳ ಸಹಾಯಕಾರಿಯಾಗಿದೆ ಆದರೆ ಇತ್ತೀಚಿನವರಲ್ಲಿ ತಲೆ ಕೂದಲು ಉದುರುವುದು, ತಲೆ ಕೂದಲು ಬೆಳ್ಳಗಾಗಿರುವುದು, ಹೊಟ್ಟಿನ ಸಮಸ್ಯೆ ಇರುವುದು ತುಂಬಾ ಜನರಲ್ಲಿ ಕಂಡುಬರುತ್ತಿದೆ.

ಹಾಗಾಗಿ ಈ ತೊಂದರೆಗೆ ಬೆಂಡೆಕಾಯಿ ಮೂಲಕ ಪರಿಹಾರಗಳನ್ನು ಕಂಡುಕೊಳ್ಳಬಹುದು. ಅದು ಹೇಗೆ ಎಂದು ತಿಳಿಯೋಣ ಬನ್ನಿ.

Hair Care

ಬೆಂಡೆಕಾಯಿಯಲ್ಲಿ ಪೌಷ್ಟಿಕಾಂಶಗಳು ಹೆಚ್ಚು
ಬೆಂಡೆಕಾಯಿ ಅಂದರೆ ಎಲ್ಲರಿಗೂ ಇಷ್ಟವಾಗುವ ತರಕಾರಿಯಾಗಿದ್ದು, ಇದು ಒಂದು ನೈಸರ್ಗಿಕ ಆಹಾರ ಪದಾರ್ಥ. ಇದರಲ್ಲಿ ಪೌಷ್ಟಿಕಾಂಶಗಳಿಗೆ ಯಾವುದೇ ಕೊರತೆ ಇಲ್ಲ. ಅದರಲ್ಲೂ ಪ್ರಮುಖವಾಗಿ

ತಲೆ ಕೂದಲ ಬೆಳವಣಿಗೆಗೆ ಅಗತ್ಯವಾಗಿ ಬೇಕಾದ ಎಲ್ಲಾ ಬಗೆಯ (Health benefits of Ladies Finger) ಪೌಷ್ಟಿಕಾಂಶಗಳು ಇದರಲ್ಲಿವೆ.

ಮುಖ್ಯವಾಗಿ ವಿಟಮಿನ್ ಎ (Vitamin A), ವಿಟಮಿನ್ ಸಿ ಮತ್ತು ವಿಟಮಿನ್ ಕೆ ಹಾಗೂ ಖನಿಜಾಂಶಗಳಾದ ಕಬ್ಬಿಣ, ಮೆಗ್ನೀಷಿಯಂ (Magnesium) ಮತ್ತು ಕ್ಯಾಲ್ಸಿಯಂ ಇದರಲ್ಲಿ ಇರುವುದನ್ನು ನಾವು

ಕಾಣಬಹುದು. ತಲೆ ಕೂದಲಿನ ಕಿರು ಚೀಲಗಳಿಗೆ ತನ್ನ ಈ ಪೌಷ್ಟಿಕಾಂಶಗಳು ತಲುಪುವಂತೆ ಬೆಂಡೆಕಾಯಿ ಮಾಡುತ್ತದೆ.

ಕೂದಲು ಉದುರುವುದು ಕಡಿಮೆ
ಬೆಂಡೆಕಾಯಿ (Ladies Finger) ನೀರನ್ನು ಆಗಾಗ ಉಪಯೋಗಿಸುತ್ತಿದ್ದರೆ ತಲೆ ಕೂದಲಿನ ಬೇರುಗಳು ಉತ್ತಮ ಸಾಮರ್ಥ್ಯದಿಂದ ಕೂಡಿರಲು ಅನುಕೂಲವಾಗುವುದಲ್ಲದೆ ತಲೆ ಕೂದಲು

ಉದುರುವುದು ಹಾಗೂ ಕೂದಲು ಅರ್ಧಕ್ಕೆ ಮುರಿದುಕೊಳ್ಳುವ ಸಾಧ್ಯತೆ ಕೂಡ ಇರುವುದಿಲ್ಲ. ಬೆಂಡೆ ಕಾಯಿಯ ಸತ್ವಗಳು ಪೂರ್ಣ ಪ್ರಮಾಣದಲ್ಲಿ ತಲೆ ಕೂದಲಿಗೆ ಸಿಗುತ್ತವೆ.

ತಲೆ ಕೂದಲ ಸಮೃದ್ಧ ಬೆಳವಣಿಗೆಗೆ
ಕೂದಲ ಬೆಳವಣಿಗೆ ಚೆನ್ನಾಗಿ ಇರಬೇಕು ಎಂದರೆ ನೆತ್ತಿಯ ಆರೋಗ್ಯ ಚೆನ್ನಾಗಿರಬೇಕು. ಬೆಂಡೆಕಾಯಿ ನೀರು ನೆತ್ತಿಯ ಆರೋಗ್ಯವನ್ನು ನಿರ್ವಹಣೆ ಮಾಡುತ್ತದೆ. ಇದರಲ್ಲಿನ ಆಂಟಿ ಇಂಪ್ಲಾಮೆಟರಿ

(Anti Implemetory) ಗುಣಲಕ್ಷಣಗಳು ನೆತ್ತಿಯ ಭಾಗದಲ್ಲಿ ಉಂಟಾಗುವ ಕಿರಿಕಿರಿ ಮತ್ತು ತಲೆ ಹೊಟ್ಟಿನ ಸಮಸ್ಯೆಯನ್ನು ಸುಲಭವಾಗಿ ಪರಿಹಾರ ಮಾಡುತ್ತದೆ.

ಕೂದಲಿಗೆ ಹೊಳಪು
ಬೆಂಡೆಕಾಯಿ ನೀರು ತಲೆ ಕೂದಲಿನ ಸಮೃದ್ಧತೆಯ ಹಾಗೂ ಸೊಂಪಾದ ಬೆಳವಣಿಗೆಯ ಜೊತೆಗೆ ನೈಸರ್ಗಿಕವಾಗಿ ಉತ್ತಮ ಹೊಳಪು ನೀಡುವಲ್ಲಿ ಯಶಸ್ವಿಯಾಗುತ್ತದೆ. ಇದರಿಂದ ಆರೋಗ್ಯಕರವಾದ

ತಲೆ ಕೂದಲು ನಿಮ್ಮದಾಗುವುದು ಮಾತ್ರವಲ್ಲದೆ ನಿಮ್ಮ ಸೌಂದರ್ಯ ಕೂಡ ಹೆಚ್ಚಾಗುತ್ತದೆ. ಹಾಗಾಗಿ ಇನ್ನು ಮುಂದೆ ಬೆಂಡೆಕಾಯಿ ನೀರು ಬಳಸಿ ತಲೆ ಕೂದಲಿನ ಬಹುತೇಕ ಸಮಸ್ಯೆಗಳನ್ನು

ನಿವಾರಿಸಿ ಹೊಳಪು ಮೂಡುವಂತೆ ಮಾಡಬಹುದು.

ಕೊಲಾಜನ್ ಉತ್ಪತ್ತಿ
ಇದರಲ್ಲಿ ವಿಟಮಿನ್ ಸಿ (Vitamin C) ಪ್ರಮಾಣ ಹೆಚ್ಚಾಗಿದ್ದು, ಇದು ನೈಸರ್ಗಿಕವಾಗಿ ಕೊಲಾಜನ್ (Collagen) ಉತ್ಪತ್ತಿ ಮಾಡುವುದರ ಜೊತೆಗೆ ತಲೆ ಕೂದಲಿನ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.

ಇದರಿಂದ ತಲೆ ಕೂದಲು ಮುರಿದುಕೊಳ್ಳುವ ಸಾಧ್ಯತೆ ಇರುವುದಿಲ್ಲ ಮತ್ತು ಉದ್ದವಾಗಿ ಬೆಳೆಯಲು ಅನುಕೂಲ ವಾಗುತ್ತದೆ.

ಇದನ್ನು ಓದಿ: ಯುದ್ಧಪೀಡಿತ ಇಸ್ರೇಲ್ನಿಂದ ಭಾರತೀಯ ನಾಗರಿಕರನ್ನು ಕರೆತರಲು “ಆಪರೇಷನ್ ಅಜಯ್” ಆರಂಭ

Exit mobile version