Sago Health Benefits: ಹಬ್ಬ ಹರಿದಿನಗಳು ಬಂದರೆ ಸಬ್ಬಕ್ಕಿ (Sago) ಪಾಯಸ ತಯಾರಿಸುತ್ತಾರೆ ಅಲ್ಲದೆ ಉಪವಾಸದ ಸಮಯದಲ್ಲೂ ಇದನ್ನು ಸೇವಿಸುತ್ತಾರೆ ಇದನ್ನು ತಿನ್ನುತ್ತಿರುವುದು ಸಂಸ್ಕರಿಸಿದ ಅಥವಾ ಸಂಸ್ಕರಿಸದ ಸಬ್ಬಕ್ಕಿ ಎಂಬುದರ ಅರಿವಿರಬೇಕು. ಹೃದಯ ರೋಗ ಹೊಂದಿರುವವರಿಗೆ, ದೇಹದ ತೂಕ ಕಡಿಮೆ ಮಾಡಿಕೊಳ್ಳುವವರಿಗೆ,ಕೊಲೆಸ್ಟ್ರಾಲ್ (Cholesterol)ಇರುವವರಿಗೆ ಮತ್ತು ಸಕ್ಕರೆ ಕಾಯಿಲೆ ಇರುವವರಿಗೆ ಇದೊಂದು ಅತ್ಯುತ್ತಮ ಆಹಾರ ಪದಾರ್ಥ.ಹಾಗಾಗಿ ನೀವು ಸಹ ಆರೋಗ್ಯ ತಜ್ಞರಲ್ಲಿ ಮಾಹಿತಿ ಪಡೆದು ಇನ್ಮುಂದೆ ನಿಮ್ಮ ಆಹಾರ ಪದ್ಧತಿಯಲ್ಲಿ ಸಬ್ಬಕ್ಕಿಯನ್ನು ಸೇರಿಸಿಕೊಳ್ಳಬಹುದು. ಹಾಗಾದರೆ ಇದರ ಪ್ರಯೋಜನ ತಿಳಿಯೋಣ.
- ಇದು ನಮ್ಮ ದೇಹದಲ್ಲಿ ಶಕ್ತಿಯನ್ನು ಉತ್ಪತ್ತಿ ಮಾಡಲು ನೆರವಾಗುವುದಲ್ಲದೆ. ಸಬ್ಬಕ್ಕಿ ತನ್ನಲ್ಲಿ ಅಧಿಕ ಕ್ಯಾಲೋರಿಗಳನ್ನು (Calorie) ಒಳಗೊಂಡಿದ್ದು ಸಂಕೀರ್ಣ ಕಾರ್ಬೋಹೈಡ್ರೇಟ್ ಅಂಶಗಳ ಹೊಂದಿದೆ.
- ಸಬ್ಬಕ್ಕಿ ತನ್ನಲ್ಲಿ ಅಧಿಕ ಕ್ಯಾಲೋರಿಗಳನ್ನು ಒಳಗೊಂಡಿದ್ದು ಸಂಕೀರ್ಣ ಕಾರ್ಬೋಹೈಡ್ರೆಟ್ (Carbohydrates) ಗಳಿಂದ ಕೂಡಿದ್ದು ಹೀಗಾಗಿ ಇದು ನಮ್ಮ ದೇಹದಲ್ಲಿ ಶಕ್ತಿಯನ್ನು ಉತ್ಪತ್ತಿ ಮಾಡಲು ನೆರವಾಗುತ್ತದೆ. ಅಲ್ಲದೆ ಕಡಿಮೆ ಪ್ರಮಾಣದಲ್ಲಿ ವಿಟಮಿನ್ ಮತ್ತು ಪ್ರೋಟೀನ್ ಅಂಶಗಳು ಕೂಡ ಇದರಲ್ಲಿವೆ. ನೀವು ತೂಕ ಕಡಿಮೆ ಮಾಡುಲು ಬಯಸಿದರೆ ಇದನ್ನುಹೆಚ್ಚು ಪ್ರಮಾಣದಲ್ಲಿ ಸೇವಿಸಬಹುದು
- ಸಬ್ಬಕ್ಕಿ ಸೇವನೆಯಿಂದ ದೇಹಕ್ಕೆ ಶಕ್ತಿ ಮತ್ತು ಚೈತನ್ಯ ಸಿಗುವುದಲ್ಲದೆ ಇದರಲ್ಲಿ ಕಾರ್ಬೋಹೈಡ್ರೇಟ್ ಪ್ರಮಾಣ ಹೆಚ್ಚಾಗಿ ಇರುದರಿಂದ ಮತ್ತು ವ್ಯಾಯಾಮ ಮಾಡಿ ಮೈ ,ಕೈ ನೋವು ಬಂದಿದ್ದರೆ, ಸಬ್ಬಕ್ಕಿ ನೆನೆಸಿದ ನೀರು ಕುಡಿಯುವುದರಿಂದ ನೋವು ಮಾಯವಾಗುತ್ತದೆ.
- ದೇಹದಲ್ಲಿ ಮಾಂಸ ಖಂಡಗಳ ಸರಿ ಮಾಡುವ ಕೆಲಸ ಇದು ಮಾಡುತ್ತದೆ ಹಾಗಾಗಿ ವ್ಯಾಯಾಮ ಮಾಡುವವರು ವ್ಯಾಯಮಕ್ಕೂ ಅರ್ಧ ಗಂಟೆ ಮುಂಚೆ ಮತ್ತು ವ್ಯಾಯಾಮ ಮಾಡಿದ ಅರ್ಧ ಗಂಟೆ ನಂತರ ಸಬ್ಬಕ್ಕಿಯನ್ನು ಸೇವಿಸಬವುದು.
- ಇದರಲ್ಲಿರುವ ವಿಟಮಿನ್ ಬಿ6 (Vitamin B6) ಮತ್ತು ಪೋಲೆಟ್ ಭ್ರೂಣದ ಬೆಳವಣಿಗೆ ಸಹಾಯವಾಗಿರುದರಿಂದ ಗರ್ಭವಸ್ಥೆಯಲ್ಲಿರುವ ಮಹಿಳೆಯರಿಗೆ ಸಬ್ಬಕ್ಕಿ ಅತ್ಯುತ್ತಮ ಆಹಾರ ಸಹಕಾರ ನೀಡುತ್ತದೆ. ಅಷ್ಟೇ ಅಲ್ಲದೆ ಮಗುವಿನ ಬೆಳವಣಿಗೆಯಲ್ಲಿ ಒಂದು ವೇಳೆ ನರಮಂಡಲದ ದೌರ್ಬಲ್ಯ ಇದ್ದರೆ ಅದನ್ನು ಸರಿಪಡಿಸುತ್ತದೆ.
- ಸಬ್ಬಕ್ಕಿಯನ್ನು ಸೇವನೆ ಮಾಡುವುದರಿಂದ ಅಜೀರ್ಣ ಸಮಸ್ಸೆ ಇದ್ದರೆ ಈ ಸಮಸ್ಯೆ ಪರಿಹಾರವಾಗುವುದರ ಜೊತೆಗೆ ನಿಮ್ಮ ಜೀರ್ಣಾಂಗ ವ್ಯವಸ್ಥೆಯ ಕರುಳಿನ ಭಾಗದಲ್ಲಿ ಆರೋಗ್ಯಕರ ಬ್ಯಾಕ್ಟೀರಿಯಗಳ (Bacteria) ಬೆಳವಣಿಗೆ ಹೆಚ್ಚಾಗುವುದಲ್ಲದೆ ಮಲಬದ್ಧತೆ ಸಮಸ್ಯೆ ನಿವಾರಣೆಮಾಡುತ್ತದೆ.
- ಸಬ್ಬಕ್ಕಿಯಲ್ಲಿ ಅಪಾರವಾದ ಆಂಟಿ ಆಕ್ಸಿಡೆಂಟ್ (Antioxidant) ಅಂಶಗಳು ಇರುವುದ ರಿಂದ ನಮ್ಮ ದೇಹದಲ್ಲಿ ಹಾನಿಕಾರಕ ಫ್ರೀ ರಾಡಿಕಲ್ ಅಂಶಗಳ ವಿರುದ್ಧ ಇದು ಹೋರಾಡುವುದಲ್ಲದೆ
- ಇದರಿಂದ ಜೀವಕೋಶಗಳ ಹಾನಿ ಇಂದ ತಪಿಸುತ್ತದೆ ಮತ್ತು ಕ್ಯಾನ್ಸರ್ (Cancer) ಮತ್ತು ಹೃದಯರ ರಕ್ತನಾಳದ ಸಮಸ್ಯೆಗಳು ನಿವಾರಣೆ ಯಾಗುತ್ತವೆ. ನಮ್ಮ ದೇಹದ ರೋಗನಿರೋಧಕ ವ್ಯವಸ್ಥೆಯನ್ನು ವೃದ್ಧಿಗೊಳಿಸುದರ ಜೊತೆಗೆ ಉರಿಯುತವನ್ನು ನಿವಾರಣೆ ಮಾಡಿ ಹೃದಯದ ಕಾಯಿಲೆಗಳನ್ನು ದೂರ ಮಾಡುತ್ತದೆ.
- ಸಾಮಾನ್ಯ ಸಮಸ್ಯೆಯಾಗಿರುವ ರಕ್ತದ ಒತ್ತಡವನ್ನು ಸುಲಭವಾಗಿ ನಿರ್ವಹಣೆ ಮಾಡುವ ಗುಣ ಸಬ್ಬಕ್ಕಿಯಲ್ಲಿ ಇರುವುದರಿಂದ ರಕ್ತದ ಒತ್ತಡಕ್ಕೆ ಸಂಬಂಧ ಪಟ್ಟಂತೆ ನೀವು ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರೆ ಅದರ ಜೊತೆಗೆ ನಿಮ್ಮ ಆಹಾರ ಪದ್ಧತಿಯಲ್ಲಿ ಸಬ್ಬಕ್ಕಿಯನ್ನು ಸೇರಿಸಿ.
- ಸಬ್ಬಕ್ಕಿಯಲ್ಲಿ ಕ್ಯಾಲ್ಸಿಯಂ (Calcium) ಮತ್ತು ಮೆಗ್ನೀಷಿಯಂ ಪ್ರಮಾಣ ಹೆಚ್ಚಾಗಿ ಕಂಡುಬಂದಿದ್ದು, ನಮ್ಮ ಮೂಳೆಗಳ ಸಾಮರ್ಥ್ಯವನ್ನು ಹೆಚ್ಚಿಸಿ ಇದು ಆಸ್ತಿಯೋಪೋರೋಸಿಸ್ ಮತ್ತು ಆರ್ಥ್ರೈಟಿಸ್ ಸಮಸ್ಯೆಗಳಿಂದ ದೂರವಿರಬಹುದು.
- ಸಬ್ಬಕ್ಕಿಯನ್ನು ಸೇವನೆ ಮಾಡುವುದರಿಂದ ಇದು ನಮ್ಮ ದೇಹದಲ್ಲಿ ನಿಧಾನವಾಗಿ ಜೀರ್ಣವಾಗುತ್ತದೆ. ದೇಹದಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ಕಡಿಮೆ ಮಾಡುವುದಲ್ಲದೆ ಇದರಿಂದ ರಕ್ತದ ಹರಿವಿನಲ್ಲಿ ಸಕ್ಕರೆ ಪ್ರಮಾಣವಾಗಿ ಬಿಡುಗಡೆಯಾಗುತ್ತದೆ ಮತ್ತು ದೇಹದ ಕೊಲೆಸ್ಟ್ರಾಲ್ ಪ್ರಮಾಣ ಸಾಕಷ್ಟು ಕಡಿಮೆಯಾಗುತ್ತದೆ.
ಸಬ್ಬಕ್ಕಿಯ ಪ್ರಯೋಜನಗಳು :
ಮಾಂಸ ಖಂಡಗಳ ಬೆಳವಣಿಗೆಗೆ: ನಿಮ್ಮ ದೇಹವನ್ನು ಬಲಿಷ್ಠವಾಗಿಸಿಕೊಳ್ಳಬಹುದು. ದೇಹದ ಒಳಗಿನ ಅಂಗಾಂಗಗಳ ಸಹಿತ ಮಾಂಸ ಖಂಡಗಳ ಬೆಳವಣಿಗೆ ಕೂಡ ಇದರಿಂದ ಸಾಧ್ಯವಾಗುತ್ತದೆ.
ಸರಿಯಾದ ರೀತಿ ತಿನ್ನಿ: ಇದರಲ್ಲಿ ಕಾರ್ಬೋಹೈಡ್ರೇಟ್ ಹೆಚ್ಚಾಗಿ ಹೊಂದಿರುತ್ತವೆ. ಹೀಗಾಗಿ ಇದರ ಜೊತೆಗೆ ವಿವಿಧ ತರಕಾರಿಗಳನ್ನು ಸೇರಿಸಿ ಸೇವಿಸಿದರೆ ನಿಮಗೆ ಇದೊಂದು ಅತ್ಯುತ್ತಮ ಆಹಾರ, ಅಲ್ಲದೆ ಸಕ್ಕರೆ ಕಾಯಿಲೆ ಇರುವವರು ಕಡಿಮೆ ಪ್ರಮಾಣದಲ್ಲಿ ಇದನ್ನು ಸೇವಿಸಿ. ಮಾರುಕಟ್ಟೆಯಲ್ಲಿ ಸಂಸ್ಕರಿಸಿದ ಸಬ್ಬಕ್ಕಿ ಸಿಗುತ್ತದೆ. ಇದನ್ನು ಮಾತ್ರ ಸೇವಿಸುವುದು ಉತ್ತಮ.
ಮೇಘಾ ಮನೋಹರ ಕಂಪು