ರಕ್ತದೊತ್ತಡ ಇರುವವವರು ಆಹಾರ ಪದ್ದತಿಯಲ್ಲಿ ಸಬ್ಬಕ್ಕಿ ಸೇರಿಸಿಕೊಳ್ಳಿ: ಇದರ ವೈಶಿಷ್ಟ್ಯತೆಗಳೇನು ಎಂದು ತಿಳಿಯೋಣ

Sago Health Benefits: ಹಬ್ಬ ಹರಿದಿನಗಳು ಬಂದರೆ ಸಬ್ಬಕ್ಕಿ (Sago) ಪಾಯಸ ತಯಾರಿಸುತ್ತಾರೆ ಅಲ್ಲದೆ ಉಪವಾಸದ ಸಮಯದಲ್ಲೂ ಇದನ್ನು ಸೇವಿಸುತ್ತಾರೆ ಇದನ್ನು ತಿನ್ನುತ್ತಿರುವುದು ಸಂಸ್ಕರಿಸಿದ ಅಥವಾ ಸಂಸ್ಕರಿಸದ ಸಬ್ಬಕ್ಕಿ ಎಂಬುದರ ಅರಿವಿರಬೇಕು. ಹೃದಯ ರೋಗ ಹೊಂದಿರುವವರಿಗೆ, ದೇಹದ ತೂಕ ಕಡಿಮೆ ಮಾಡಿಕೊಳ್ಳುವವರಿಗೆ,ಕೊಲೆಸ್ಟ್ರಾಲ್ (Cholesterol)ಇರುವವರಿಗೆ ಮತ್ತು ಸಕ್ಕರೆ ಕಾಯಿಲೆ ಇರುವವರಿಗೆ ಇದೊಂದು ಅತ್ಯುತ್ತಮ ಆಹಾರ ಪದಾರ್ಥ.ಹಾಗಾಗಿ ನೀವು ಸಹ ಆರೋಗ್ಯ ತಜ್ಞರಲ್ಲಿ ಮಾಹಿತಿ ಪಡೆದು ಇನ್ಮುಂದೆ ನಿಮ್ಮ ಆಹಾರ ಪದ್ಧತಿಯಲ್ಲಿ ಸಬ್ಬಕ್ಕಿಯನ್ನು ಸೇರಿಸಿಕೊಳ್ಳಬಹುದು. ಹಾಗಾದರೆ ಇದರ ಪ್ರಯೋಜನ ತಿಳಿಯೋಣ.

ಸಬ್ಬಕ್ಕಿಯ ಪ್ರಯೋಜನಗಳು :
ಮಾಂಸ ಖಂಡಗಳ ಬೆಳವಣಿಗೆಗೆ: ನಿಮ್ಮ ದೇಹವನ್ನು ಬಲಿಷ್ಠವಾಗಿಸಿಕೊಳ್ಳಬಹುದು. ದೇಹದ ಒಳಗಿನ ಅಂಗಾಂಗಗಳ ಸಹಿತ ಮಾಂಸ ಖಂಡಗಳ ಬೆಳವಣಿಗೆ ಕೂಡ ಇದರಿಂದ ಸಾಧ್ಯವಾಗುತ್ತದೆ.

ಸರಿಯಾದ ರೀತಿ ತಿನ್ನಿ: ಇದರಲ್ಲಿ ಕಾರ್ಬೋಹೈಡ್ರೇಟ್ ಹೆಚ್ಚಾಗಿ ಹೊಂದಿರುತ್ತವೆ. ಹೀಗಾಗಿ ಇದರ ಜೊತೆಗೆ ವಿವಿಧ ತರಕಾರಿಗಳನ್ನು ಸೇರಿಸಿ ಸೇವಿಸಿದರೆ ನಿಮಗೆ ಇದೊಂದು ಅತ್ಯುತ್ತಮ ಆಹಾರ, ಅಲ್ಲದೆ ಸಕ್ಕರೆ ಕಾಯಿಲೆ ಇರುವವರು ಕಡಿಮೆ ಪ್ರಮಾಣದಲ್ಲಿ ಇದನ್ನು ಸೇವಿಸಿ. ಮಾರುಕಟ್ಟೆಯಲ್ಲಿ ಸಂಸ್ಕರಿಸಿದ ಸಬ್ಬಕ್ಕಿ ಸಿಗುತ್ತದೆ. ಇದನ್ನು ಮಾತ್ರ ಸೇವಿಸುವುದು ಉತ್ತಮ.

ಮೇಘಾ ಮನೋಹರ ಕಂಪು

Exit mobile version