ಮಲೆನಾಡಿಗರು ಯಾಕೆ ತಮ್ಮ ಮಕ್ಕಳಿಗೆ ಒಂದೆಲಗ ತಿನ್ನಲ್ಲೂ ಕೊಡುತ್ತಾರೆ ಗೊತ್ತಾ? ; ಇಲ್ಲಿದೆ ನಿಮಗೆ ತಿಳಿಯದ ಮಾಹಿತಿ

Brahmi Leaves

ಏಕಾಗ್ರತೆ(Concentration) ವೃದ್ಧಿಸುವಲ್ಲಿ ಸಹಕಾರಿಯಾಗಿರುವ ಈ ಒಂದೆಲಗ ಸೊಪ್ಪು(Brahmi Leaves) ಇದನ್ನು ಬ್ರಾಹ್ಮಿ ಅಂತ ಕೂಡ ಕರೆಯುತ್ತಾರೆ. ಹೌದು, ಒಂದೆಲಗ ಸೊಪ್ಪು ಅತ್ಯದ್ಭುತ ಪ್ರಯೋಜನಗಳನ್ನು ಹೊಂದಿದೆ. ಇದನ್ನು ಹಾಗೇ ಕೂಡ ಸೇವಿಸಬಹುದು ಅಥವಾ ಚಟ್ನಿ ರೂಪದಲ್ಲಿ, ಪಾನಿಯ ರೂಪದಲ್ಲಿ ಕೂಡ ಸೇವಿಸಬಹುದಾಗಿದೆ. ಮಕ್ಕಳಿಂದ ಹಿಡಿದು, ಹಿರಿಯರವರೆಗೂ ಸೇವಿಸಬಹುದಾದ ಈ ಒಂದೆಲಗ ಎಲೆಯಲ್ಲಿ ನಮ್ಮ ಆರೋಗ್ಯಕ್ಕೆ ಬೇಕಾದ ಅನೇಕ ಆರೋಗ್ಯಕರ ಅಂಶಗಳು ಇವೆ.

ಆಯುರ್ವೇದದಲ್ಲಿ ಉಲ್ಲೇಖಗೊಂಡಿರುವಂತ ಒಂದೆಲಗ ಇದರ ಕುರಿತು ಹೆಚ್ಚಿನ ಮಂದಿಗೆ ತಿಳಿದಿಲ್ಲಾ. ಒಂದೆಲಗ ಕುರಿತು ಹೇಳಬಹುದಾದರೆ ಅದ್ಭುತ ಆರೋಗ್ಯಕರ ಪ್ರಯೋಜನವನ್ನು ಹೊಂದಿರುವ ಈ ಒಂದೆಲಗ, ವೈಜ್ಞಾನಿಕವಾದ ಹಿನ್ನಲೆಯನ್ನು ಸಹ ಪಡೆದುಕೊಂಡಿರುವುದು ಉತ್ತಮ ಸಂಗತಿಯಾಗಿದೆ. ಆದ ಕಾರಣವೇ ಇವತ್ತಿನ ದಿನ ಬಹಳಷ್ಟು ಔಷಧಿಗಳಲ್ಲಿ ಇದರ ಬಳಕೆ ಹೆಚ್ಚಿದೆ. ಇಂದಿನ ಇಂಗ್ಲೀಷ್ ಔಷಧ ಜೊತೆಗೆ ಆಯುರ್ವೇದ(Ayurveda) ಔಷಧಿಗಳಲ್ಲಿ ಬಳಕೆ ಮಾಡುವ ಪದಾರ್ಥಗಳಲ್ಲಿ ಒಂದೆಲಗವು ಕೂಡ ಒಂದಾಗಿದ್ದು,

ಇದರ ಅದ್ಭುತ ಪ್ರಯೋಜನಗಳು ಆರೋಗ್ಯಕ್ಕೆ ಬಹಳ ಉಪಯುಕ್ತಕಾರಿಯಾಗಿದೆ. ಹಾಗೆ ಏಕಾಗ್ರತೆ ವೃದ್ದಿಸುವಲ್ಲಿ ಸಹಕಾರಿಯಾಗಿರುವ ಬ್ರಾಹ್ಮಿ ಎಲೆಯು, ಮನೆಯಿಂದಲೇ ಕೆಲಸ ಮಾಡುವವರಿಗೆ ಏಕಾಗ್ರತೆ ಕೊರತೆಯಿಂದಾಗಿ ಉಂಟಾಗುತ್ತಿರುವ ಸಮಸ್ಯೆಯನ್ನು ಪರಿಹಾರ ಮಾಡುವಲ್ಲಿ ಒಂದೆಲಗ ಪರಿಣಾಮಕಾರಿ. ಆದ್ದರಿಂದ ಯಾರೇ ಆಗಲಿ ಏಕಾಗ್ರತೆ ಕೊರತೆಯಿಂದ ಬಳಲುತ್ತಿರುವವರು ಒಂದೆಲಗದ ಪ್ರಯೋಜನವನ್ನು ಪಡೆದುಕೊಳ್ಳಿ. ಒಂದೆಲಗ ಎಲೆಯನ್ನು ಮಕ್ಕಳಿಗೆ ಬೆಳಿಗ್ಗೆ ಖಾಲಿ ಹೊಟ್ಟೆಗೆ ತಿನ್ನಲು ನೀಡಿ.

ಇದರಿಂದ ಮಕ್ಕಳ ಬುದ್ಧಿಯೂ ಚುರುಕಾಗುತ್ತದೆ. ಒಂದೆಲಗವನ್ನು ಬೆಳೆಯಲು ಹೆಚ್ಚು ಜಾಗ ಬೇಕಿಲ್ಲ, ಮನೆಯಲ್ಲಿಯೇ ಪಾಟ್ ನಲ್ಲಿ ಬೆಳಸಬಹುದು.

Exit mobile version