ಮಲಬದ್ಧತೆ ಹಾಗೂ ಕರುಳಿನ ಸಮಸ್ಯೆಗಳಿಗೆ ಚಮತ್ಕಾರಿ ಮನೆಮದ್ದು ಈ ಬೂದುಗುಂಬಳ!

Winter

ನಮ್ಮ ಮನೆಗಳಲ್ಲಿ ದಿನನಿತ್ಯ ಬಳಸುವ ತರಕಾರಿಗಳು ಆರೋಗ್ಯಕ್ಕೆ ವರದಾನವಾಗಿವೆ. ಇಂತಹ ತರಕಾರಿಗಳಲ್ಲಿ ಬೂದುಗುಂಬಳಕ್ಕೆ (Winter Melon) ಅಗ್ರಸ್ಥಾನವಿದೆ.

ಹೌದು, ಬೂದುಗುಂಬಳಕಾಯಿ ಪೋಷಕಾಂಶಗಳ ಕಣಜ. ಕಾರ್ಬೊಹೈಡ್ರೇಟ್, ಸಕ್ಕರೆ ಅಂಶ, ಫೈಬರ್, ಕೊಬ್ಬು, ಪ್ರೊಟೀನ್, ವಿಟಮಿನ್ ಎ, ಬಿ1, ಬಿ2, ಬಿ3, ಬಿ5, ಬಿ6, ಬಿ9, ಸಿ, ಕ್ಯಾಲ್ಷಿಯಂ, ಕಬ್ಬಿಣಾಂಶ, ಮೆಗ್ನೀಶಿಯಂ, ಪೊಟಾಶಿಯಂ, ಸೋಡಿಯಂ ಮತ್ತು ಜಿಂಕ್ ಅಂಶಗಳಿವೆ.

ಉರಿಯೂತ, ಹಿಸ್ಟಮಿನ್ ಪ್ರತ್ಯಾಮ್ಲ, ಅಲ್ಸರ್ ಇತ್ಯಾದಿಗಳ ವಿರುದ್ಧ ಹೋರಾಡುವ ಗುಣವನ್ನು ಇದು ಹೊಂದಿದೆ ಎಂದು ಸಂಶೋಧನೆಗಳು(Research) ಸಾಬೀತುಪಡಿಸಿವೆ. ಬೂದುಗುಂಬಳಕಾಯಿಯ ಎಲೆ, ಹೂ, ಕಾಯಿ, ಬೀಜ ಹೀಗೆ ಎಲ್ಲ ಭಾಗಗಳೂ ಉಪಯೋಗಕ್ಕೆ ಬರುತ್ತವೆ.

https://youtu.be/4u1gh2Ued2E ಭಾರಿ ಮಳೆಗೆ ತುತ್ತಾದ ರೈತರು!

ಕುಂಬಳಕಾಯಿಯ ಉಪಯೋಗ ಅದರ ಬೆಳವಣಿಗೆಯ ಮೇಲೆ ನಿರ್ಧಾರವಾಗುತ್ತದೆ. ಕುಂಬಳಕಾಯಿ ಬೀಜಗಳನ್ನು ತಿನ್ನಬಹುದು, ಇವು ಸಹ ಪ್ರೊಟೀನ್, ಜಿಂಕ್, ವಿಟಮಿನ್, ಮ್ಯಾಂಗನೀಸ್, ಪ್ರಾಸ್ಫರಸ್ ಅಂಶಗಳನ್ನು ಒಳಗೊಂಡಿವೆ ಮತ್ತು ಕೊಬ್ಬು ಕರಗಿಸುವ ಗುಣ ಹೊಂದಿವೆ. ಕುಂಬಳಕಾಯಿ ಬೀಜಗಳಿಂದ ಎಣ್ಣೆಯನ್ನು ಸಹ ತಯಾರಿಸುತ್ತಾರೆ, ಇದು ರಕ್ತನಾಳ ಮತ್ತು ನರಗಳನ್ನು ಶಕ್ತಿಗೊಳಿಸುತ್ತದೆ.


ಇನ್ನು, ಬೂದು ಕುಂಬಳಕಾಯಿ ವಿಶೇಷವಾಗಿ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಇದರ ರಸಕ್ಕೆ ಕೆಂಪು ಕಲ್ಲುಸಕ್ಕರೆ ಹಾಕಿ ಕುಡಿದರೆ ಪಿತ್ತದೋಷ ಕಡಿಮೆಯಾಗುತ್ತದೆ.

ಇದರಲ್ಲಿ ಫೈಬರ್ (Health Facts of Winter Melon)ಅಂಶ ಹೆಚ್ಚಿರುವುದರಿಂದ ಮಲಬದ್ಧತೆ ನಿವಾರಿಸುತ್ತದೆ.

ಖಾಲಿ ಹೊಟ್ಟೆಗೆ ಈ ರಸ ಕುಡಿಯುವುದರಿಂದ ವಿಶೇಷವಾಗಿ ಕರುಳಿನ ಹುಣ್ಣಿಗೆ ಉತ್ತಮ ಔಷಧಿ.


ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದಾಗ ಮಾತ್ರ ಬೂದುಗುಂಬಳ ರಸದಿಂದ ಪ್ರಯೋಜನ ಪಡೆಯಬಹುದು. ಈ ರಸವು ವಿಟಮಿನ್‌ಗಳು ಮತ್ತು ಖನಿಜಗಳು ಮತ್ತು ಫೈಬರ್‌ನಿಂದ ತುಂಬಿರುತ್ತದೆ.

ಇದು ತೂಕ ನಷ್ಟಕ್ಕೆ ಕಾರಣವಾಗುತ್ತದೆ. ಅಷ್ಟೇ ಅಲ್ಲ, ಹೊಟ್ಟೆಯನ್ನು ತಂಪಾಗಿಸುವ ದೇಹದ (Health Facts of Winter Melon) ಕ್ಷಾರವನ್ನು ಹೆಚ್ಚಿಸಲು ಈ ಜ್ಯೂಸ್ ತುಂಬಾ ಒಳ್ಳೆಯದು.

ಇದನ್ನೂ ಓದಿ : https://vijayatimes.com/hdk-allegation-over-central-government/


ಬೂದುಗುಂಬಳಕಾಯಿಯಲ್ಲಿ ನೀರಿನ ಅಂಶ ಹೆಚ್ಚು ಇರುವುದರಿಂದ ಮೂತ್ರವನ್ನು ಹೆಚ್ಚಿಸುವುದರಿಂದ ಮೂತ್ರಕೋಶವನ್ನು ಶುದ್ಧಿ ಮಾಡುತ್ತದೆ. ಉರಿಮೂತ್ರ, ಮೂತ್ರಕೋಶದಲ್ಲಿ ಕಲ್ಲು, ಮೂತ್ರ ತಡೆ ಮುಂತಾದ ಮೂತ್ರ ವಿಕಾರಗಳನ್ನು ನಿವಾರಿಸುತ್ತದೆ.

ದೇಹದ ತೂಕ ಇಳಿಸಿಕೊಳ್ಳಲು ಹಾಗೂ ರಕ್ತದೊತ್ತಡವನ್ನು ಸಮತೋಲನದಲ್ಲಿಡಲು ಬೂದುಗುಂಬಳ ಬಲು ಉಪಯೋಗಿ.


ಕೊಬ್ಬರಿ ಎಣ್ಣೆಯಲ್ಲಿ ಬೂದುಗುಂಬಳಕಾಯಿ ಸಿಪ್ಪೆಯನ್ನು ಕುದಿಸಿ ತಲೆಗೆ ಹಚ್ಚುವುದರಿಂದ ಕೂದಲು ದಟ್ಟವಾಗಿ ಬೆಳೆಯುತ್ತದೆ. ಒಣ ಮತ್ತು ಒರಟು ತಲೆಗೆ ಮೃದುತ್ವ ನೀಡುತ್ತದೆ.
Exit mobile version