ಇಂತಹ ಲಕ್ಷಣಗಳು ಕಾಲಿನಲ್ಲಿ ಕಂಡು ಬಂದರೆ ಕೂಡಲೇ ಎಚ್ಚರ ವಹಿಸಿ!

Leg Health

ಮಧುಮೇಹ(Diabities) ಈಗಿನ ಯುವ ಪೀಳಿಗೆಯ ಮೇಲೆ ಬಹಳ ಬೇಗನೆ ಪ್ರಭಾವ ಬೀರುತ್ತಿದೆ. ಈಗಿನ ಜೀವಶೈಲಿಯನ್ನು ನೋಡಿದರೆ ಮಧುಮೇಹದ ಸಮಸ್ಯೆ ಚಿಕ್ಕ ಪ್ರಾಯಕ್ಕೆ ಕಂಡು ಬರುತ್ತಿದೆ. ವಿಶ್ವದಲ್ಲಿ ಭಾರತ ದೇಶ ಅಧಿಕ ಮಧುಮೇಹಿಗಳನ್ನ ಹೊಂದಿದೆ.

ನಾನು ಮೊದಲೆ ಹೇಳಿದ ಹಾಗೆ ಕೆಲವರಿಗೆ ಜೀವನ ಶೈಲಿಯಿಂದ ಬಂದರೆ ಇನ್ನು ಕೆಲವರಿಗೆ ವಂಶಪಾರಂಪರ್ಯವಾಗಿ ಈ ಸಮಸ್ಯೆ ಬರುತ್ತದೆ. ಈ ಸಮಸ್ಯೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದೆ ಹೊರತು, ಇದನ್ನು ಸಂಪೂರ್ಣವಾಗಿ ಗುಣ ಪಡಿಸಲು ಸಾಧ್ಯವಿಲ್ಲ.

ಇವರು ಎಲ್ಲರಂತೆ ಸಾಮಾನ್ಯ ಜೀವನ ನಡೆಸಬೇಕಾದರೆ ಸಕ್ಕರೆಯಂಶ ಸೇವಿಸುವುದನ್ನು ಕಡಿಮೆ ಮಾಡಬೇಕು. ಈ ಒಂದು ಸಮಸ್ಯೆ ನಮ್ಮ ದೇಹಕ್ಕೆ ಬಂದರೆ ಇದರಿಂದ ನಾನ ಸಮಸ್ಯೆಗಳು ಉಂಟಾಗುತ್ತದೆ. ಮೊದಲೆನೆಯದಾಗಿ ಪದೇ ಪದೇ ಮೂತ್ರ ವಿಸರ್ಜನೆ(Urine Pass) ಆಗುವುದು, ಹಾಗು ಬಾಯಾರಿಕೆ(Thirsty) ಆಗುವುದು ಹಾಗೂ ಕಾಲುಗಳಲ್ಲಿ ನೋವುಗಳು ಕಾಣೀಸುಕೊಳ್ಳುವಂತದ್ದು, ಮತ್ತು ಕೆಲವೊಂದು ಬದಲಾವಣೆಗಳು ಕಂಡು ಬರುತ್ತದೆ.


೧) ಕಾಲಿನಲ್ಲಿ ನೋವು ಕಾಣಿಸಿಕೊಳ್ಳುವುದು.
೨) ಕಾಲಿನ ಪಾದದಲ್ಲಿ ಬಣ್ಣ ಬದಲಾದಂತೆ ಭಾಸವಾಗುವುದು.
೩) ಕಾಲಿನ ಉಗುರಿನ ಬಣ್ಣ ಹಳದಿ ಬಣ್ಣಕ್ಕೆ ತಿರುಗುವುದು.
೪) ಹೆಚ್ಚು ಮೂತ್ರ ವಿಸರ್ಜನೆ.
೫) ಆಯಾಸವಾಗುವುದು.
೬) ತೂಕದಲ್ಲಿ ಇಳಿಕೆ ಆಗುವುದು.


ರಕ್ತದಲ್ಲಿ ಸಕ್ಕರೆಯಂಶ ಹೆಚ್ಚಾದರೆ ಮೂತ್ರ ಪಿಂಡಗಳಿಗೆ ಹಾನಿಯಾಗುವ ಸಾಧ್ಯತೆಯಿದೆ ಮತ್ತು ಮೂತ್ರನಾಳಗಳಲ್ಲಿ ಸೊಂಕು ಉಂಟಾಗುವ ಸಾಧ್ಯತೆ ಇದೆ. ಇದರಿಂದ ಮೂತ್ರವಿಸರ್ಜನೆ ಉರಿಯುತವಾಗಿ ಹೋಗುತ್ತದೆ. ಮಧುಮೇಹ ಹೆಚ್ಚಾದರೆ ಕಣ್ಣಿನ ದೃಷ್ಟಿಯ ಮೇಲೆ ನೇರವಾದ ಪರಿಣಾಮ ಬೀಳಬಹುದು.

ಮಧುಮೇಹ ಕಾಯಿಲೆ ಇರುವವರಿಗೆ ಗಾಯಗಳಾದರೆ ಆ ಗಾಯ ಗುಣವಾಗಲು ಹೆಚ್ಚು ಸಮಯ ಬೇಕಾಗುತ್ತದೆ. ಗಾಯ ಬೇಗ ಗುಣವಾಗದಿದ್ದರೆ ಇದರಿಂದಾಗಿ ಬೇರೆ ರೀತಿಯ ಸೋಂಕು ಬರುವ ಸಾಧ್ಯತೆ ಇರುತ್ತದೆ. ಗಾಯಗಳು ಚಿಕ್ಕದಾಗಿದ್ದರು ಅದು ಗುಣವಾಗಲು ಹೆಚ್ಚಿನ ಸಮಯವನ್ನು ತಗೆದುಕೊಳ್ಳುತ್ತದೆ.


ಮಧುಮೇಹಿಗಳಿಗೆ ಹೆಚ್ಚಿನ ಹಸಿವು ಕಾಣಿಸಿಕೊಳ್ಳುವುದು ಮತ್ತು ಇದು ಭಾವಾನಾತ್ಮಕವಾಗಿಯೂ ಪರಿಣಾಮ ಬೀರುತ್ತದೆ. ಹಾಗಾಗಿ ಎಲ್ಲರ ಮೇಲೆ ಕಿರಿಕಿರಿ ಮಾಡುವುದು ಮೊದಲಾದ ಲಕ್ಷಣಗಳು ಕಂಡುಬರುತ್ತದೆ. ಮಧುಮೇಹ ಇರುವವರಿಗೆ ಆರಂಭದ ಲಕ್ಷಣಗಳು ತುಂಬಾ ಸೂಕ್ಷ್ಮವಾಗಿರುತ್ತದೆ. ಹಾಗಾಗಿ ಇದನ್ನು ಹೆಚ್ಚಿನವರು ಪರಿಗಣಿಸುವುದಿಲ್ಲ. ಆದರೆ ಈ ಸ್ಥಿತಿ ಒಮ್ಮೆಲೆ ಬರುವುದಿಲ್ಲ ವಯಸ್ಸು ಕಳೆದಂತೆ ನಿಧಾನವಾಗಿ ದೇಹವನ್ನ ಆವರಿಸುತ್ತದೆ.

ಇದು ಶಾಶ್ವತವಾಗಿ ಉಳಿಯುವ ಕಾಯಿಲೆಯಾಗಿದೆ, ಈ ಕಾಯಿಲೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಂಡರೆ ಉತ್ತಮ ಜೀವನವನ್ನು ನಡೆಸಬಹುದು, ಉತ್ತಮ ಆರೋಗ್ಯ ಸೂತ್ರವನ್ನು ಜೀವನದಲ್ಲಿ ಅಳವಡಿಸಿದರೆ ಮಧುಮೇಹದಿಂದ ತಪ್ಪಿಸಿಕೊಳ್ಳಬಹುದು.

Exit mobile version