ತುಪ್ಪದ ಚಮತ್ಕಾರ : ಮಲಗುವ ಮುನ್ನ ಒಂದು ಚಮಚ ತುಪ್ಪ ಬಳಸಿ, “ನಿಮ್ಮ ಹಲವು ಸಮಸ್ಯೆಗಳಿಗೆ ತುಪ್ಪ ರಾಮಬಾಣ”

ಸಾಮಾನ್ಯವಾಗಿ ಚಳಿಗಾಲದಲ್ಲಿ ನಮ್ಮ ತುಟಿಗಳು ಬಿರುಕು ಮೂಡುವುದು ಸಹಜ.ಈ ಸಮಯದಲ್ಲಿ ನಿದ್ರೆಗೂ ಮುನ್ನ ಶುದ್ಧ ತುಪ್ಪವನ್ನು ನಿಮ್ಮ ತುಟಿಗಳಿಗೆ ಹಚ್ಚಿದರೆ ತುಟಿಗಳು ಹೂವಿನಂತೆ ಮೃದುವಾಗಿರುತ್ತವೆ.
ತುಪ್ಪವನ್ನು ನಾವು ಸಾಮಾನ್ಯವಾಗಿ ಅಡುಗೆ ಮತ್ತು ತಿಂಡಿ ತಿನಿಸುಗಳಿಗೆ ಬಳಸುವುದನ್ನು ನೋಡಿದ್ದೇವೆ, ಹಾಗೂ ನಮ್ಮ ದೇಹದಲ್ಲಿನ ಹಲವಾರು ಸಮಸ್ಯೆಗಳ ನಿವಾರಣೆಯನ್ನೂ ಮಾಡುತ್ತದೆ. ಈ ಶುದ್ಧ ಹಸುವಿನ ತುಪ್ಪದಲ್ಲಿ ಅನೇಕ ಪೋಷಕಾಂಶಗಳಿದ್ದು ದೇಹದಲ್ಲಿನ ಆರೋಗ್ಯ ತೊಂದರೆಗಳಲ್ಲದೆ ನಮ್ಮ ಚಮ೯ಕ್ಕೂ ಸಂಬAಧಿಸಿದ ಸಮಸ್ಯೆಗಳನ್ನು ಹೋಗಲಾಡಿಸುತ್ತದೆ.
ಅಂತೆಯೇ, ಈ ತುಪ್ಪವನ್ನು ರಾತ್ರಿಯ ಹೊತ್ತು ಮುಖ ತೊಳೆದ ನಂತರ ಸ್ಕಿನ್ ಮೊಯ್ಸಸ್ಚರೈಸರ್ ಆಗಿಯೂ ಉಪಯೋಗಿಸಬಹುದು.ಮುಖಕ್ಕೆ ಶುದ್ಧ ತುಪ್ಪವನ್ನು ಹಚ್ಚುವುದರಿಂದ ಮುಖದ ಮೇಲಿನ ಬಂಗು ಹಾಗೂ ಕಣ್ಣಿನ ಸುತ್ತ ಇರುವ ಡಾಕ್೯ ಸಕ೯ಲ್ಸಗಳನ್ನು ದೂರ ಮಾಡುತ್ತದೆ. (ಎಣ್ಣೆ ತ್ವಚೆ ಇರುವವರು ಬಳಸಬೇಡಿ)

ಬಿರುಕು ತುಟಿಗಳ ಸಮಸ್ಯೆ:-
ಈ ಚಳಿಗಾಲದಲ್ಲಿ ನಮ್ಮ ತುಟಿಗಳಿಗೆ ಬಿರುಕುಗಳು ಬರುವುದು ಸಾಮಾನ್ಯವಾದ ಸಂಗತಿಯಾಗಿರುತ್ತದೆ. ಹಾಗೆ ಈ ಸಮಸ್ಯೆಯನ್ನು ಹೋಗಲಾಡಿಸಲು ರಾತ್ರಿ ಹೊತ್ತು ಮಲಗುವ ಮುಂಚೆ ತುಟಿಗಳಿಗೆ ಸ್ವಲ್ಪ ತುಪ್ಪವನ್ನು ಹಚ್ಚಿದರೆ ಈ ಸಮಸ್ಯೆಯಿಂದ ಮುಕ್ತಿ ಹೊಂದಬಹುದು.

ಚಮ೯ದ ತುರಿಕೆ / ಸೋಂಕು:-
ದೇಹದಲ್ಲಿ ಚಮ೯ದ ಆರೈಕೆ ಎಲ್ಲರಿಗೂ ಬಹು ಮುಖ್ಯವಾದ ಅಂಶವಾಗಿದೆ.ಕೆಲವರಲ್ಲಿ ಚಮ೯ದ ತುರಿಕೆ ಹಾಗೂ ತ್ವಚೆಯ ಶುಷ್ಕತೆಯು (ಒಣ ಚಮ೯ದ ಸಮಸೈ) ಇರುತ್ತದೆ. ಅಂತಹ ಸಮಸೈಯಿರುವ ಜನರು ತುಪ್ಪವನ್ನು ಪ್ರತಿದಿನ ದೇಹಕ್ಕೆ ಮಸಾಜ್ ಮಾಡುವುದರಿಂದ ಅವರ ತ್ವಚೆಯು ಹೊಳೆಯುತ್ತದೆ ಮತ್ತು ಚಮ೯ದ ತುರಿಕೆ ಅಥವಾ ಯಾವುದಾದರೂ ಸೋಂಕುಗಳಿದ್ದರೂ ಹೋಗಲಾಡಿಸುತ್ತದೆ ( ಎಣ್ಣೆ ತ್ವಚೆ ಇದ್ದವರು ವೈದ್ಯರನ್ನು ಸಂಪಕಿ೯ಸಿ).

ಸನ್ ಬನ್೯ ಸಮಸ್ಯೆ:-
ಸೂಯ೯ನ ತೀವ್ರವಾಗಿ ಬರುವ ಕಿರಣಗಳಿಂದಾಗಿ ಕೆಲವರಿಗೆ ಸನ್ ಬನ್೯ ನಿವಾರಣೆಯಾಗುತ್ತದೆ. ರಾತ್ರಿ ಹೊತ್ತು ಹಚ್ಚಲು ಇಷ್ಟಪಡದೇ ಇರುವವರು ಬೆಳಗಿನ / ಅಥವಾ ಸಂಜೆಯ ಸ್ನಾನಕ್ಕಿಂತ ೨ ಗಂಟೆಗಳ ಮೊದಲೇ ಹಚ್ಚಿ ನಂತರ ಸ್ನಾನ ಮಾಡಿ.

ನಿದ್ರಾಹೀನತೆ:-
ಇಂದಿನ ಫಾಸ್ಟ್ ಲೈಫ್‌ನಲ್ಲಿ ಹೆಚ್ಚಾಗಿ ಎಲೆಕ್ಟಿçಕಲ್ ಡಿವೈಸ್ಗಳನ್ನು ಬಳಕೆ ಮಾಡುವುದರಿಂದ ಹಾಗೂ ಅತಿಯಾದ ಕೆಲಸದ ಒತ್ತಡಗಳಿಂದ ಎಲ್ಲರಲ್ಲೂ ನಿದ್ರಾಹೀನತೆ ಎಥೇಚ್ಚವಾಗಿರುತ್ತದೆ. ಅಂತಾ ಸಮಸೈ ಇದ್ದವರು ಮಲಗುವ ಮುನ್ನ ತುಪ್ಪದಿಂದ ಕಣ್ನಿನ ಸುತ್ತಾ ಮಸಾಜ್ ಮಾಡುವುದರಿಂದ ಹಾಯಾದ ನಿದ್ದೆಯನ್ನೂ ಕೂಡ ಮಾಡಬಹುದು ಮತ್ತು ನಿಮ್ಮ ದಿನನಿತ್ಯದ ಕೆಲಸಗಳು ಸುಗಮವಗುತ್ತವೆ.

Exit mobile version