How to Balance Cholesterol: ಭಾರತೀಯ ಅಡುಗೆ ಮನೆ ವೈವಿಧ್ಯಮಯ ಸಂಗ್ರಹ, ಅಡುಗೆ ಪದಾರ್ಥಗಳ ಅದರಲ್ಲೂ ಸಾಂಬಾರ ಪದಾರ್ಥಗಳ ಆಗರ, ಇಂತಹ ಪದಾರ್ಥಗಳಲ್ಲಿ ದಿನ ನಿತ್ಯ ಬಳಸುವ ಬೆಳ್ಳುಳ್ಳಿ ಹೃದಯದ ಆರೈಕೆಗೆ ಬೆಸ್ಟ್ ಅಂತಲೇ ಹೇಳಬಹುದು. ಹೌದು, ಆರೋಗ್ಯ ಮೌಲ್ಯ ಹೆಚ್ಚಿಸುವ ಬೆಳ್ಳುಳ್ಳಿ (Garlic) ಯಿಂದ ಕೊಬ್ಬಿನಾಂಶ ಸಮತೋಲನ, ಹೃದಯದ ಆರೋಗ್ಯ, ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಟಾಪರ್ ಎನ್ನಬಹುದು. ಇನ್ನೂ ಮುಖ್ಯವಾಗಿ ಸಾಮನ್ಯ ಶೀತ, ಕೆಮ್ಮು ಬಂದಾಗಲೂ ಭಾರತೀಯರ ಮೊದಲ ಆಯ್ಕೆ ಬೆಳ್ಳುಳ್ಳಿ ರಸಂ. ಸಾವಿರಾರು ವರ್ಷಗಳಿಂದಲೇ ನಿತ್ಯವೂ ಬಳಸುತ್ತಿರುವ ಬೆಳ್ಳುಳ್ಳಿ ಇತ್ತಿಚೆಗೆ ಹೆಚ್ಚುತ್ತಿರುವ ಆರೋಗ್ಯ ಸಮಸ್ಯೆಗಳಿಗೆ ಹೇಳಿ ಮಾಡಿಸಿದ ಪದಾರ್ಥ.
![Vitamins](https://sp-ao.shortpixel.ai/client/to_webp,q_glossy,ret_img,w_770,h_533/https://vijayatimes.com/wp-content/uploads/2024/06/Water-Soluble-Vitamins-In-Food-1457433817-770x533-1_jpg.webp)
ಬೆಳ್ಳುಳ್ಳಿ ಖಾದ್ಯಗಳ ಪರಿಚಯವಿರುವಷ್ಟು ಆರೋಗ್ಯದ ಗುಣಗಳು ಹೆಚ್ಚಿನವರಿಗೆ ತಿಳಿದಿಲ್ಲ, ಬೆಳ್ಳುಳ್ಳಿ ರೋಗ ನಿರೋಧಕ ಶಕ್ತಿಯ ಆಗರ, ಅದರಲ್ಲಿ ವಿಟಮಿನ್ ಎ, ಸಿ ಮತ್ತು ಇ (Vitamin A, C And E) ಅಂಶಗಳು ಹೆಚ್ಚಾಗಿದ್ದು, ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವ ಮೂಲಕ ಹೃದಯವನ್ನು ರಕ್ಷಿಸಲು ಸಹಾಯ ಮಾಡುತ್ತದೆ.
ಬ್ಯಾಕ್ಟೀರಿಯಲ್ (Bacterial) ಇನ್ಫೆಕ್ಷನ್ಸ್ಗಳ ತಡೆಯಲು ಬೆಳ್ಳುಳ್ಳಿ ಬಳಸುವಿಕೆ ಮುಖ್ಯವಾಗಿದೆ, ರಕ್ತದೊತ್ತಡ ಸಮತೋಲಿಸಲು, ರಕ್ತದ ಹೆಪ್ಪುಗಟ್ಟುವಿಕೆ ತಡಯಲೂ ಸಹಿತ ಬೆಳ್ಳುಳ್ಳಿ ಉತ್ತಮ, ಸರಳ ಪರಿಹಾರ ಎಂದು ಪ್ರಖ್ಯಾತ ಆರೋಗ್ಯ ವರದಿಗಳು ತಿಳಿಸಿವೆ.
![Heart](https://sp-ao.shortpixel.ai/client/to_webp,q_glossy,ret_img,w_300,h_168/https://vijayatimes.com/wp-content/uploads/2024/06/images-3.jpg)
ಸರಳವಾಗಿ ದಿನವೂ ಬೆಳ್ಳುಳ್ಲೀ ಬಳಸಲು ಸರಳ ರೆಸಿಪಿಗಳು ಇವೆ, ತುಂಬಾ ಸುಲಭವಾಗಿರೋದು ಒಂದೆರಡು ಬೆಳ್ಳುಳ್ಳಿ ಎಸಳುಗಳನ್ನು ಜಜ್ಜಿ, ಅರ್ಧ ನಿಂಬೆ ರಸದೊಂದಿಗೆ ಸೇರಿಸಿ, ಒಂದು ಲೋಟ ನೀರಿನಲ್ಲಿ ಬೆರಸಿ ಬೆಳಗ್ಗೆ ಕುಡಿಯುವುದರಿಂದ ಮಹತ್ತರ ಬದಲಾವಣೆಗಳೂ, ಸುಧಾರಣೆಗಳೂ ಆಗಲಿದೆ ಎಂಬುದು ಪರಿಣಿತರ ಅಭಿಪ್ರಾಯ.
ಈ ರೀತಿ ಬೆಳ್ಳುಳ್ಳಿ ನಿಂಬೆ ರಸ ಕುಡಿಯುವುದು ಕಷ್ಟ ಎನಿಸಿದರೆ, ಸರಳವಾಗಿ ಸಿಪ್ಪೆ ಸುಲಿದ ಬೆಳ್ಳುಳ್ಳಿ ಎಸಳೊಂದನ್ನು ತಿಂದರೂ ಬಹಳಷ್ಟು ಪರಿಣಾಮಗಳು ದೇಹಾರೊಗ್ಯದ ಮೇಲೆ ಬೀರಲಿದೆ. ಭಾರತೀಯರ ಆರೋಗ್ಯದ ಗುಟ್ಟುಗಳಲ್ಲಿ ಬೆಳ್ಳುಳ್ಳಿಯೂ ಒಂದಾಗಿದೆ, ಭಾರತವೂ ಸೇರಿದಂತೆ ಈಜಿಪ್ಟ್ (Egypt) ಐದು ಸಾವಿರ ವರ್ಷಗಳಿಂದ ಬೆಳ್ಳುಳ್ಳಿ ಬಳಸತ್ತಿದೆ, ನೆರೆಯ ಚೀನಾ ಕೂಡ 2-3 ಸಾವಿರ ವರ್ಷಗಳಿಂದಲೂ ಬೆಳ್ಳುಳ್ಳಿ ಬಳಸುತ್ತಿದೆ ಎಂಬುದು ವೈಜ್ಞಾನಿಕ ವರದಿಗಳಿಂದ ಸಾಭೀತಾಗಿದೆ.