ಥೈರಾಯ್ಡ್ ಸಮಸ್ಯೆ ಇರುವವರು ಈ ಆಹಾರಗಳನ್ನು ಸೇವಿಸಿ

Thyroid

ಥೈರಾಯ್ಡ್(Thyroid) ಸಮಸ್ಯೆ ಇಂದು ಬಹುತೇಕ ಜನರಲ್ಲಿ ಕಂಡು ಬರುತ್ತಿದೆ. ಅದರಲ್ಲೂ ಮಹಿಳೆಯರಲ್ಲಿ(Women) ಈ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತಿದೆ. ಸಾಮಾನ್ಯವಾಗಿ ಥೈರಾಯ್ಡ್ ಹಾರ್ಮೋನ್ಗಳಲ್ಲಿ(Harmones) ವ್ಯತ್ಯಾಸ ಉಂಟಾದಾಗ ಥೈರಾಯ್ಡ್ ಸಮಸ್ಯೆ ಉಂಟಾಗುವುದು. ಈ ಸಮಸ್ಯೆಗೆ ಸೂಕ್ತ ಚಿಕಿತ್ಸೆಯೊಂದಿಗೆ ಉತ್ತಮ ಆಹಾರ ಕ್ರಮವನ್ನು ಅಳವಡಿಸಿಕೊಂಡರೆ ಥೈರಾಯ್ಡ್ ಸಮಸ್ಯೆ ನಿಯಂತ್ರಣದಲ್ಲಿಡಬಹುದು. ಹೀಗಾಗಿ ಥೈರಾಯ್ಡ್ ಸಮಸ್ಯೆ ಇರುವವರು ಸೇವಿಸಬೇಕಾದ ಆಹಾರಗಳ ಮಾಹಿತಿ ಇಲ್ಲಿದೆ ನೋಡಿ.


• ಪ್ರತಿದಿನ ಒಂದು ಮೊಟ್ಟೆ(Egg) ತಿನ್ನುವುದು ಒಳ್ಳೆಯದು.
• ಅಯೋಡಿಯನ್(Iodine) ಇರುವ ಕಲ್ಲುಪ್ಪು(Rock Salt) ಅಥವಾ ಪುಡಿ ಉಪ್ಪು ಅಡುಗೆಯಲ್ಲಿ ಬಳಸಬೇಕು.
• ಥೈರಾಯ್ಡ್ ಸಮಸ್ಯೆ ಇರುವವರು ಲಿವರ್ ಸೇವನೆ ಮಾಡುವುದು ಒಳ್ಳೆಯದು. ಮಾಂಸದಲ್ಲಿ ಇರುವುದಕ್ಕಿಂತ ಅಧಿಕ ಪೋಷಕಾಂಶ ಲಿವರ್ನಲ್ಲಿರುತ್ತದೆ.
• ಬಾಳೆಹಣ್ಣು(Banana) ಥೈರಾಯ್ಡ್ ಸಮಸ್ಯೆ ಇರುವವರಿಗೆ ಒಳ್ಳೆಯ ಆಹಾರವಾಗಿದೆ.
• ಮೀನಿನಲ್ಲಿ(Fish) ಅಯೋಡಿಯನ್ ಅಂಶ ಹೆಚ್ಚಾಗಿದ್ದು, ನಿಮ್ಮ ದೇಹಕ್ಕೆ ಪ್ರತಿನಿತ್ಯ ಅಗ್ಯತವಿರುವ ಅಯೋಡಿಯನ್ ಅನ್ನು ಮೀನಿನ ಮೂಲಕ ಪಡೆದುಕೊಳ್ಳಬಹುದು. ಮೀನಿನ ಆಹಾರ ಸೇವನೆ ಥೈರಾಯ್ಡ್ ಸಮಸ್ಯೆ ಇರುವವರಿಗೆ ಆರೋಗ್ಯಕರವಾಗಿದೆ.


• ಥೈರಾಯ್ಡ್ ಸಮಸ್ಯೆ ಇರುವವರು ಹಾಲಿನ(Milk) ಉತ್ಪನ್ನಗಳನ್ನು ಸೇವಿಸುವುದು ತುಂಬಾ ಒಳ್ಳೆಯದು.
• ಪ್ರತಿದಿನ ಬೆಳಿಗ್ಗೆ ಒಂದು ಕಪ್ ಯೋಗರ್ಟ್(Yogurt) ಸೇವಿಸಿದರೆ ಒಳ್ಳೆಯದು.
• ಸೀಗಡಿ ಮೀನು(Prawns) ಕೂಡ ಥೈರಾಯ್ಡ್ ಸಮಸ್ಯೆ ಇರುವವರಿಗೆ ಅತ್ಯುತ್ತಮವಾದ ಆಹಾರವಾಗಿದೆ.
• ಥೈರಾಯ್ಡ್ ಸಮಸ್ಯೆ ಇರುವವರು ಸೆಲೆನಿಯಮ್, ರಂಜಕ ಮತ್ತು ವಿಟಮಿನ್ ಬಿ 12(Vitamin B 12) ಪೋಷಕಾಂಶಗಳಿರುವ ಆಹಾರವನ್ನು ಸೇವಿಸಬೇಕು.

ಯಾವ ಆಹಾರಗಳು ಒಳ್ಳೆಯದಲ್ಲ :
• ಸಂಸ್ಕರಿಸಿದ ಆಹಾರ ಪದಾರ್ಥಗಳು
• ಸೋಯಾ ಗೋಧಿ
• ಅತಿಯಾದ ಮಾಂಸ
• ಅತಿಯಾದ ಸಕ್ಕರೆ ಅಂಶವಿರುವ ಪದಾರ್ಥಗಳು
• ಸಕ್ಕರೆ ಅಂಶ ಇರುವ ಆಹಾರ
• ಕರಿದ ಕುರುಕುಲು ತಿಂಡಿಗಳು

Exit mobile version